ಬಟ್ಟೂರು ಗ್ರಾಮದಲ್ಲಿ ಮೊಹರಂ ಹಬ್ಬದ ಸಡಗರ

ಬಟ್ಟೂರು ಗ್ರಾಮದಲ್ಲಿ ಮೊಹರಂ ಹಬ್ಬದ ಸಡಗರ  Muharram festival in Battur village

ಲಕ್ಷ್ಮೇಶ್ವರ   29: ನಮ್ಮ ಹಿಂದಿನ ಪೂರ್ವಜರು ಎಲ್ಲ ಜನಾಂಗದ ಜನರು ಬಿಡುವಿಲ್ಲದೆ ದುಡಿಯುವ ಮನಸ್ಸಿಗೆ ಆನಂದ ಸಂತೋಷ ಹೊಸ ಉತ್ಸಾಹ ಮೂಡಲಿ ಎಂಬ ಉದ್ದೇಶದಿಂದ ಹಬ್ಬಗಳನ್ನು ನಿರ್ಮಾಣ ಮಾಡಿ ಹೋಗಿದ್ದಾರೆ ಅವುಗಳನ್ನು ಆಚರಿಸುವ ಮೂಲಕ ಎಲ್ಲಾ ಜನಾಂಗದವರು ಪ್ರೀತಿ ವಿಶ್ವಾಸದಿಂದ ಬದುಕುವುದೇ ಜೀವನವಾಗಿದೆ ಅದರಂತೆ ತಾಲೂಕಿನ ಭಾವೈಕ್ಯತೆಗೆ ಹೆಸರಾದ ಬಟ್ಟೂರು ಗ್ರಾಮದಲ್ಲಿ ಮೊಹರಂ ಹಬ್ಬದ ಮೂರನೆಯ ದಿನದ ಜಾಥಾವನ್ನು ಗ್ರಾಮದಲ್ಲಿ ಸಡಗರದೊಂದಿಗೆ ಆಚರಿಸಿದರು.

  ಗ್ರಾಮದ ನೂರಾನಿ ಮಸೂದೆಯ ಅಲೆ ದೇವರಿಗೆ ಮೊಹರಂ ಮೂರನೇ ದಿನದ ಜಾಥಾದ ನಿಮಿತ್ಯ ಗದ್ದಿಗೆಗೆ ವಿಶೇಷ ಪ್ರಾರ್ಥನೆ ಓದಿಕೆಗಳು ನಡೆದವು ಗ್ರಾಮದ ಯುವಕರೆಲ್ಲರೂ ಸೇರಿ ರಾತ್ರಿ ಎನ್ನದೆ ಮೂರನೆಯ ದಿನದ ಜಾಥಾ ಮೆರವಣಿಗೆಯಲ್ಲಿ ಒಗ್ಗಟ್ಟಾಗಿ ಹೆಜ್ಜೆ ಮೇಳ ಹಾಕಿ ಸಂಭ್ರಮಿಸಿದರು ಹಾಗೂ ಗ್ರಾಮದ ಮೊಹರಂ ಹಾಡು ಹೆಜ್ಜೆ ಮೇಳಕ್ಕೆ ಪ್ರೋತ್ಸಾಹಿಸಿದ ಗ್ರಾಮದ ರವಿ ತಳವಾರ ಬಸವರಾಜ ಬರದೂರ,ಸಣ್ಣಗುಡ್ಡಪ್ಪ ಗೂರಣ್ಣವರ ರಮೇಶ ಗೂರಣ್ಣವರ ಅವರನ್ನು ಸನ್ಮಾನಿಸಲಾಯಿತು ನೂರಾನಿ ದರ್ಗಾ ಕಮಿಟಿ ಯವರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಮಹಾಪ್ರಸಾದವನ್ನು ಏರಿ​‍್ಡಸಿದ್ದರು ಎಲ್ಲರೂ ಪ್ರಸಾದ ಸ್ವೀಕರಿಸಿ ಮೊಹರಂ ಮೂರನೆಯ ದಿನದ ಜಾಥಾದ ಹಬ್ಬವನ್ನು ಸಂಭ್ರಮ ಸಡಗರೊಂದಿಗೆ ಆಚರಿಸಿದರು