ಮೊಹರಂ ಹಬ್ಬವು ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯತೆ ಸಾರುವ ಹಬ್ಬ : ಶಾಸಕ ಪಠಾಣ
Muharram festival is a festival that expresses the unity of the Hindu Muslim community: MLA Pathana
ಶಿಗ್ಗಾವಿ 27 : ಮೊಹರಂ ಹಬ್ಬವು ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯತೆಯನ್ನು ಸಾರುವ ಹಬ್ಬವಾಗಿ ಪರಿಣಮಿಸಿದೆ ಕೆಲವೊಂದು ಗ್ರಾಮಗಳಲ್ಲಿ ಮುಸ್ಲಿಮರೆ ಇಲ್ಲ ಅಂತ ಗ್ರಾಮಗಳಲ್ಲಿ ಹಿಂದುಗಳೇ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ ಇದರಿಂದ ಮೊಹರಂ ಹಬ್ಬ ವಿಶೇಷ ಅರ್ಥವನ್ನು ಪಡೆದುಕೊಂಡಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ವಿವಿಧ ಗಲ್ಲಿಗಲ್ಲಿಗಳಲ್ಲಿ ಆಲೆ ದೇವರುಗಳ ದರ್ಶನ ಪಡೆದು ಮೊಹರಂ ಹಬ್ಬ ಆಚರಣೆ ಕುರಿತು ಮಾತನಾಡಿದ ಅವರು ಮೊಹರಂ ಹಬ್ಬವನ್ನು ತ್ಯಾಗ ಬಲಿದಾನ ಸಂಕೇತವಾಗಿ ಆಚರಿಸುತ್ತಾರೆ ಈ ಹಬ್ಬವು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಅನುಯಾಯಿಗಳು ಕರ್ಬಾಲಾ ಯುದ್ಧದಲ್ಲಿ ಧರ್ಮದ ಉಳಿವಿಗಾಗಿ ವೀರಮರಣ ಒಪ್ಪಿದ ದಿನವಾಗಿ ಆಚರಿಸುತ್ತಾರೆ ಎಂಬ ಇತಿಹಾಸ ಇದೆ.
ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಸಹ ಶ್ರದ್ಧಾಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಶೇಖಪ್ಪ ಮಣಕಟ್ಟಿ, ಚಂದ್ರು ಕೊಡ್ಲಿವಾಡ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಜಾಫರಖಾನ ಪಠಾಣ, ಅಂಜುಮನ್ ಸಮಿತಿಯ ಮೌಲಾಲಿ ದೊಡ್ಡಮನಿ, ಖಾಜಾಮೋದಿನ ಚೂಡಿಗಾರ, ಅಪ್ತಾಬಹುಸೇನ ಕಳಸ, ಮೊಹಮ್ಮದ್ ಜಾಫರ ನೀರಮನಿ, ಖಾಜಾಮೈನುದ್ದೀನ ಶ್ಯಾಬಾಳ, ಲಿಯಾಖತ ಬಮ್ಮೀಗಟ್ಟಿ, ಸಲೀಂ ಅಹ್ಮದ ಪರೋಖಿ, ಅಬ್ದುಲ್ ರೆಹಮಾನ್ ತೌಕಲ್ಲಿ, ಅಜೀಮಖಾನ ನಾಗಡ, ಸಾಧಿಕ ಸವಣೂರ , ಹಜರತಲಿ ಚೂಡಿಗಾರ, ಸಾಧಿಕ ಮಲ್ಲೂರ, ಅಹ್ಮದಭಾಷಾ ಗುಲಾಮುದ್ದೀನ, ನಜೀರ ನೀರಮನಿ, ಮುನ್ನಾ ಬಿಸ್ತಿ, ಅಸೀಫ ಕಣವಿ, ಸರತರಾಜ ಹಾನಗಲ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 