ಮುಂಬಯಿ ಬಂದ್ ಕರೆ ಹಿಂದಕ್ಕೆ
ಮುಂಬಯಿ 25: ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಮರಾಠ ಕ್ರಾಂತಿ ಮೋಚರ್ಾ ನೀಡಿದ್ದ ಮುಂಬಯಿ ಬಂದ್ ಕರೆಯನ್ನು ಹಿಂಪಡೆದುಕೊಂಡಿದೆ.
ಮಹಾರಾಷ್ಟ್ರ ಬಂದ್ನ ಎರಡನೇ ದಿನವಾದ ಇಂದು ರೈಲು, ವಾಹನಗಳ ಓಡಾಟ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ತೀವ್ರವಾಗಿ ಬಾಧಿತವಾದವು. ಇಂದು ಬೆಳಗ್ಗೆ ದುಷ್ಕಮರ್ಿಗಳು ಮನ್ಖುರ್ದ್ ನಲ್ಲಿ ಕಲ್ಲೆಸೆತ ನಡೆಸಿ ಬಸ್ಸಿಗೆ ಬೆಂಕಿ ಹಚ್ಚಿದರು.
ಕೇಂದ್ರ ಸಚಿವರಾಗಿರುವ ರಿಪಬ್ಲಿಕನ್ ಪಕ್ಷದ ನಾಯಕ ರಾಮದಾಸ ಅಠಾವಳೆ ಅವರು ಪ್ರತಿಭಟನಕಾರರನ್ನು ಬೆಂಬಲಿಸಿದರಾದರೂ ಶಾಂತಿಯುತವಾಗಿ ತಮ್ಮ ಧ್ವನಿ ಎತ್ತುವಂತೆ ಮನವಿ ಮಾಡಿಕೊಂಡರು. ಈಗಿನ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.70ಕ್ಕೆ ಏರಿಸಲು ಸಂಸತ್ತಿನಲ್ಲಿ ನಾವು ಕಾನೂನು ರೂಪಿಸಬೇಕಾಗಿದೆ ಎಂದವರು ಪ್ರತಿಭಟನಕಾರರಿಗೆ ಮನವರಿಕೆ ಮಾಡಿದರು.
ಬಾಂದ್ರಾದಲ್ಲಿಂದು ಪ್ರತಿಭಟನಕಾರರು ಅಂಗಡಿದಾರರ ಮುಂದೆ ಕೈಜೋಡಿಸಿ ಬಂದ್ ಮಾಡಿರೆಂದು ವಿನಂತಿಸಿದರು. ಆದರೆ ಮರಾಠಾ ಕ್ರಾಂತಿ ಮೋಚರ್ಾ ಕಾರ್ಯಕರ್ತರು ಕೆಲವೆಡೆ ಬಲವಂತದಿಂದ ಅಂಗಡಿ, ಹೊಟೇಲುಗಳನ್ನು ಮುಚ್ಚಿಸುತ್ತಿದ್ದರು.
ಇಂದು ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿರುವ ಮರಾಠ ಮೀಸಲಾತಿ ಚಳವಳಿ ಇನ್ನಷ್ಟು ತೀವ್ರತೆಯನ್ನು ಕಂಡಿದೆ. ಇಂದು ಬೆಳಗ್ಗೆ ಮತ್ತೋರ್ವ ಪ್ರತಿಭಟನಕಾರ ಜಗನ್ನಾಥ ಸೋನವಾನೆ ಎಂಬವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸೋನವಾನೆ ಸಾವನ್ನು ಅನುಸರಿಸಿ ಕೋಪೋದ್ರಿಕ್ತರಾಗಿರುವ ಪ್ರತಿಭಟನಕಾರರು ಮುಂಬಯಿಯಲ್ಲಿ ಮಾತ್ರವಲ್ಲದೆ ಇನ್ನೂ ಹಲವು ಕಡೆಗಳಲ್ಲಿ ರಸ್ತೆಗಳನ್ನು ಬ್ಲಾಕ್ ಮಾಡಿ ವಾಹನಗಳ ಸಂಚಾರವನ್ನು ತಡೆದಿದ್ದಾರೆ.
ಮೊನ್ನೆ ಸೋಮವಾರ ಮೀಸಲಾತಿ ಪ್ರತಿಭಟನಕಾರ ಕಾಕಾಸಾಹೇಬ್ ಶಿಂಧೆ ಔರಂಗಾಬಾದ್ ಸಮೀಪ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮರಾಠ ಸಮುದಾಯದವರು ತಮಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಆಂದೋಲನ ನಡೆಸುತ್ತಿದ್ದಾರೆ.
ಆತ್ಮಾಹುತಿ ಮಾಡಿಕೊಂಡಿರುವ ಕಾಕಾಸಾಹೇಬ್ ಶಿಂಧೆ ಮತ್ತು ಜಗನ್ನಾಥ ಸೋನವಾನೆ ಅವರಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದೂ ಮರಾಠ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಮರಾಠ ಕ್ರಾಂತಿ ಸಮಾಜ ಇಂದು ಬುಧವಾರ ಶಾಂತಿಯುತ ಬಂದ್ಗೆ ಕರೆ ನೀಡಿದೆ. ಪ್ರತಿಭಟನಕಾರರು ಮುಂಬಯಿ ಬಂದ್ಗೆ ಕರೆ ನೀಡಿದ್ದಾರೆ.
ನಿನ್ನೆಯ ಆಂದೋಲನ ಹಿಂಸೆಗೆ ತಿರುಗಿದ ಪರಿಣಾಮವಾಗಿ ಕಲ್ಲೆಸೆತಕ್ಕೆ ಗುರಿಯಾಗಿ ಓರ್ವ ಕಾನ್ಸ್ಟೆಬಲ್ ಮೃತಪಟ್ಟು ಇತರ 9 ಮಂದಿ ಪೊಲೀಸರು ಗಾಯಗೊಂಡಿದ್ದರು. ಮೂವರು ಪ್ರತಿಭಟನಕಾರರು ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸ್ ಮತ್ತು ಇತರ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 