ಮುಂಬೈ: ಮಾಸ್ಕ್ ಧರಿಸದಿದ್ದರೆ 1000 ರೂಪಾಯಿ ದಂಡ...

ಮುಂಬೈ ಜೂನ್  30 : ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ  ಅಟ್ಟಹಾಸ ಮುಂದುವರೆದಿದ್ದು, ಮುಂಬೈ ನಗರದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ  ಸದ್ಯ ಸೋಂಕಿತರ ಸಂಖ್ಯೆ 76,765 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಕೊರೊನಾ  ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ನು ಮುಂದೆ  ಮಾಸ್ಕ್ ಧರಿಸದಿದ್ದರೆ 1000 ರೂಪಾಯಿ  ದಂಡ ವಿಧಿಸಲು ಮುಂದಾಗಿದೆ. ಬಿಎಂಸಿ ಈ ಕುರಿತು ಆದೇಶ ಹೊರಡಿಸಿದ್ದು, ಮಾಸ್ಕ್ ಧರಿಸದವರಿಗೆ ಹಾಕುತ್ತಿದ್ದ ದಂಡದ ಮೊತ್ತವನ್ನು 1000 ರೂ.ಗಳಿಗೆ ಏರಿಸಲಾಗಿದೆ  ಪೊಲೀಸರಿಗೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ದಂಡ ಹಾಕಲು ಅನುಮತಿ ನೀಡಲಾಗಿದೆ. ಬಿಎಂಸಿ ಸಹಾಯಕ ಆಯುಕ್ತರು ಹಾಗೂ ಪೊಲೀಸರಿಗೆ ವಿವಿಧ ವಾರ್ಡ್ ಗಳಲ್ಲಿ ಮಾಸ್ಕ್ ಹಾಕದವರಿಗೆ 1000 ರೂ. ದಂಡ ವಿಧಿಸುವ ಅಧಿಕಾರವನ್ನೂ ನಿಡಲಾಗಿದೆ.