ಮಹಾದಾಸೋಹದಲ್ಲಿ ಇಂದು ಭಕ್ತರಿಗೆ 18 ಲಕ್ಷಕ್ಕಿಂತಲೂ ಹೆಚ್ಚು ಬಿಸಿ ಬಿಸಿ ಮಿರ್ಚಿಗಳು
ಲೋಕದರ್ಶನ ವರದಿ
ಕೊಪ್ಪಳ 13: ಗವಿಮಠದ ಜಾತ್ರೆಯ ವಿಶೇಷತೆಗಳಲ್ಲೊಂದಾದ ಮಹಾದಾಸೋಹದಲ್ಲಿ ಇಂದು ಮಹಾರಥೋತ್ಸವದ ಎರಡನೇ ದಿನ ಲಕ್ಷ -ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ, ಚಪಾತಿ, ಪಲ್ಲೆ, ಮಾದಲಿ, ಹಾಲು, ತುಪ್ಪ, ಅನ್ನಾ, ಸಾಂಬಾರ್, ಚಟ್ನಿಪುಡಿ, ಮಜ್ಜಿಗೆ ಇವುಗಳ ಜೊತೆಗೆ ಬಿಸಿ ಬಿಸಿಯಾದ ಮಿರ್ಚಿಯನ್ನು ವಿತರಿಲಾಯಿತು. ಕಳೆದ 5 ವರ್ಷಗಳಿಂದಲೂ ಮಹಾದಾಸೋಹದಲ್ಲಿ ಮಿರ್ಚಿಗಳನ್ನು ನೀಡಲಾಗುತ್ತಿದೆ. ಮೊದಲಿಗೆ ಕೊಪ್ಪಳದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಗೆಳೆಯರ ಬಳಗವು ಈ ಸೇವೆಗೈಯುತ್ತಿತ್ತು. ಈ ಸಲ ಗವಿಮಠವೇ ವಹಿಸಿಕೊಂಡಿದೆ. 18 ಕ್ವಿಂಟಾಲ್ ಕಡ್ಲಿಬೇಳೆ ಹಿಟ್ಟು, 15 ಕ್ವಿಂಟಾಲ್ ಹಸೆಮೆಣಸಿನಕಾಯಿ, 10 ಬ್ಯಾರಲ್ ಎಣ್ಣೆ ಅಲ್ಲದೇ ಜೀರಗಿ, ಅಡುಗೆ ಸೋಡಾ, ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಮುಂಜಾನೆಯಿಂದ 300 ಕ್ಕಿಂತಲೂ ಹೆಚ್ಚೂ ಜನ ಬಾಣಸಿಗರು,ಸ್ವಯಂ ಸೇವಕರು ಬಸಿ ಬಿಸಿ ಮಿರ್ಚಿಗಳನ್ನು ತಯಾರಿಸುವಂತಹ ಹಾಗೂ ವಿತರಿಸುವಂತಹ ಕೆಲಸದಲ್ಲಿ ಬೆಳಗಿನಿಂದ ರಾತ್ರಿಯವರೆಗೆ ನಿರತರಾಗಿದ್ದಾರೆ. ಇಂದು ಭಕ್ತರಿಗೆ 18 ಲಕ್ಷಕ್ಕಿಂತಲೂ ಹೆಚ್ಚೂ ಮಿರ್ಚಿಗಳು ತಯಾರಾಗುತ್ತಿವೆ. ಭಕ್ತರಿಗೆ ಪ್ರಸಾದದಲ್ಲಿ ಮಿರ್ಚಿಗಳನ್ನು ಒದಗಿಸುವ ಸಂಕಲ್ಪವನ್ನು ಪೂಜ್ಯರು ಮಾಡಿದ್ದರಿಂದ ಪ್ರತಿವರ್ಷ ಮಾದಾಸೋಹದಲ್ಲಿ ಭಕ್ತರಿಗೆ ಮಿರ್ಚಿಗಳನ್ನು ನೀಡಲಾಗುತ್ತಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 