ಪುರಸಭೆ ನಗರ ಸಭೆಯಾಗಿದ್ದರಿಂದ ಹೆಚ್ಚಿನ ಅನುದಾನ: ಸಚಿವ ರಹೀಂ ಖಾನ್
More funding as the municipality has become a city council: Minister Rahim Khan
ಇಂಡಿ 23: ಪುರಸಭೆಯನ್ನು ರಾಜ್ಯ ಸರ್ಕಾರ ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿರುವುದರಿಂದ ನಗರದ ಅಭಿವೃದ್ಧಿಗೆ ನಗರಸಭೆಗೆ ಹೆಚ್ಚಿನ ಸರ್ಕಾರದ ಅನುದಾನಗಳು ಪ್ರಯೋಜನವಾಗಲಿದೆ. ಪುರಸಭೆಯು ನಗರಸಭೆ ಮೇಲ್ದರ್ಜೆಗೆ ಏರಿರುವುದರಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ ಅನುದಾನಗಳು ಯೋಜನೆಗಳು ಸವಲತ್ತುಗಳು ಹೆಚ್ಚಾಗುವ ಭರವಸೆ ಜನ ಸಾಮಾನ್ಯರಲ್ಲಿ ಮೂಡಿದೆ ಎಂದು ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಹೇಳಿದರು.
ಅವರು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ತಾಲೂಕು ಆಡಳಿತ ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ನಗರಸಭೆ ಕಾರ್ಯಾಲಯ ಇಂಡಿ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಕಛೇರಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ಇಂದಿನ ದಿನವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ. ವಿಜಯಪೂರ ಜಿಲ್ಲೆಯಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರ ಇಂಡಿ ಆಗಿದೆ. ಇಂಡಿ ನಗರ ಜನರ ಆಸೆಯಂತೆ ನಗರ ಯೋಜನಾ ಪ್ರಾಧಿಕಾರ ಕಛೇರಿಯನ್ನು ಲೋಕಾರೆ್ಣ ಮಾಡಲಾಗಿದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಸೇರಿದಂತೆ ಅನೇಕರು ಮಾತನಾಡಿದರು ವಿಜಯಪೂರ ಜಿಲ್ಲಾ ಅಧಿಕಾರಿ ಆನಂದ ಕೆ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಇಂಡಿ ಪೋಲೀಸ್ ಉಪಾಧೀಕ್ಷಕರಾದ ಸದಾಶಿವ ಕಟ್ಟಿಮನಿ ಇಂಡಿ ತಾಲೂಕು ದಂಡಾಧಿಕಾರಿ ಬಿ ಎಸ್ ಕಡಕಬಾವಿ ನಗರಸಭೆ ಆಯುಕ್ತರಾದ ಶಿವಾನಂದ ಪೂಜಾರಿ ಹಾಗೂ ಸುನೀತಾ ಲಾಡ್ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ಕೃಷಿ ಇಲಾಖೆ ಅಧಿಕಾರಿ ಮಾದೇವಪ್ಪ ಏವೂರ ತೋಟಗಾರಿಕೆ ಇಲಾಖೆ ಅಧಿಕಾರಿ ಎಚ್ ಎಸ್ ಪಾಟೀಲ ಸೇರಿದಂತೆ ಅನೇಕ ಇಲಾಖೆಯಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಹಾಸಿಮಂಫೀರ್ ವಾಲಿಕಾರ ಶ್ರೀಕಾಂತ ದೇವರ ಜೇಟ್ಟಪ್ಪ ರವಳಿ ಬಿ ಎಸ್ ಕವಲಗಿ ಇಲಿಯಾಸ್ ಬೋರಾಮಣಿ ಪ್ರಶಾಂತ ಕಾಳೆ ಜಾವೀದ್ ಮೊಮಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 