ಕಿನ್ನಾಳ ಗ್ರಾಮದಲ್ಲಿ ಬಹು ಭಾಷಾ ಶಾಯರಿ ಕವಿಗೋಷ್ಠಿ- ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿ

ಕಿನ್ನಾಳ ಗ್ರಾಮದಲ್ಲಿ ಬಹು ಭಾಷಾ ಶಾಯರಿ ಕವಿಗೋಷ್ಠಿ- ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿ Multilingual poetry gathering and musical program in Kinnal village a success

ಕೊಪ್ಪಳ 16: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ನಿಮಿಷಾಂಬ ಪ್ರಕಾಶನ, ಶ್ರೀ ನಿಮಿಷಾಂಬ ಆರ್ಟ್ಸ ಗ್ಯಾಲರಿ ಕಿನ್ನಾಳ ವತಿಯಿಂದ ಸುಜ್ಞಾನ ದೀವಿಗೆ ತ್ರೈಮಾಸಿಕ ಸರಣಿ ಕಾರ್ಯಕ್ರಮ ಅಂಗವಾಗಿ  ಗ್ರಾಮದ ಕೊಪ್ಪಳ ರಸ್ತೆಯಲ್ಲಿರುವ ಗ್ರಾಮದ ಸ್ವಾಗತ ಕಮಾನ್ ಹತ್ತಿರ ಇರುವ ಹಸನ್ಮುಖಿ ನಿಲಯದ ಆವರಣ ದಲ್ಲಿ  ರವಿವಾರ ದಂದು ಬಹುಭಾಷಾ ಶಾಯಿರಿ ಕವಿಗೋಷ್ಠಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಸಂಘಟಕರಾದ ಶಿಕ್ಷಕ ಪ್ರಕಾಶಕ  ಶ್ರೀನಿವಾಸ್ ಚಿತ್ರಗಾರ ರವರು ಏರಿ​‍್ಡಸಿದ ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಂಡರಗಿ ಅನ್ನದಾನಿಶ್ವರ ಶಾಖಾ ಮಠ ಕುಕನೂರಿನ ಪರಮಪೂಜ್ಯ ಡಾ, ಮಹಾದೇವ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು,ಸಿರಿಗನ್ನಡ ವೇದಿಕೆ ರಾಜ್ಯ ಅಧ್ಯಕ್ಷ ಜಿ.ಎಸ್‌. ಗೋನಾಳ ರವರ ಅಧ್ಯಕ್ಷತೆಯಲ್ಲಿ ಕಿನ್ನಾಳ ಗ್ರಾಮ ಹಿರಿಯರಾದ ವೆಂಕಟೇಶ್ವರ ರಾವ್ ದೇಸಾಯಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು, ಗದುಗಿನ ಸಾಹಿತಿ ಮರಳುಸಿದ್ದಪ್ಪ ದೊಡ್ಡಮನಿ ಯವರು ಶಾಯಿರಿ ಸಾಗಿ ಬಂದ ದಾರಿ ಒಂದು ಪಕ್ಷಿ ನೋಟ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮತ್ತು ತಮ್ಮ ಕವನ ಮತ್ತು ಶಾಯರಿ ವಾಚನ ಮಾಡಿದರು, ಮುಖ್ಯ ಅತಿಥಿಗಳಾಗಿ ಹಿರಿಯರು ಹಾಗೂ ವೇದಿಕೆಯ ಗೌರವ ಅಧ್ಯಕ್ಷ ಎಂ, ಬಿ ಅಳವಂಡಿ, ಕ ಸಾ ಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೊಜಿ ಮತ್ತು ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಮೈಸೂರಿನ ಹಿರಿಯ ಸಮಾಜ ಸೇವಕ ತಾಹಿರ್ ಅಲಿ, ಅಲ್ಲದೆ ಕಿನ್ನಾಳ ಗ್ರಾಮದ ಹಿರಿಯರಾದ ಮತ್ತು ಸಮಾಜದ ಅಧ್ಯಕ್ಷರಾದ ಪರಶುರಾಮ್ ಚಿತ್ರಗಾರ, , ಅಲ್ಲದೆ ಕೊಪ್ಪಳದ ಹಿರಿಯ ಉರ್ದು ಸಾಹಿತಿ  ಶಮೀಮುನ್ನಿಸಾ ಬೇಗಠ ಹುನುಗುಂದ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು, ವೀರಭದ್ರ​‍್ಪ ಶಿವ ಸಿಂಪಿ ಮಾದಿನೂರು ಮತ್ತು ನಾಮದೇವ್, ಚಿತ್ರಗಾರ್ ಕಿನ್ನಾಳರವರು ಸುಗಮ ಸಂಗೀತ ಕಾರ್ಯಕ್ರಮ ನೀಡಿ ಜನಮನ ರಂಜಿಸಿದರು ಶಾಯರಿ ಗೋಷ್ಠಿಯಲ್ಲಿ ಕವಿಗಳಾದ  ಕೊಪ್ಪಳದ ಹಿರಿಯ ಉರ್ದು ಸಾಹಿತಿ ಮತ್ತು ಕವಿ ಅನ್ವರ್ ಹುಸೇನ್, , ಈರ​‍್ಪ ಬಿಜಲೀ, ಕೊಟ್ರೇಶ್ ಜವಳಿ  ಯಾಸ್ಮಿನ್ ಬೇಗಮ್ ಮತ್ತು ಅಜೀಮಾ ಬೇಗಂ ರವರುಗಳು ಪಾಲ್ಗೊಂಡು ತಮ್ಮ ಕನ್ನಡ ಮತ್ತು ಉರ್ದು ಕವನ ವಾಚನ ಮಾಡಿದರು.

ಕಾರ್ಯಕ್ರಮ ಸಂಘಟಕರಾದ ಶ್ರೀ ನಿಮಿಷಾಂಬ ಪ್ರಕಾಶನದ ಮುಖ್ಯಸ್ಥ ಶ್ರೀನಿವಾಸ ಚಿತ್ರಗಾರ, ಶ್ರೀ ನಿಮಿಷಾಂಬ ಆರ್ಟ್‌ ಗ್ಯಾಲರಿ ಸಂಚಾಲಕಿ ಶ್ರೀಮತಿ ವಿದ್ಯಾವತಿ ಚಿತ್ರಗಾರ ಹಾಗೂ ಯುವ ಸಂಘಟಕರಾದ ಭಾಸ್ಕರ್ ರಾವ್ ಚಿತ್ರಗಾರ ಸಾಹಿತಿ ಹಾಗೂ ಉಪ ಪ್ರಚಾರ್ಯರಾದ ಮಂಜುನಾಥ್ ಚಿತ್ರಗಾರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು, ಕವನ ವಾಚನ ಮಾಡಿದ ಎಲ್ಲಾ ಕವಿಗಳಿಗೆ ಸಂಘಟಕ ರಿಂದ ಪ್ರಮಾಣ ಪತ್ರ ವಿತರಣೆ ಮಾಡಿ ಸನ್ಮಾನಿಸಲಾಯಿತು ಇದೇ ವೇಳೆ  ಕಿನ್ನಾಳಗ್ರಾಮದ ಹೆಮ್ಮೆಯ ನಿವೃತ್ತ ಸೈನಿಕ ಹಾಲೇಶ್ ಬನ್ನಿಕೊಪ್ಪ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣಪ್ಪ ಚಿತ್ರಗಾರ ಅವರನ್ನು ಸಹ ಸತ್ಕರಿಸಲಾಯಿತು,ಹಾಗೂ ವೇದಿಕೆ ಮೇಲಿದ್ದ ಗಣ್ಯರೆಲ್ಲರಿಗೂ ಸಹ ಸನ್ಮಾನಿಸಿ ಅಭಿನಂದಿಸಲಾಯಿತು,