ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು, ಆದರೆ ಸಾಮಾಜಿಕ ವಲಯಗಳಿಗೆ ಹೆಚ್ಚಿನ ಗಮನ ಅಗತ್ಯ: ಡಾ. ನಾಗೂರ
More emphasis on infrastructure, but more attention is needed on social sectors: Dr. Nagura
ಹಾವೇರಿ 11: ಏಪ್ರಿಲ್ 8:2026ಹಿ27್ಘ ಕೇಂದ್ರ ಬಜೆಟ್ ಆರ್ಥಿಕ ವೃದ್ಧಿ ಮತ್ತು ಕಲ್ಯಾಣದ ನಡುವೆ ಸಮತೋಲನ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಅಧ್ಯಕ್ಷರಾದ ಡಾ. ಬಿ. ಹಚ್. ನಾಗೂರ ಅಭಿಪ್ರಾಯಪಟ್ಟರು.ಅವರು ಏಪ್ರಿಲ್ 8ರಂದು ಹಾವೇರಿಯ ಗುಡ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ ಆಯೋಜಿಸಲಾದ “ವೃದ್ಧಿ ವಿರುದ್ಧ ಕಲ್ಯಾಣ: 2026ಹಿ27್ಘ ಕೇಂದ್ರ ಬಜೆಟ್ನಲ್ಲಿ ಆದ್ಯತೆಗಳ ಸಮತೋಲನ” ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು. ಈ ಕಾರ್ಯಾಗಾರವು ಕೇಂದ್ರ ಬಜೆಟ್ನಲ್ಲಿರುವ ಆದ್ಯತೆಗಳು ಮತ್ತು ನೀತಿ ದಿಕ್ಕನ್ನು ವಿಮರ್ಶಾತ್ಮಕವಾಗಿ ಪರೀಶೀಲಿಸುವ ಉದ್ದೇಶ ಹೊಂದಿತ್ತು.
ಡಾ. ನಾಗೂರ ಅವರು ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಡಿಜಿಟಲ್ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿರುವ ಹೆಚ್ಚಿನ ಒತ್ತು ದೀರ್ಘಕಾಲೀನ ಆರ್ಥಿಕ ವೃದ್ಧಿಗೆ ಸಹಕಾರಿಯಾಗುವುದಲ್ಲದೆ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು. ಇಂತಹ ಹೂಡಿಕೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕೂ ಹಾಗೂ ಶಾಶ್ವತ ಅಭಿವೃದ್ಧಿಗೆ ಬಲವಾದ ನೆಲೆಯನ್ನು ನಿರ್ಮಿಸುವುದಕ್ಕೂ ಅಗತ್ಯವಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ಐದು ವರ್ಷಗಳ ಕೇಂದ್ರ ಬಜೆಟ್ಗಳನ್ನು ವಿಶ್ಲೇಷಿಸಿದಾಗ, ಮೂಲಧನ ವೆಚ್ಚ ಮತ್ತು ಮೂಲಸೌಕರ್ಯ ನಿರ್ಮಾಣದತ್ತ ಹೆಚ್ಚಿನ ಒತ್ತು ನೀಡುವಂತೆ ನೀತಿ ದಿಕ್ಕಿನಲ್ಲಿ ಸ್ಪಷ್ಟ ಬದಲಾವಣೆ ಕಂಡುಬರುತ್ತಿದೆ ಎಂದು ಅವರು ಹೇಳಿದರು. ಆದರೆ, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಮೊದಲಾದ ಪ್ರಮುಖ ಸಾಮಾಜಿಕ ವಲಯಗಳಿಗೆ ನೀಡಲಾಗುತ್ತಿರುವ ಅನುದಾನದಲ್ಲಿ ಹೆಚ್ಚಳ ಜನರ ಅಗತ್ಯಗಳಿಗೆ ಹೋಲಿಸಿದರೆ ಸೀಮಿತವಾಗಿದೆ ಎಂದು ಅವರು ಎಚ್ಚರಿಸಿದರು.ಇನ್ನೂ, ಅನುದಾನಗಳ ಯುಕ್ತೀಕರಣವು ಆರ್ಥಿಕ ಶಿಸ್ತಿನತ್ತ ಮತ್ತು ಕಾರ್ಯಕ್ಷಮತೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 