60 ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್ ಬ್ಯಾಗ್‌ಗಳು ವಶಕ್ಕೆ
More than 60 shops raided: Plastic bags seized
ಲೋಕದರ್ಶನ ವರದಿ
ದಾಂಡೇಲಿ 20: ನಗರದ ಅಂದಾಜು 60 ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟೀಕ್ ಚೀಲಗಳನ್ನು ವಶಪಡಿಸಿಕೊಂಡು ದಂಡ ಆಕರಣೆ ಮಾಡಲಾಗಿದೆ. ನಗರಸಭೆಯ ಪೌರಾಯುಕ್ತ ವಿವೇಕ್ ಬನ್ನೆಯವರ ಮಾರ್ಗದರ್ಶನದಲ್ಲಿ ಆರೋಗ್ಯ ನೀರೀಕ್ಷಕ ವಿಲಾಸ್ ನಾಯ್ಕ, ಹಾಗೂ ಶುಭಂ ರಾಯ್ಕರ್ ನೇತ್ರತ್ವದಲ್ಲಿ ದಾಳಿ ನಡೆಸಿ ಒಟ್ಟು 75 ಕಿಲೋ ಪ್ಲಾಸ್ಟೀಕ್ ವಶಪಡಿಸಿಕೊಂಡು ರೂಪಾಯಿ 3 ಸಾವಿರ ದಂಡ ವಸೂಲು ಮಾಡಲಾಗಿದೆ. ಕಳೆದ ತಿಂಗಳಿನಿಂದ ಒಟ್ಟು 195 ಕೆ.ಜಿ ಪ್ಲಾಸ್ಟೀಕ್ ವಶ ಪಡಿಸಿಕೊಳ್ಳಲಾಗಿದ್ದು ರೂಪಾಯಿ 9100 ದಂಡ ವಸೂಲು ಮಾಡಲಾಗಿದೆ ಎನ್ನಲಾಗಿದ್ದು ಈ ಕುರಿತಂತೆ ಇನ್ನೂ ಕೆಲ ದಿನಗಳ ವರೆಗೆ ದಾಳಿ ನಡೆಯಲಿದೆ. ಎಂದು ತಿಳಿದು ಬಂದಿದೆ. ಈ ಕುರಿತಂತೆ ವ್ಯಾಪಾರಸ್ಥರು, ಉದ್ದಿಮೆದಾರರು ಮತ್ತು ಪ್ಲಾಸ್ಟೀಕ್ ಬಳಕೆದಾರರು ನಗರಸಭೆ ಜೊತೆ ಕೈ ಜೋಡಿಸಬೇಕೆಂದು ಪೌರಾಯುಕ್ತರು ಕರೆ ನೀಡಿರುತ್ತಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 