ವಿಶಾಖಪಟ್ಟಣಂ, ಅ
6: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಿರಿಯ ವೇಗಿ ಮೊಹಮ್ಮದ್ ಶಮಿ
ಅವರನ್ನು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಭಾನುವಾರ ಇಲ್ಲಿನ
ಡಾ.ವೈ.ಎಸ್ ರಾಜಶೇಖರರೆಡ್ಡಿ ಕ್ರೀಡಾಂಗಣದಲ್ಲಿ ಐದನೇ ದಿನವಾದ ಭಾನುವಾರ ದಕ್ಷಿಣ ಆಫ್ರಿಕಾ ಗೆಲುವಿಗೆ
384 ರನ್ಗಳು ಅಗತ್ಯವಿತ್ತು. ಆದರೆ, ಮೊಹಮ್ಮದ್ ಶಮಿ ಮಾರಕ ದಾಳಿಗೆ ನಲುಗಿದ ಹರಿಣಗಳು ಕೇವಲ 191
ರನ್ಗಳಿಗೆ ಸರ್ವ ಪತನವಾಯಿತು. ಶಮಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಭಾರತ ತಂಡ 203 ರನ್ಗಳಿಂದ
ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿತು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ರೋಹಿತ್ ಶರ್ಮಾ,‘‘ನಿಧಾನಗತಿಯ ಪಿಚ್ಗಳಲ್ಲಿ ಮೊಹಮ್ಮದ್ ಶಮಿ ಅವರ ರಿವರ್ಸ್ ಸ್ವಿಂಗ್ ತಂಡಕ್ಕೆೆ ವರದಾನವಾಗಿದೆ. ಈ ಪಂದ್ಯದಲ್ಲಿ ಅಲ್ಲದೇ, ಈ ಹಿಂದೆ
ಹಲವು ಪಂದ್ಯಗಳಲ್ಲಿ ಶಮಿ ಅವರ ಬೌಲಿಂಗ್ ನೋಡಿದ್ದೇವೆ. 2013ರಲ್ಲಿ ನಾವಿಬ್ಬರು ಒಂದೇ ವೇಳೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದೆೆವು. ಈಡೆನ್
ಗಾರ್ಡನ್ ಪಿಚ್ ಆಗ ಇದಕ್ಕಿಂತ ವಿಭಿನ್ನವಾಗಿತ್ತು. ನಾಲ್ಕು ಹಾಗೂ ಐದನೇ ದಿನ ಹೆಚ್ಚು ನಿಧಾನಗತಿಯಿಂದ
ಕೂಡಿತ್ತು. ಆ ವೇಳೆಯೂ ಶಮಿ ರಿವರ್ಸ್ ಸ್ವಿಂಗ್ ಮಾಡಿದ್ದರು
ಎಂದು ಹೇಳಿದರು.
ಇಂಥ ಪಿಚ್ಗಳು ಮೊಹಮ್ಮದ್ ಶಮಿಗೆ ಅಚ್ಚುಮೆಚ್ಚು. ಎಲ್ಲ ಎಸೆತಗಳನ್ನು ಪರಿಣಾಮಕಾರಿಯಾಗಿ ಅವರು ಎಸೆಯಬಲ್ಲರು. ಆ ಮೂಲಕ ಬ್ಯಾಟ್ಸ್ಮನ್ ಮೇಲೆ ಹೆಚ್ಚಿನ ಒತ್ತಡ ಹೇರುತ್ತಾರೆ. ಶಮಿಯ ರಿವರ್ಸ್ ಸ್ವಿಂಗ್ ಎಸೆತಗಳನ್ನು ಬ್ಯಾಟ್ಸ್ಮನ್ ಅರಿಯಲು ಸಾಧ್ಯವಾಗುವುದಿಲ್ಲ. ಹಳೆ ಚೆಂಡನ್ನು ಹೇಗೆ ಎಸೆಯಬೇಕು ಎಂಬಂತೆ ಶಮಿಗೆ ಅಪಾರ ಜ್ಞಾನವಿದೆ ಎಂದು ರೋಹಿತ್ ಹೇಳಿದರು.
ರಿಷಭ್ ಪಂತ್ ಬದಲು
ಅಂತಿಮ 11ರಲ್ಲಿ ಸ್ಥಾನ ಪಡೆದ ವೃದ್ದಿಮನ್ ಸಾಹ ಬಗ್ಗೆೆ ಪ್ರತಿಕ್ರಿಯಿಸಿ, ನನಗೆ ಅನಿಸಿದ ಹಾಗೆ ವೃದ್ದಿಮನ್
ಸಾಹ ಅತ್ಯುತ್ತಮವಾಗಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ವಿಶೇಷವಾಗಿ ಇಂಥ ಪಿಚ್ಗಳಲ್ಲಿ ಕೀಪಿಂಗ್ ಮಾಡುವುದು
ಸುಲಭವಲ್ಲ. ಒಂದೊಂದು ನಿಧಾನ, ಬೌನ್ಸ್, ರಿವರ್ಸ್ ಸ್ವಿಂಗ್ ಹಲವು ವಿಧಗಳಲ್ಲಿ ಚೆಂಡು ಪುಟಿದೇಳುತ್ತದೆ.
ಇವುಗಳನ್ನೆೆಲ್ಲ ಸಾಹ ಸರಿಯಾಗಿ ನಿಭಾಯಿಸಿದರು ಎಂದರು.
‘‘ವೃದ್ದಿಮಾನ್ ಸಾಹ
ತಾಂತ್ರಿಕವಾಗಿ ಹೇಗಿದ್ದಾರೆ ಎಂದು ತಿಳಿದಿಲ್ಲ. ಆದರೆ, ಅವರು ಆಡಿರುವ ಪಂದ್ಯಗಳಲ್ಲಿ ಅತ್ಯುತ್ತಮವಾಗಿ
ತನ್ನ ಕಾರ್ಯ ನಿರ್ವಹಿಸಿದ್ದಾರೆ. ಡಿಆರ್ಎಸ್ ಕರೆಗಳನ್ನು ಅವರು ಸರಿಯಾಗಿ ನಿಭಾಯಿಸಿದರು. ಇದು ಬೌಲರ್ಗಳಿಗೆ
ತುಂಬಾ ನೆರವಾಯಿತು’’ ಎಂದು ಎರಡೂ ಇನಿಂಗ್ಸ್ಗಳಲ್ಲಿ ಎರಡು ಶತಕ ಸಿಡಿಸಿ ದಾಖಲೆ ಮಾಡಿದ ಹಿಟ್ಮನ್
ಹೇಳಿದರು.