ತಾಯಿ, ಮಗಳು ಒಮ್ಮೆಲೇ ಪಿಯು ತೇರ್ಗಡೆ

ತಾಯಿ, ಮಗಳು ಒಮ್ಮೆಲೇ ಪಿಯು ತೇರ್ಗಡೆ Mother, daughter pass PU at the same time

ಬೆಳಗಾವಿ 11: ತಾಲೂಕಿನ ಕಲ್ಲೋಳಿಯಲ್ಲಿ ತಾಯಿ ಶಿಲ್ಪಾ ಹಾಗೂ ಮಗಳು ಪಲ್ಲವಿ ಬೇರೆ ಬೇರೆ ಕಾಲೇಜುಗಳಲ್ಲಿ ಪಿಯು ಪರೀಕ್ಷೆ ಬರೆದು ಉತ್ತೀರ್ಣರಾಗಿದಾರೆ.  

ವಿದ್ಯಾರ್ಥಿನಿ ಪಲ್ಲವಿ ಪರಪ್ಪ ಗಿರೆಣ್ಣವರ ನಾಗನೂರಿನ ಅಥರ್ವ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ78ಅ ಅಂಕ ಪಡೆದಿದ್ದಾರೆ. ಅವರ ತಾಯಿ ಶಿಲ್ಪಾ ಪರ​‍್ಪ ಗಿರೆಣ್ಣವರ ವಡೆರಹಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಬಾಹ್ಯಪರೀಕ್ಷೆ ಬರೆದು ಶೇ 54 ಅ ಅಂಕ ಪಡೆದಿದ್ದಾರೆ.ಕಳೆದ 16 ವರ್ಷಗಳಿಂದ ಕಲ್ಲೋಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆಯೂ ಪದವಿ ಶಿಕ್ಷಣ ಪೂರೈಸುವ ಹಂಬಲವಿದೆ. ಈ ಬಾರಿ ಪಿಯು ಉತ್ತಿರ್ಣಗೊಂಡಿದ್ದು ಖುಷಿ ತಂದಿದೆ. ಮಗಳೊಂದಿಗೆ ನಾನೂ ಅಭ್ಯಾಸ ಮಾಡುತ್ತಿದ್ದೆ ಅವಳು ಓದಿಗೆ ನೆರಳಾದಳು. ಸರ್ಕಾರ ಮುಂದಿನ ಶಿಕ್ಷಣಕ್ಕೆ ಸಹಕಾರ ನೀಡುವ ದೃಷ್ಠಿಯಿಂದ ಶಿಕ್ಷಣ ಕಲಿಯುವುದು ಅನಿವಾರ್ಯವಾಗಿದೆ ಎಂದು ಶಿಲ್ಪ ತಮ್ಮ ಅನಿಸಿಕೆ ಹಂಚಿಕೊಂಡರು.