ಲಕ್ನೋದಲ್ಲಿ ವಾಜಪೇಯಿ ಪುತ್ಥಳಿ ಅನಾವರಣ ಮಾಡಲಿರುವ ಮೋದಿ

ಲಕ್ನೋ, ಡಿ 25 ಮಾಜಿ ಪ್ರಧಾನಿ,  ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ  ಇಂದು ಅವರ ಪುತ್ಥಳಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ  ಅನಾವರಣಗೊಳಿಸಲಿದ್ದಾರೆ. ಉತ್ತರಪ್ರದೇಶ ಲಕ್ನೋನದ ಸರ್ಕಾರದ ಲೋಕಭವನದ  ಕಾರ್ಯಾಲಯದಲ್ಲಿ ೨೫ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನರೇಂದ್ರ ಮೋದಿ ಮಧ್ಯಾಹ್ನ ಅನಾವರಣ ಮಾಡುವರು. ನಂತರ ಅಟಲ್ ಬಿಹಾರಿ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ವಾಜಪೇಯಿ ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜನೆಗೊಂಡಿರುವ ಸರಣಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ. ರಕ್ತದಾನ ಶಿಬಿರ, ಹಣ್ಣು ಹಂಚಿಕೆ ಹಾಗೂ ಸ್ವಚ್ಚತೆಯ ಅನೇಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ  ಹಮ್ಮಿಕೊಳ್ಳಲಾಗಿದೆ.