ಮೊರಬ ವೀರಶೈವ ಜಂಗಮ ಸಮಾಜದ ಮುಖಂಡ ಶಿ.ಸಿ.ಭೂಸನೂರಮಠ ನಿಧನ
Moraba Veerashaiva Jangam Samaj leader Shi.C. Bhusanurmath passes away
ಧಾರವಾಡ 18: ಮೂಲತಃ ನವಲಗುಂದ ತಾಲೂಕು ಮೊರಬ ಗ್ರಾಮದ ವೀರಶೈವ ಜಂಗಮ ಸಮಾಜದ ಹಿರಿಯ ಮುಖಂಡ, ಕೆ.ಎಲ್.ಇ. ಸಂಸ್ಥೆಯ ಮುದ್ರಾಣಲಯದ ನಿವೃತ್ತ ನೌಕರ, ನಗರದ ಮದಿಹಾಳದ ನಿವಾಸಿ ಶಿವರುದ್ರಯ್ಯ ಸಿದ್ರಾಮಯ್ಯ ಭೂಸನೂರಮಠ(78) ಶುಕ್ರವಾರ ನಿಧನರಾದರು. ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಲೇಖಕ ಗುರುಮೂರ್ತಿ ಯರಗಂಬಳಿಮಠ ಅವರು ಶಿ.ಸಿ.ಭೂಸನೂರಮಠ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಜು.18 ರಂದು ಅಪರಾಹ್ನ ಮೃತ್ಯುಂಜಯ ನಗರದ ರುದ್ರಭೂಮಿಯಲ್ಲಿ ವೀರಶೈವ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ಜರುಗಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 