ಧರ್ಮಾಧಾರಿತ ಶಿಕ್ಷಣದಲ್ಲಿ ನೈತಿಕತೆ ಹೊಂದಬೇಕು: ಕೋಳಿವಾಡ
Morality should be incorporated in religion-based education: Koliwada
ರಾಣೆಬೆನ್ನೂರು 26: ಸಮಾಜದಲ್ಲಿ ಇಂದು ನೈತಿಕ ಮೌಲ್ಯಗಳ ಕೊರತೆ ಎದ್ದು ಕಾಣುತ್ತಲಿದೆ ಇಂತಹ ಸಂದರ್ಭದಲ್ಲಿ ಧರ್ಮದ ಆಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು, ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯವು, ಆಯೋಜಿಸಿದ್ದ ಶಿಕ್ಷಕರ ಅಭಿನಂದನಾ ಮತ್ತು ನಶಾಮುಕ್ತ ಯುವ ಶೃಂಗ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ಆಚಾರ ವಿಚಾರ ಮತ್ತು ನೈತಿಕ ಮೌಲ್ಯಗಳಿಂದ ಕೂಡಿದ ಶಿಕ್ಷಣ ನಮಗೆ ಬೇಕಾಗಿದೆ. ನೈತಿಕತೆ ಮತ್ತು ಮೌಲ್ಯಗಳು ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಈಶ್ವರಿಯ ವಿಶ್ವ ವಿದ್ಯಾಲಯ ಮಾಡುತ್ತಿರುವ ಮೌಲ್ಯ ಬಿಂಬಿತ ಕಾರ್ಯಕ್ರಮವು ಸ್ವಾಗತವಾಗಿದೆ, ಬಿಕೆ ಮಾಲತಿ ಆಕ್ಕನವರ , ಮೌಲ್ಯ ಶಿಕ್ಷಣ ಜಾಗೃತಿ, ಮತ್ತು ಆಧ್ಯಾತ್ಮ ಆರಾಧನೆಯ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ದಿವ್ಯ ನೇತೃತ್ವದಲ್ಲಿದ್ದ ಮುಂಡಗೋಡ ಸಂಚಾಲಕಿ ಬಿಕೆ ಗಂಗಾಂಬಿಕೆ, ಕಡೂರು ಸಂಚಾಲಕಿ ಬಿಕೆ, ಜ್ಞಾನೇಶ್ವರಿ ಅವರುಗಳು ಈಶ್ವರಿಯ ಸಂದೇಶಾಮೃತ ನೀಡಿದರು. ಸ್ಥಳೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಮಾಲತಿಜಿ ಆಕ್ಕನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಅವರು ಮಾತನಾಡಿ , ಭಾರತೀಯ ಸಂಸ್ಕೃತಿಯ ಪರಂಪರೆ ಮತ್ತು ಶಿಕ್ಷಣ ವೇದ ಇತಿಹಾಸ ಕಾಲಗಳಿಂದಲೂ ನೈತಿಕತೆಯಿಂದ ಕೂಡಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ಮುಂಡಗೋಡ ಸಮನ್ವಯಾಧಿಕಾರಿ ಡಾ. ರಮೇಶ್ ಅಂಬಿಗೇರ, ಹಿಂದೂ ಕಾರ್ಯಕರ್ತ ಅಜಯ್ ಮಠದ, ಕಾಕಿ ಕುಟುಂಬದ ಹಿರಿಯ ಸದಸ್ಯ ಹನುಮಂತಪ್ಪ ಕಾಕಿ, ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಬಸವರಾಜ ರಾಜನಹಳ್ಳಿ, ಎಬಿವಿಪಿ ರಾಜ್ಯ ಸದಸ್ಯ ಅಭಿಲಾಷ ಬಾದಾಮಿ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಯೋಗ ಸಾಧಕ ಕೆ.ಸಿ. ಕೋಮಲಾಚಾರ, ಅಶೋಕ, ಮತ್ತು ವಿಶ್ವ ವಿದ್ಯಾಲಯದ, ಸಾಧಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಈ ದಿನದ ನಿಮಿತ್ತ ಸಾವಿರಾರು ಈಶ್ವರಿ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕ ಮಟ್ಟದ ಅತ್ಯುತ್ತಮ ಶಿಕ್ಷಕ, ಸೇವಾ ಸಾಧಕ ನೂರಾರು ಪ್ರಶಸ್ತಿ ಪುರಸ್ಕೃತರಿಗೆ ಶಾಲು, ಮಾಲೆ, ಸ್ಮರಣಿಕೆ ಮತ್ತು ಪ್ರಮಾಣ ಪತ್ರ ಇತ್ತು ಅಭಿನಂದಿಸಿ ಗೌರವಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 