ಮೌಂಟ್ ಕಾಮರ್ೆಲ್ ಶಾಲಾ ವಾಷರ್ಿಕೋತ್ಸವ

 ಲೋಕದರ್ಶನ ವರದಿ

ಹೂವಿನಹಡಗಲಿ 18:ಈ ತಂತ್ರಜ್ಞಾನ ಕಾಲಘಟ್ಟದಲ್ಲಿ ಮಕ್ಕಳನ್ನು ವೈಜ್ಞಾನಿಕವಾಗಿ ಬೆಳಸುವುದು ಅತ್ಯಂತ ಸರಳತೆಯಿಂದ ಕೂಡಿದೆ  ಚಿಕ್ಕ ಚಿಕ್ಕ ಮಕ್ಕಳು ತಾಂತ್ರಿಕವಾಗಿ ಎಲ್ಲಾ ಉಪಕರಣಗಳನ್ನು ತಾವೇ ನಿರ್ವಹಿಸುವ ಮಟ್ಟಿಗೆ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ತಹಶೀಲ್ದಾರ್ ಕೆ ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.

      ಪಟ್ಟಣದ ಸ್ಥಳಿಯ ಸೋಗಿ ರಸ್ತೆಯಲ್ಲಿರುವ ಮೌಂಟ್ ಕಾಮರ್ೆಲ್ ಶಾಲೆಯಲ್ಲಿ ಶಾಲಾ ವಾಷರ್ಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಪ್ರಾಥಮಿಕ ಶಿಕ್ಷಣ ವ್ಯಕ್ತಿಯ ಜೀವನದ ಕನ್ನಡಿ ಇದ್ದಂತೆ ಈ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರೇ ಆಧಾರ ಸ್ತಂಭ  ಶಾಲೆಯ ಪ್ರತಿ ಮಗುವನ್ನು ನಮ್ಮ ಮನೆಯ ಮಗು ಎಂದು ಭಾವಿಸಬೇಕು ಅದರಲ್ಲೂ ಸರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಜಾರಿಗೆ ತಂದು ಹಣ ವ್ಯಯಮಾಡುತ್ತಿದೆ ಸರ್ವರಿಗೂ ಶಿಕ್ಷಣ ಸಿಗಬೇಕು ಯಾರು ಶಿಕ್ಷಣದಿಂದ ವಂಚಿತರಾಗಬಾರದು ಚಚರ್್ನ ವಿದ್ಯಾ ಸಂಸ್ಥೆಗಳೆಂದರೆ ಶಿಸ್ತು ಸಂಯಮಕ್ಕೆ ಹೆಸರುವಾಸಿಯಾದವು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮೌಂಟ್ ಕಾಮರ್ೆಲ್ ಶಾಲೆ ಪ್ರಯತ್ನ ಪಟ್ಟು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯಲ್ಲಿಯೇ ಮಾದರಿಯಾಗಬೇಕು ಕಳೆದ ಸಾಲಿನಲ್ಲಿ ಫಲಿತಾಂಶ ಸುಧಾರಣೆಗೆ ತಾಲ್ಲೂಕು ಆಡಳಿತ ಶಿಕ್ಷಣ ಇಲಾಖೆಯೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ಇದರ ಫಲವಾಗಿ ಶೇ84 ರಷ್ಟು ಫಲಿತಾಂಶ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

  ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಸವರಾಜ್ ಎಂ ಶಿವಪುರ ಮಾತನಾಡಿ ಕಲಿಕೆಯ ವಿಧಾನಗಳು  ಮಕ್ಕಳ ಬೌದ್ದಿಕತೆಗೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು. ಕಲಿಕೆ ಸಂತೋಷದಿಂದ ಕೂಡಿರಬೇಕು ಮಗೂವಿಗೆ ಅದು ಮಾನಸಿಕ ಒತ್ತಡವಾಗಿ ಪರಿಣಮಿಸಬಾರದು ತಂದೆ ತಾಯಿ ಜೀವನ ಪರ್ಯಂತ ಕಷ್ಟಪಟ್ಟು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಕಷ್ಟಪಡುತ್ತಾರೆ ಆದರೆ ದೊಡ್ಡವರಾದ ಮೇಲೆ ಪಾಲಕರನ್ನು ವೃದ್ದಾಶ್ರಮ ಅನಾಥಾಶ್ರಮಕ್ಕೆ ಕಳಿಸುವಂತಹ ಪ್ರವೃತ್ತಿ ಬೆಳೆಯಬಾರದು ಸಮಾಜ ಮುಖಿಯಾಗಿ ಎಲ್ಲರನ್ನು ಸಂರಕ್ಷಿಸುವ ಪ್ರಜೆಯಾಗಬೇಕು ಎಂದು ಹೇಳಿದರು

    ಕಾಮರ್ೆಲ್ ಜ್ಯೋತಿ ಎನ್ ಜಿ ಓ ಹಡಗಲಿಯ ಪ್ರಧಾನ ಕಾರ್ಯದಶರ್ಿ ವಿಲಿಯಂ ಮಿರಾಂದ ಅಧ್ಯಕ್ಷತೆ ವಹಿಸಿ ಸಮಾಜಿಕ ಕಾಳಜಿ ಹಾಗೂ ಕರ್ತವ್ಯಗಳು ನಮ್ಮ ಸಂಸ್ಥೆಯ ಮುಖ್ಯ ಕಾರ್ಯವಾಗಿದೆ ಈ ಮಲ್ಲಿಗೆ ನಾಡಿನಲ್ಲಿ ನಾನು ಸುಮಾರು 20 ವರ್ಷಗಳಿಂದ ಜನರ ಮಧ್ಯೆ ಇದ್ದು ಅವರೋಡನೆ ಕೆಲಸ ಮಾಡಿದ್ದೆನೆ ಇದು ನನಗೆ ತುಂಬಾ ಸಂತéೋಷವೆನಿಸಿದೆ. ಎಂದು ಹೇಳಿದರು.

      ಶಾಲೆಯ ವ್ಯವಸ್ಥಾಪಕರಾದ ಹೆನ್ರಿ ಮೊರಾಸ್, ಪ್ರಕಾಶ್ ತಾವ್ರೋ, ರೀಗನ್ ಪಾಲ್, ಡೆನ್ಜಿಲ್ ವೇಗಸ್ ಸಿಸ್ಟರ್ ಅಲಿಶಿಯಾ ಇತರರು ಭಾಗವಹಿಸಿದ್ದರು. ವಿದ್ಯಾಥರ್ಿಗಳಾದ ಗಣೇಶ, ನೂಥನಾ,ಇತರರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಸಕ್ತ ಸಾಲಿನಲ್ಲಿ ಶ್ಯೆಕ್ಷಣಿಕ ಸಾಧನೆ ಗೈದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ನಂತರದಲ್ಲಿ ಮಕ್ಕಳ ನೃತ್ಯ ನಾಟಕ ಮನೋರಂಜಾನಾ ಕಾರ್ಯಕ್ರಮಗಳು ಮನ ಸುರ್ಯಗೊಂಡವು.