ಮುದ್ದೇಬಿಹಾಳ-ತಾರನಾಳ ರಸ್ತೆ ಕಾಮಗಾರಿ ಮಾರುತಿನಗರದಿಂದ ಪ್ರಾರಂಭಿಸಲು ಮನವಿ


ಮುದ್ದೇಬಿಹಾಳ:ಪಟ್ಟಣದ ಮಾರುತಿನಗರದ ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಪ್ರಾರಂಭಿಸಲಾಗಿರುವ ರು.50 ಲಕ್ಷ ವೆಚ್ಚದ ಮುದ್ದೇಬಿಹಾಳ-ತಾರನಾಳ ರಸ್ತೆ ಕಾಮಗಾರಿಯನ್ನು ಮಾರುತಿನಗರದ ಈಳಗೇರ ಅವರ ಮನೆಯಿಂದ ಪ್ರಾರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಾರುತಿನಗರದ ಪ್ರಮುಖರು ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳನ್ನು, ಸ್ಥಳಿಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗಾರರನ್ನು ಸ್ಥಳಕ್ಕೆ ಕರೆಸಿ ವಸ್ತುಸ್ಥಿತಿ ವಿವರಿಸಿದ ಈ ಮುಖಂಡರು, ಈ ವಿಷಯದಲ್ಲಿ ಅಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಅರಿತುಕೊಂಡು, ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ರಸ್ತೆ ನಿಮರ್ಿಸುವುದರಿಂದ ಆಗುವ ಪ್ರಯೋಜನಗಳನ್ನು ಪ್ರಾಯೋಗಿಕವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಶಾಸಕ ಸಿ.ಎಸ್.ನಾಡಗೌಡ ಅವರ ಅಧಿಕಾರ ಅವಧಿಯಲ್ಲಿ ಮುದ್ದೇಬಿಹಾಳ-ತಾರನಾಳ ರಸ್ತೆಯನ್ನು ಹೊಸದಾಗಿ ನಿಮರ್ಿಸಲು ತೀಮರ್ಾನಿಸಿ ಇದಕ್ಕಾಗಿ ನಬಾಡರ್್ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದಾಗಿ ತಾರನಾಳಕ್ಕೆ ಢವಳಗಿ ಮೂಲಕ 18-20 ಕಿಮಿ ಸುತ್ತುಬಳಸಿ ಹೋಗುವ ಬದಲು ನೇರವಾಗಿ 10 ಕಿಮಿಯಲ್ಲೇ ತಾರನಾಳ ಸಂಪಕರ್ಿಸಬಹುದಾಗಿದೆ. 

ಪ್ರಾರಂಭಿಕ ಹಂತವಾಗಿ ಈ ರಸ್ತೆ ನಿಮರ್ಾಣಕ್ಕೆ ರು.1.20 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಇದೀಗ ರು.50 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಆ ಅನುದಾನದಲ್ಲಿ 1.20 ಕಿಮಿ ರಸ್ತೆ ನಿಮರ್ಿಸಲು ಟೆಂಡರ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೀಗ ಕಾಮಗಾರಿ ಗುತ್ತಿಗೆ ಹಿಡಿದಿರುವ ಮೂಲ ಗುತ್ತಿಗೆದಾರರು ಬೇರೊಬ್ಬರಿಗೆ ಕಾಮಗಾರಿ ಜವಾಬ್ಧಾರಿ ವಹಿಸಿಕೊಟ್ಟಿದ್ದಾರೆ. ಈ ಗುತ್ತಿಗೆದಾರರು ಮಾರುತಿನಗರದ ಈಳಗೇರ ಅವರ ಮನೆಯಿಂದ ಕಾಮಗಾರಿ ನಡೆಸುವ ಬದಲು ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದು ನಿರುಪಯುಕ್ತ ಮತ್ತು ಅವೈಜ್ಞಾನಿಕವಾಗಿದೆ ಎನ್ನುವುದನ್ನು ಪರಿಗಣಿಸಿ ಮಾರುತಿನಗರದ ಈಳಗೇರ ಅವರ ಮನೆಯಿಂದಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಲಾಗಿತ್ತು. ಇದಕ್ಕೆ ಈಗಿನ ಗುತ್ತಿಗೆದಾರರು ಒಪ್ಪಕೊಂಡಿದ್ದರು. ಆದರೆ ರಸ್ತೆ ಕಾಮಗಾರಿಗೆ ಸಾಮಗ್ರಿ ಪೂರೈಸುವ ಮೂರನೇ ವ್ಯಕ್ತಿಯೊಬ್ಬರು ಇದಕ್ಕೆ ತಕರಾರು ತೆಗೆದು ಇಲ್ಲದ ನೆಪ ಹೇಳಿ ಚೌಡಯ್ಯ ದೇವಸ್ಥಾನದಿಂದಲೇ ರಸ್ತೆ ಕಾಮಗಾರಿ ನಡೆಯುವಂತೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಈ ರಸ್ತೆ ಯಾವುದೇ ಒಂದು ಹಂತಕ್ಕೆ ಉಪಯುಕ್ತವಾಗುವುದಿಲ್ಲ. ಜನಸಂಚಾರ ಇಲ್ಲದೆಡೆ ರಸ್ತೆ ನಿಮರ್ಿಸಿ ನಿರುಪಯುಕ್ತಗೊಳಿಸಿದಂತಾಗುತ್ತದೆ ಎಂದು ತಿಳಿಸಿದರು.

ಸಧ್ಯದ ಕಾಮಗಾರಿ ಪ್ರಕಾರ ಚೌಡಯ್ಯ ದೇವಸ್ಥಾನದಿಂದ ಪ್ರಾರಂಭಗೊಳ್ಳುವ ರಸ್ತೆ ಬಿದರಕುಂದಿ-ಕುಂಟೋಜಿ ಕೂಡುರಸ್ತೆ ಪಕ್ಕದಲ್ಲಿರುವ ಮಲ್ಲಣ್ಣ ಹತ್ತಿ ಅವರ ದ್ರಾಕ್ಷಿ ತೋಟದ ಬಳಿ ಮುಕ್ತಾಯವಾಗುತ್ತದೆ. ದೇವಸ್ಥಾನದಿಂದ ಕೂಡುರಸ್ತೆವರೆಗೆ ರಸ್ತೆ ನಿಮರ್ಾಣಗೊಂಡಲ್ಲಿ ಜನರಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಮುದ್ದೇಬಿಹಾಳ-ತಾರನಾಳ ರಸ್ತೆ ಪ್ರಾರಂಭಗೊಳ್ಳುವುದು ಪಟ್ಟಣದ ಸರಹದ್ದು ಹೊರತುಪಡಿಸಿ ಗ್ರಾಮೀಣ ಸರಹದ್ದಿನಿಂದ. ಈ ಗ್ರಾಮೀಣ ಸರಹದ್ದು ಈಳಗೇರ ಅವರ ಮನೆಯಿಂದ ಪ್ರಾರಂಭಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ಜನರಿಗೆ ನಿರುಪಯುಕ್ತವಾಗಿರುವ, ಸಕರ್ಾರದ ಹಣ ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಡುವ ಈ ರಸ್ತೆ ಕಾಮಗಾರಿಯನ್ನು ಜನತೆ ತಕರಾರು ಮಾಡಿ ತಡೆ ಹಿಡಿದಿದ್ದಾರೆ. ತಾತ್ಕಾಲಿಕವಾಗಿ ಕಾಮಗಾರಿ ಬಂದ್ ಮಾಡಿಸಲಾಗಿದೆ. ಈ ಹಿಂದೆ ಮಾರುತಿನಗರ ಬಡಾವಣೆಯ ಜನರ ಸಮಸ್ಯೆಗೆ ಸ್ಪಂಧಿಸುವ ಭರವಸೆಯನ್ನು ಸ್ಥಳಿಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಈಡೇರಿಸುವ ಕಾಲ ಬಂದಿದೆ. ಈ ವಿಷಯದಲ್ಲಿ ಅವರು ಮಧ್ಯಪ್ರವೇಶಿಸಿ ಈಳಗೇರ ಅವರ ಮನೆಯಿಂದಲೇ ರಸ್ತೆ ಕಾಮಗಾರಿ ನಡೆಸುವಂತೆ ಸೂಚಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇದಕ್ಕಾಗಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲಿ ವಾಸ್ತವ ಸ್ಥಿತಿ ಗೊತ್ತಾಗುತ್ತದೆ. ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಮಲ್ಲಣ್ಣ ಹತ್ತಿ ಅವರ ತೋಟದವರೆಗೆ ರಸ್ತೆ ನಿಮರ್ಾಣಗೊಂಡಲ್ಲಿ ಯಾರಿಗೂ ಉಪಯೋಗವಿಲ್ಲ, ನಿರುಪಯುಕ್ತಗೊಂಡು ರಸ್ತೆ ಹಾಳಾಗುತ್ತದೆ ಎನ್ನುವುದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಪುರಸಭೆ ಸದಸ್ಯ ಮನೋಹರ ತುಪ್ಪದ ನೇತೃತ್ವದಲ್ಲಿ ಮಾರುತಿನಗರದ ಪ್ರಮುಖರಾದ ಹಣಮಂತ ಅಂಬಿಗೇರ, ಶಿವಪ್ಪ ಚಿಮ್ಮಲಗಿ, ವೀರಪ್ಪ ರಕ್ಕಸಗಿ, ಶಿವಕುಮಾರ ಚಟ್ಟೇರ, ಶಿವು ಚಿಂಚೊಳ್ಳಿ, ರುಕುಮುದ್ದೀನ್ ಕಾಶಿನಕುಂಟಿ, ಬಸವರಾಜ ಅಂಬಲಿ, ಶೇಖರಯ್ಯ ಅಕ್ಕಿಮಠ, ಹಣಮಂತ ಕೋಲಕಾರ, ಈರಯ್ಯ ಸ್ವಾಮಿ, ಮಾರುತಿ ಕುಲಕಣರ್ಿ, ಕಾಶಿಮ ನಾರಾಯಣಪೇಟ ಸೇರಿದಂತೆ ಹಲವರು ಇದ್ದರು.