ತಡವಲಗಾದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ

ತಡವಲಗಾದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ Muharram celebrated with grandeur in Tadawalaga


ಲೋಕದರ್ಶನ ವರದಿ 

 ಇಂಡಿ 26 : ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಾಗೂ ಏಕತೆಯ ಮೊಹರಂ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಬ್ಬದ ಅಂಗವಾಗಿ ಸಮುದಾಯದವರು ಸೇರಿ  ಸಾಮೂಹಿಕವಾಗಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪ್ರತಿ ವರ್ಷ ಅಮಾವಾಸ್ಯೆಯ ಆದ ಮರುದಿನ ಚಂದ್ರಾಮ ಕಾಣುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಗ್ರಾಮಗಳಲ್ಲಿ ಇರುವ ಮಸೀದಿಗಳ ಮುಂಬಾಗದಲ್ಲಿ ಗುದ್ದಲಿಗಳನ್ನು ಮುಂಚಿ ಇಡುತ್ತಾರೆ. ಮರು ದಿನ ಸಮುದಾಯದ ಜನರು ಸೇರಿ ಫಂಜೆ ಹಾಗೂ ಡೊಲಗಳನ್ನು ಕೂಡಿಸುತ್ತಾರೆ. ಹಾಗೂ ವಿವಿಧ ಬಗೆಯ ಕಾಗದ ಬಣ್ಣಗಳಿಂದ ಅಲಂಕರಿಸಿ ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜ್ಯಸುತ್ತಾರೆ. ಹತ್ತನೇ ದಿವಸ ಗ್ರಾಮದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಸಿಹಿ ಅಡುಗೆಯನ್ನು (ಮಾದಲಿ) ಮಾಡಿ ನೆವಿಧ್ಯವನ್ನು ದೇವರಿಗೆ ಅರ​‍್ಿಸುತ್ತಾರೆ.ಹನ್ನೋಂದನೆ ದಿವಸ ಗ್ರಾಮದ ಎಲ್ಲಾ ಸರ್ವ ಜನರು ಸೇರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ. 

ಎಲ್ಲಾ ಡೋಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಯುವಕರು ಕುಣಿಯುತ್ತಾ ಹೆಜ್ಜೆಮೇಳವನ್ನು ಆಡುತ್ತಾ ಹಾಗೂ ಮಹಿಳೆಯರು ನಿಂಬೆ ಹಣ್ಣು ಕಬ್ಬು ಖಾರೀಖ ಬಾದಾಮಿ ಚೂರಮೂರಿಯನ್ನು  ಆ ಡೋಲಿನ ಮೇಲೆ ಹಾರಿಸುತ್ತಾ ಗ್ರಾಮದ ಹೋರವಲಯದಲ್ಲಿ ಇರುವ ಊರ ಹಳ್ಳಕ್ಕೆ ಹೋಗುತ್ತಾರೆ.ಅಲ್ಲಿ ವರ್ಷದ ಮಳೆ ಬೆಳೆಯ ಬಗ್ಗೆ ಹೇಳಿಕೆಗಳನ್ನು ಆಗುತ್ತದೆ.ನಂತರ ಹಳ್ಳದ ದಡದಲ್ಲಿ ಡೋಲುಗಳಿಗೆ ಹಿಂದೂ -ಮುಸ್ಲಿಂ ಸಮುದಾಯದವರು ಸೇರಿ ಪೂಜೆ ಸಲ್ಲಿಸಿ.ಎಲ್ಲಾ ಗೋಲುಗಳನ್ನು ಮತ್ತೆ ಗ್ರಾಮದ ಮೂಲ ಮಸೀದಿಗಳಿಗೆ ಕರೆ ತರುತ್ತಾರೆ.ಇದು  ಆದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗುರ​‍್ಪ ಸಾತಲಿಂಗಪ್ಪ ಇಂಡಿಯವರು ಹೇಳಿದರು.ಈ ಬಾರಿ ಮೊಹರಂ ಹಬ್ಬದ ಶಾಂತಿಯುತವಾಗಿ ನುಡಿಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ಅನೀತಾ ರಾಠೋಡ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಪೋಲಿಸ್  ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.