ಪಾಕಿಸ್ತಾನದಿಂದ ಮೋಟಾರ್ ಶೆಲ್ ದಾಳಿ : ಸೇನೆಯ ತಕ್ಕ ಪ್ರತ್ಯುತ್ತರ

ಜಮ್ಮು, ಅ 15:      ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಮೋಟಾರ್ ಶೆಲ್ ದಾಳಿ ಮಾಡಿ ಪಾಕಿಸ್ತಾನಿ ಪಡೆಗಳು ಮಂಗಳವಾರ ಕದನವಿರಾಮ ಉಲ್ಲಂಘಿಸಿವೆ.   ಪೂಂಚ್ ಜಿಲ್ಲೆಯ ಕ್ವಾಸ್ಬಾ ಮತ್ತು ಕಿನರ್ಿ ವಲಯಗಳಲ್ಲಿ ಬೆಳಗ್ಗೆ 9.30 ರ ಸುಮಾರಿಗೆ ಈ ದಾಳಿ ನಡೆದಿದ್ದು ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.   ಅ 11 ರಂದು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಅಪ್ರಚೋದಿತ ದಾಳಿಯಲ್ಲಿ ಗಾಯಗೊಂಡಿದ್ದ ಸೇನಾ ಯೋಧ ನಂತರ ಹುತಾತ್ಮರಾಗಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.   ಅ 12 ರಂದು ಸಹ ಪಾಕಿಸ್ತಾನ ಪೂಂಚ್ ಜಿಲ್ಲೆಯ ದೇಗ್ವಾರ್ ಪ್ರದೇಶದಲ್ಲಿ ಅಪ್ರಚೋದಿತ ದಾಳಿ ನಡೆಸಿದೆ. ಅ 3 ರಂದು ಜಮ್ಮು ಕಾಶ್ಮೀರದ ಕಥುವಾ ಮತ್ತು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿ ಬಳಿಯ ಗ್ರಾಮಗಳನ್ನು ಗುರಿಯಾಗಿಸಿ ಪಾಕಿಸ್ತಾನ ಪಡೆಗಳು ಅಪ್ರಚೋದಿತ ದಾಳಿ ನಡೆಸಿದ್ದವು. ಭಾರತೀಯ ಸೇನೆ ಮತ್ತು ಗಡಿ ಭದ್ರಾ ಪಡೆ ತಕ್ಕ ಪ್ರತ್ಯುತ್ತರ ನೀಡಿವೆ.