ಕನ್ನಡ ಪತ್ರಿಕೋದ್ಯಮಕ್ಕೆಅಡಿಗಲ್ಲು ಹಾಕಿದ ಮೊಗ್ಲಿಂಗ್ ಸಾಹಿತ್ಯ ಸೇವೆಯೂಗಮನಾರ್ಹ: ಶಿವಪೂಜಿ
Mogling's literary service, which laid the foundation for Kannada journalism, is also noteworthy: Sh
ಲೋಕದರ್ಶನ ವರದಿ
ಬೆಳಗಾವಿ 25 :- “ ಮೊದಲ ಕನ್ನಡ ಪತ್ರಿಕೆಯನ್ನು ಹೊರತಂದರೆ. ಹೆರ್ಮನ್ ಮೊಗ್ಲಿಂಗ್ ವಿದೇಶೀಯನಾದರೂ ಕನ್ನಡ ನಾಡುನುಡಿಗೆಆತ ಸಲ್ಲಿಸಿದ ಸೇವೆ ಅಪೂರ್ವವಾದುದು” ಎಂದು ಹಿರಿಯ ಪತ್ರಕರ್ತ ಮುರುಗೇಶ ಶಿವಪೂಜಿ ಅವರಿಂದಿಲ್ಲಿ ಹೇಳಿದರು. ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತುಜಿಲ್ಲಾಚುಟುಕು ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿ ನಡೆದ “ಮರೆಯಲಾಗದ ಮಹನಯರು” ಉಪನ್ಯಾಸ ಮಾಲಿಕೆಯಐದನೇ ತಿಂಗಳ ಕಾರ್ಯಕ್ರಮದಲ್ಲಿ ಮೊಗ್ಲಿಂಗ್ಕುರಿತುಉಪನ್ಯಾಸ ನಡಿದ ಶಿವಪೂಜಿಯವರು ಮೊದಲ ಪತ್ರಿಕೆಯಷ್ಟೇಅಲ್ಲ, ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಗ್ರಂಥಗಳನ್ನು ಮೊದಲು ಬರೆದು ಪ್ರಕಟಿಸಿದ ಶ್ರೇಯಸ್ಸು ಮೊಗ್ಲಿಂಗ್ಅವರಿಗೆ ಸಲ್ಲುತ್ತದೆ” ಎಂದರು.
ಶ್ರೀಮತಿ ಆಶಾ ಯಮಕನಮರ್ಡಿಯವರು ಕವಿ ಭುಜೇಂದ್ರ ಮಹಿಷವಾಡಿಯವರಜೀವನ ಸಾಧನೆಕುರಿತು ಮಾತನಾಡಿಕೃಷ್ಣಾತೀರದ ಕವಿ ಮಹಿಷವಾಡಿಯವರು ಬೆಳಗಾವಿಗೆ ಹೆಮ್ಮೆತಂದವರುಎಂದು ಹೇಳಿ ಅವರು ಬರೆದ ಮತ್ತು ಲತಾ ಮಂಗೇಶ್ಕರ್ಅವರು ಸಂಗೊಳ್ಳಿ ರಾಯಣ್ಣಕನ್ನಡ ಚಲನಚಿತ್ರಕ್ಕಾಗಿ ಹಾಡಿದ “ಬೆಳ್ಳನೆ ಬೆಳಗಾಯಿತು” ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.
ಬಸವರಾಜಗಾರ್ಗಿ ಸ್ವಾಗತಿಸಿದರು. ಆನಂದ ಪುರಾಣಿಕ ವಂದಿಸಿದರು. ಎಲ್. ಎಸ್. ಶಾಸ್ತ್ರಿ ನರೂಪಿಸಿದರು. ಆರ್. ಬಿ. ಕಟ್ಟಿ, ಪಿ. ಬಿ. ಸ್ವಾಮಿಡಾ. ಬಸವರಾಜಜಗಜಂಪಿ, ಡಾ. ಸಿ. ಕೆ. ಜೋರಾಪುರ, ರವಿ ಕೊಟಾರಗಸ್ತಿ, ಸುಭಾಸಏಣಗಿ, ಡಾ. ಪಿ. ಜಿ. ಕೆಂಪಣ್ಣವರ, ಎಂ. ಎ. ಪಾಟೀಲ, ಸುಧಾ ಪಾಟಿಲ, ಸುನತಾದೇಸಾಯಿ, ಸುರೇಶದೇಸಾಯಿ ಸಾಲಹಳ್ಲಿ, ,ದಾಮೋದರ ಬಡಿಗೇರಡಾ. ಎಚ್. ಐ. ತಿಮ್ಮಾಪುರ, ಶ್ವೇತಾ ನರಗುಂದ, ಶಾಲಿನ ಚಿನವಾರ, ಮಮತಾ ಶಂಕರ, ರೂಪಾ ನಂದೆನ್ನವರ, ಗಂಗಾ ಚಕ್ರಸಾಲಿ, ಲಕ್ಷಿ-್ಮಬಾಯಿಜೋರಾಪುರ, ಪ್ರಹ್ಲಾದಜೋರಾಪುರ, ಕೇಶವ ಜೋರಾಪುರ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 