ಪೊಲೀಸ್ ಇಲಾಖೆಯ ತೆರೆದ ಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಧೋಳ ಎಸ್‌.ಆರ್‌.ಕಂಠಿ

ಪೊಲೀಸ್ ಇಲಾಖೆಯ ತೆರೆದ ಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಧೋಳ ಎಸ್‌.ಆರ್‌.ಕಂಠಿ Mudhola S.R. Kanthi participated in the open house program of the police department

ಲೋಕದರ್ಶನ ವರದಿ 

 ಮುಧೋಳ 25 : ಪೊಲೀಸ್ ಎಂದರೆ ಭಯ ಬೇಡ, ಪೊಲೀಸ್ ರ ಮೇಲೆ ಭರವಸೆ ಇರಲಿ. ಪೊಲೀಸ್ ರು ಸಾರ್ವಜನಿಕರ ಸಹಕಾರಿಂದ ಕಾನೂನು ರಕ್ಷಣೆ ಮಾಡಲು ಸಾಧ್ಯ. ಇದರಲ್ಲಿ ಮಕ್ಕಳು ಕೂಡಾ ಹೊರತಾಗಿಲ್ಲ, ಅನಾವಶ್ಯಕವಾಗಿ ಪೊಲೀಸ್ ರ ಮೇಲೆ ತಪ್ಪು ಕಲ್ಪನೆಯ ಮನೋಭಾವನೆ ಬೆಳೆಸಿಕೊಳ್ಳಬೇಡಿ ಎಂದು ಜಮಖಂಡಿ ಡಿವೈಎಸ್ಪಿ ಸೈಯ್ಯದ ರೋಷನ್ ಜಮೀರ್ ಹೇಳಿದರು. ಮುಧೋಳ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಬಿ.ಎ ಪ್ರಥಮ, ದ್ವಿತೀಯ, ತೃತೀಯ ವರ್ಷದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಶನಿವಾರ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಮಖಂಡಿ ಡಿವೈಎಸ್ಪಿ ಸೈಯ್ಯದ ರೋಷನ್ ಜಮೀರ್ ಅವರು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ತೆರೆದ ಮನೆ ಕಾರ್ಯಕ್ರಮದ ದ್ಯೆಯ ಧೋರಣೆ ಕುರಿತು ವಿವರಿಸಿದರು. ಮಕ್ಕಳಲ್ಲಿ ಪೊಲೀಸ್ ಎಂದರೆ ಸಾಮಾನ್ಯ ವಾಗಿ ಭಯವಿರುತ್ತದೆ, ಇಂಥ ಭಯವನ್ನು ಹೋಗಲಾಡಿಸಿ, ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ರಕ್ಷಣೆಯ ಅವಶ್ಯಕತೆ ಇದ್ದಾಗ ಪೊಲೀಸ್ ರ ಸಹಾಯ ಪಡೆಯಲು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಇಲಾಖೆಯು ಸದಾ ಕಾಲ ಸನ್ನದ್ಧವಾಗಿರುತ್ತದೆ ಎಂದರು. 

ಮುಧೋಳ ಸಿಪಿಐ ಎಮ್‌.ನಾಗರಡ್ಡಿ ಮಾತನಾಡಿ ಸಂಚಾರ ನಿಯಮಗಳ ಪಾಲನೆ, ಅವುಗಳ ಉಲ್ಲಂಘನೆಯಿಂದ ಎದುರಿಸಬೇಕಾದ ದಂಡ ಹಾಗೂ ಶಿಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಸರಗಳ್ಳ, ಸೈಬರ್ ರೂ ಕ್ರೈಂ ಮತ್ತಿತರ ವಿಚಾರಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಪೊಲೀಸ್  ಸಹಾಯವಾಣಿಗೆ ತಾವು ಕರೆ ಮಾಡಬಹುದು, ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಗುರಿಯಿಟ್ಟುಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು, ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು, ತಮ್ಮ ಪಾಲಕರಿಗೂ ಈ ಬಗ್ಗೆ ತಿಳಿಸಿಕೊಡಬೇಕೆಂದು ಸಲಹೆ ನೀಡಿದರು. 

ಪಿಸಿಐ ಅಜೀತಕುಮಾರ ಹೊಸಮನಿ ಮತನಾಡಿ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಲು "ತೆರೆದ ಮನೆ'' ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಕಾನೂನು ಅರಿವು, ಮಾನವೀಯ ಮೌಲ್ಯಗಳ ಅಳವಡಿಕೆ ಅತ್ಯಗತ್ಯ. ತಾನು ತಪ್ಪು ಮಾಡದೆ, ಇನ್ನೊಬ್ಬರು ತಪ್ಪು ಮಾಡದಂತೆ ಕಾನೂನು ಚೌಕಟ್ಟಿನಲ್ಲಿ ಇರುವುದು ಎಲ್ಲರ ಜವಾಬ್ದಾರಿಯಾಗಿದೆ.

ಸಮಾಜವನ್ನು ಶಾಂತ ರೀತಿಯಿಂದ ಇಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವಂತಾಗಬೇಕು.  ಈ ನಿಟ್ಟಿನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾನೂನು ಮತ್ತು ಸುವ್ಯವಸ್ಥೆ ಕುರಿತು ತಿಳಿದುಕೊಳ್ಳಬೇಕು, ಇಲ್ಲದಿದ್ದರೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಅವಸರದಲ್ಲಿ ಸುದ್ದಿ ಬರೆಯದೆ ಘಟನೆಗೆ ಸಂಬಂಧಿಸಿರುವದರಿಂದ ಖಚಿತ ಮಾಹಿತಿ ಪಡೆದು ಕೊಳ್ಳಬೇಕು, ಸಮಾಜದ ಸ್ವಾಸ್ಥ-್ಯ ಕಾಪಾಡುವಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಇದೆ ಎಂದರು. 

ಪ್ರೊಬೇಷನಲ್ ಪಿಎಸ್‌ಐ ರಮೇಶ ಬಿಳಗುಂದಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಪೊಲೀಸ್ ಇಲಾಖೆಯ ವ್ಯೆವಸ್ಥೆ ಮತ್ತು ಜವಾಬ್ದಾರಿ ಕುರಿತು ಮಾಹಿತಿ ನೀಡಿದರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪೊಲೀಸ್ ಕಾನೂನು ಮತ್ತು ನಿಯಮಗಳನ್ನು ತಿಳಿಸಿಕೊಟ್ಟರು. ಎಎಸ್‌ಐ ಶಿವಪ್ಪ ಶಾಬಾದಿ, ಹವಾಲ್ದಾರ ಪದ್ಮಾವತಿ ಅಗಸರ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಪತ್ರಿಕೋದ್ಯಮದ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಇದ್ದರು. ಪತ್ರಿಕೋದ್ಯಮದ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು,