ಅತ್ಯಾಚಾರಕ್ಕೊಳಗಾದ ಮಗಳಿಗೆ ನ್ಯಾಯ ದೊರಕಿಸಿ ಕೊಡಲು ಡಿಸಿ ಕಚೇರಿ ಮುಂದೆ ತಾಯಿ ಪ್ರತಿಭಟನೆ
Mother protests in front of DC's office demanding justice for raped daughter
ಕೊಪ್ಪಳ 14 : ಗವಿಸಿದ್ದಪ್ಪನನ್ನು ನಡು ರಸ್ತೆಯಲ್ಲಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಅದೇ ತರಹ ಗವಿಸಿದ್ದಪ್ಪ ನಿಂದ ನಿರಂತರ ವಾಗಿ ಅತ್ಯಾಚಾರ ಮತ್ತು ಅವರ ಕುಟುಂಬದ ಕೆಲವರಿಂದ ನಿರಂತರ ಶೋಷಣೆಕ್ಕೊಳಗಾದ ನನ್ನ ಮಗಳಿಗೆ ಮತ್ತು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮತ್ತು ಇದಕ್ಕೆ ಕಾರನೀಕರ್ತರಾದವರ ಮೇಲೆ ಕ್ರಮ ಜರುಗಿಸಬೇಕೆಂದು ಯುವತಿಯ ತಾಯಿ ಮತ್ತು ಸಹೋದರಿ ಯವರು ಆರೋಪ ಮಾಡಿ ಗುರುವಾರದಂದು, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯ ಪಡಿಸಿದ್ದಾರೆ.
ನನ್ನ ಮತ್ತು ನನ್ನ ಮಗಳ ನೋವನ್ನು ಸಹ ಅರ್ಥಮಾಡಿಕೊಳ್ಳಬೇಕು ನಾನು ಕಡು ಬಡವಳು ನನಗೆ ಮೂರು ಜನ ಹೆಣ್ಣು ಮಕ್ಕಳು ನನಗೆ ಗಂಡ ಇಲ್ಲಾ ,ನನಗೆ ಹಿಂದೆ ಮಂದೆ ಯಾರೂ ಇಲ್ಲದೆ ಇರುವ ಕಾರಣ ನನ್ನ ಮಕ್ಕಳನ್ನು ನಾನೆ ದುಡಿದು ಸಾಕಬೇಕು ನನ್ನ ಕೈಯಿಂದ ಆದಷ್ಟು ಮಟ್ಟಿಗೆ ನಾನು ಮಕ್ಕಳಿಗೆ ಶಿಕ್ಷಣ ನೀಡುತ್ತಾ ಕಂಪ್ಯೂಟರ್ ತರಬೇತಿಗೆ ಹೋಗುವಾಗ 16 ವರ್ಷದ ನನ್ನ ಮಗಳಿಗೆ ಕೊಲೆಯಾದ ಗವಿಸಿದ್ದಪ್ಪ ನನ್ನ ಪ್ರೀತಿ ಮಾಡು ಎಂದು ಹಿಂದೆ ಬಿದ್ದು ನನ್ನ ಮಗಳನ್ನು ಪಸುಲಾಯಿಸಿ ನನ್ನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ, ಇದು ನಂತರ ನನಗೆ ಗೊತ್ತಾಗಿ ವಿಷಯವನ್ನು ಗವಿಸಿದ್ದಪ್ಪನಿಗೆ ತಿಳಿ ಹೇಳುವ ಕೆಲಸ ಮಾಡಿದರೆ ಗವಿಸಿದ್ದಪ್ಪ ನನಗೆ ಬೆದರಿಕೆ ಹಾಕಿದ ಎಂದು ದೂರಿದ್ದಾರೆ ಹಾಗಾಗಿ ಈ ವಿಷಯವನ್ನು ಅವರ ತಂದೆ, ತಾಯಿ ಮತ್ತು ಅಕ್ಕನಿಗೆ ತಿಳಿಸಿದರೆ ಅವರು ನಿನ್ನ ಮಗಳೆ ನಮ್ಮ ಹುಡುಗನ ಹತ್ತಿರ ಬರುತ್ತಾಳೆ ಹಾಗಾಗಿ ನೀನು ಸುಮ್ಮನೆ ಇದ್ದರೆ ಸರಿ ಇಲ್ಲಾ ಅಂದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಕಾರಣ ಮತ್ತು ಮರ್ಯಾದೆಗೆ ಅಂಜಿ ಹಾಗೂ ನಮಗೆ ಹಿಂದೆ ಮುಂದೆ ಯಾರೂ ಇಲ್ಲದೆ ಇರುವ ಕಾರಣ ಎಲ್ಲವನ್ನೂ ನಾವು ಸಹಿಸಿಕೊಂಡೆವು ಎಂದು ವಿವರಿಸಿದ್ದಾರೆ.
ಆದರೆ ಗವಿಸಿದ್ದಪ್ಪ ಮಾತ್ರ ನನ್ನ ಮಗಳಿಗೆ ನಿನ್ನ ವಿಡಿಯೋ ಇದೇ ಎಂದು ಬ್ಲಾಕ್ ಮೇಲ್ ಮಾಡುತ್ತಾ ನನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ ಎಂದು ಆರೋಪ ಮಾಡಿದ್ದಾರೆ ಇಷ್ಟೆಲ್ಲಾ ಇದ್ದರೂ ಸಹ ಇನ್ನೂ ಅಪ್ರಾಪ್ತಯಾದ ನನ್ನ ಮಗಳ ಜೊತೆ ಮಾಡಿರುವುದು ಪ್ರೀತಿ ಎಂದು ನನ್ನ ಮಗಳ ಮೇಲೆ ಆದ ಅನ್ಯಾಯದ ಬಗ್ಗೆ ಯಾರೂ ಮಾತಾಡದೆ ಇರುವುದು ನನಗೆ ಅತಿ ಸಂಕಟವನ್ನು ತಂದಿದೆ ಹಾಗಾಗಿ ದಯವಿಟ್ಟು ನನ್ನ ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ಪರೀಶೀಲಿ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಿ ಮತ್ತು ಈ ಅತ್ಯಾಚಾರಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಮಾಡುತ್ತಿರುವ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅತ್ಯಚಾರ ಕೊಳಗಾದ ಯುವತಿಯ ತಾಯಿ ತನ್ನ ಅಳಲನ್ನು ತೋಡಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ ಈ ಸಂದರ್ಭದಲ್ಲಿ ತಾಯಿಯೊಂದಿಗೆ ಅವರ ಇನ್ನೊಬ್ಬ ಮಗಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 