ಮನ್ ಕಿ ಬಾತ್ ನಲ್ಲಿ ದೇಶವಾಸಿಗಳ ಜೊತೆ ಮೋದಿ ಮಾತುಕತೆ

ನವದೆಹಲಿ ಜೂ, 28: ದೇಶದಲ್ಲಿ ಕೊರೋನಾಸೋಂಕು ಪ್ರಕರಣ ಹೆಚ್ಚುತ್ತಿರುವ ನಡುವೆಯೇ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ವಿಫಲವಾಗುತ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ನಲ್ಲಿ ದೇಶವಾಸಿಗಳ ಜೊತೆ  ತಮ್ಮಅನಿಸಿಕೆ  ಹಂಚಿಕೊಳ್ಳಲಿದ್ದಾರೆ. ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್ಸೈಟ್, ನ್ಯೂಸ್ ಆನ್ ಎಐಆರ್ ಆಪ್ನಲ್ಲೂ ಪ್ರಧಾನಿಯವರ ಭಾಷಣ ಪ್ರಸಾರವಾಗಲಿದೆ. ಇದು 66ನೇ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ.