ವಿಶ್ವಸಂಸ್ಥೆ, ನ 18 : ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 1.3 ದಶಲಕ್ಷಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಆಂಟೋನಿಯೋ ಗುಟೇರಸ್, 15ರಿಂದ 29 ವರ್ಷ ವಯಸ್ಸಿನ ಯುವಕರು ಎಚ್ಐವಿ,ಏಡ್ಸ್, ಮಲೇರಿಯಾ, ಟ್ಯೂಬರ್ ಕ್ಯುಲೋಸಿಸ್ ಮತ್ತು ಹೋಮಿಸೈಡ್ ಗಳಿಗಿಂತ ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದಿದ್ದಾರೆ. ತಮ್ಮ ಸಂಚಾರಿ ಅಪಘಾತಗಳ ಸಂತ್ರಸ್ತರನ್ನು ಸ್ಮರಿಸುವ ಜಾಗತಿಕ ದಿನದ ಸಂದೇಶದಲ್ಲಿ ಅವರು, ರಸ್ತೆ ಸುರಕ್ಷತೆ ಹೆಚ್ಚಳದಿಂದ ಜೀವಗಳನ್ನು ಉಳಿಸುವುದು '2030ರ ಸುಸ್ಥಿರ ಅಭಿವೃದ್ಧಿಯ ದ್ಯೇಯೋದ್ದೇಶಗಳಲ್ಲಿ ಪ್ರಮುಖವಾಗಿರಲಿದೆ' ಎಂದಿದ್ದಾರೆ. ರಸ್ತೆ ಸಂಚಾರದ ಸಂತ್ರಸ್ತರನ್ನು ಸ್ಮರಿಸುವ ಜಾಗತಿಕ ದಿನದ ಆಚರಣೆ ನಾವು ಹೇಗೆ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂಬುದರ ಕುರಿತು ಚಿಂತನೆ ನಡೆಸಲು ಒಂದು ಉತ್ತಮ ಸಂದರ್ಭ ಎಂದಿದ್ದಾರೆ. 2015ರಿಂದ ಆಂಟೋನಿಯೋ ಗುಟೇರಸ್ ಅವರ ರಸ್ತೆ ಸುರಕ್ಷತೆ ಕುರಿತ ವಿಶೇಷ ರಾಯಭಾರಿ ಜೀನ್ ಟೋಡ್ಕ್ ಅವರು ವಿಶ್ವಸಂಸ್ಥೆಯ ರಸ್ತೆ ಸುರಕ್ಷತಾ ಸಮಾವೇಶಗಳು, ಚರ್ಚೆಗಳು ಹಾಗೂ ಹೂಡಿಕೆ ಮತ್ತು ಪಾಲುದಾರಿಕೆಯತ್ತ ಗಮನ ಹರಿಸುತ್ತಿದ್ದಾರೆ. ಈ ಪಯಣದಲ್ಲಿ ಸವಾಲುಗಳು ಕಠಿಣವಾಗಿರುವುದರಿಂದ, ಇಂತಹ ದುರಂತಗಳನ್ನು ತಡೆಯುವಲ್ಲಿ ಸಮಗ್ರ ಪ್ರಯತ್ನ ಮಾತ್ರ ಸಫಲವಾಗಬಲ್ಲದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. 2018ರಲ್ಲಿ ವಿಶ್ವಸಂಸ್ಥೆ ಶೇ.90ರಷ್ಟು ರಸ್ತೆ ಅಪಘಾತಗಳು, ಸಂಭವಿಸುವ ಕಡಿಮೆ ಅಥವಾ ,ಮಧ್ಯಮ ಆದಾಯವಿರುವ ದೇಶಗಳಿಗಾಗಿ ರಸ್ತೆ ಸುರಕ್ಷತಾ ನಿಧಿಯನ್ನು ಸ್ಥಾಪಿಸಿತ್ತು. ನಂತರ ಫೆಬ್ರವರಿಯಲ್ಲಿ ಸ್ವೀಡನ್ ನಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗತಿಕ ಸಚಿವಾಲಯಗಳ ಸಮಾವೇಶವನ್ನು ಹಮ್ಮಿಕೊಂಡು ಈ ಕುರಿತು ಜಾಗೃತಿ ಮೂಡಿಸಲಾಗಿತ್ತು. ಈ ನಿಟ್ಟಿನಲ್ಲಿ 'ತುರ್ತು ಕ್ರಮಗಳು ಅನಿವಾರ್ಯ' ಎಂದು ಅಭಿಪ್ರಾಯಪಟ್ಟಿರುವ ಗುಟೇರಸ್, ಈ ಜಾಗತಿಕ ದಿನದಂದು, ಪ್ರತಿಯೊಬ್ಬರು ಜಾಗತಿಕ ರಸ್ತೆ ಸುರಕ್ಷತಾ ಆಪತ್ತನ್ನು ಎದುರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.