ಲೋಕದರ್ಶನ ವರದಿ
ಸಾಣೇಹಳ್ಳಿ,10; ನಗರ ಎಸ್ ಎಸ್ ರಂಗಮಂದಿರದಲ್ಲಿ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ರಚಿಸಿದ, ವೈ ಡಿ ಬದಾಮಿ ಮತ್ತು ಮಂಜುಳಾ ನಿದರ್ೇಶಿಸಿದ ``ಮೋಳಿಗೆ ಮಾರಯ್ಯ ನಾಟಕವನ್ನು ಪ್ರದಶರ್ಿಸಿದರು. ನಾಟಕಕ್ಕೆ ಹಿನ್ನೆಲೆ ಸಂಗೀತವನ್ನು ಹೆಚ್ ಎಸ್ ನಾಗರಾಜ್ ಮತ್ತು ಶರಣ್ ನೀಡಿದರೆ, ನೆರಳು-ಬೆಳಕಿನ ಸಂಯೋಜನೆಯನ್ನು ರಾಜು ಬಿ ನಿರ್ವಹಿಸಿದರು.
ನಾಟಕದ ಕಥಾಸಾರ: ನಾಟಕವು 12 ನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕನರ್ಾಟಕದ ಕಲ್ಯಾಣದಲ್ಲಾದ ಸಾಮಾಜಿಕ-ಧಾಮರ್ಿಕ ಕ್ರ್ರಾಂತಿಗೆ ಸಂಬಂಧಪಟ್ಟದ್ದು.
ಅಲ್ಲಿ ನಡೆದ ಸಾಮಾಜಿಕ ಪರಿವರ್ತನೆಯ ಸುದ್ಧಿಯನ್ನು ತಿಳಿದು, ಅದರಿಂದ ಪ್ರಭಾವಿತಗೊಂಡು ಕಾಶ್ಮಿರದ ರಾಜ ಮಹದೇವ ಭೂಪಲ (ಮೋಳಿಗೆ ಮಾರಯ್ಯ) ಮತ್ತು ಆತನ ಹೆಂಡತಿ ಮಹದೇವಮ್ಮ ಮತ್ತು ರಾಜನ ಸಹೋದರಿ ನಿಜದೇವಿ (ಭೋಂತಾದೇವಿ) ರಾಜ್ಯ-ಕೋಶಗಳನ್ನು ತ್ಯಜಿಸಿ ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣವನ್ನು ಖುದ್ದಾಗಿ ವೀಕ್ಷಿಸಿ ಕಟ್ಟಿಗೆ ಕಡಿದು ಮಾರುವ ಕಾಯಕ ಕೈಗೊಳ್ಳುತ್ತಾರೆ. ಅದರಿಂದ ಬಂದ ಹಣದಿಂದ ನಿತ್ಯವೂ ಶರಣರಿಗೆ `ಅಂಬಲಿ' ದಾಸೋಹವನ್ನೂ ಏರ್ಪಡಿಸುತ್ತಾರೆ. ಬಸವಣ್ಣನವರೂ ಮೆಚ್ಚುವಂತೆ ಕಾಯಕ-ದಾಸೋಹ ಶ್ರದ್ಧೆಯನ್ನು ತೋರುತ್ತಾರೆ. ಅನುಭವ ಮಂಟಪದಲ್ಲಿ ಭಾಗವಹಿಸಿ ವಚನ ರಚನೆಯ ಮೂಲಕ ಅಲ್ಲಮಪ್ರಭುಗಳ ಮೆಚ್ಚುಗೆಯನ್ನೂ ಗಳಿಸುತ್ತಾರೆ. ಕಲ್ಯಾಣದಲ್ಲಿ ಕ್ರ್ರಾಂತಿಯಾದ ನಂತರವೂ ಕಲ್ಯಾಣದಲ್ಲಿಯೇ ಇದ್ದು ಅಲ್ಲಿಯೇ ಲಿಂಗೈಕ್ಯರಾಗುವರು.
ನಾಟಕ ಪ್ರದರ್ಶನದ ನಂತರ ನಾಟಕದ ಲೇಖಕರಾದ ಡಾ. ಪೂಜ್ಯ ಪಂಡಿತಾರಾಧ್ಯ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಂವಾದವೂ ನಡೆಯಿತು.
ನಿದರ್ೇಶಕ ಬದಾಮಿ-ಮಂಜುಳಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂವಾದದಲ್ಲಿ ರಂಗಾಸಕ್ತರು, ವಿದ್ಯಾಥರ್ಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಶಾಲಾ-ಕಾಲೇಜಿನ ವಿದ್ಯಾಥರ್ಿಗಳು, ನೌಕರರು ನಾಟಕ ವೀಕ್ಷಿಸಿದರು. ದೊಡ್ಡವರ ನಾಟಕವಾದರೂ ಮಕ್ಕಳು ಸುಲಲಿತವಾಗಿ ಅಭಿನಯಿಸಿ ಸೈ ಎನಿಸಿಕೊಂಡರು.