ಕೌಲಲಾಂಪುರ, ಸೆ 17 ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ವಿವಾದಾತ್ಮಕ ಇಸ್ಲಾಮಿಕ್ ಧರ್ಮಗುರು ಝಾಕಿರ್ ನಾಯಕ್ ಅವರನ್ನು ಹಸ್ತಾಂತರಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ಮನವಿ ಮಾಡಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಾತಿರ್ ಮುಹಮ್ಮದ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಈ ತಿಂಗಳ ಆದಿಯಲ್ಲಿ ರಷ್ಯಾದಲ್ಲಿ ನಡೆದ ಆಥರ್ಿಕ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, ನಾಯಕ್ ಅವರನ್ನು ಹಸ್ತಾಂತರಿಸುವಂತೆ ನವದೆಹಲಿಯಿಂದ ಅಧಿಕೃತ ಸೂಚನೆ ಇದ್ದರೂ ನಾಯಕ್ ಅವರನ್ನು ಹಸ್ತಾಂತರಿಸುವಂತೆ ಮೋದಿ ಮನವಿ ಮಾಡಿಲ್ಲ ಎಂದು ಮಹಾತಿರ್ ಹೇಳಿದ್ದಾರೆ ಎಂದು 'ಮಲೈ ಮೇಲ್' ವರದಿ ಮಾಡಿದೆ.
ಅನೇಕ ದೇಶಗಳು ಅವರನ್ನು ಹುಡುಕುತ್ತಿಲ್ಲ. ನಾನು ಮೋದಿಯವರನ್ನು ಭೇಟಿಯಾದೆ. ಈ ವೇಳೆ ಅವರು ಝಾಕಿರ್ ಅವರನ್ನು ಹಸ್ತಾಂತರಿಸುವಂತೆ ಕೇಳಿಲ್ಲ ಎಂದು ಮೊಹತಿರ್ ಮಂಗಳವಾರ ಬೆಳಿಗ್ಗೆ ಕೌಲಾಲಂಪುರ್ ಮೂಲದ ಬಿಎಫ್ಎಂ ಮಲೇಷ್ಯಾ ರೇಡಿಯೋ ಕೇಂದ್ರಕ್ಕೆ ತಿಳಿಸಿದರು.
53 ವರ್ಷದ ನಾಯಕ್ ಅವರು ನೆಲೆಸಲು ಪುತ್ರಜಯ ನಗರದಲ್ಲಿ ಸ್ಥಳವನ್ನು ಹುಡುಕಲಾಗುತ್ತಿದೆ ಎಂದು ಅವರು ಹೇಳಿದರು.
ಚೀನಿಯರನ್ನು ಚೀನಾಕ್ಕೆ ವಾಪಸ್ ಕಳುಹಿಸಬೇಕು ಎಂಬ ಜನಾಂಗೀಯವಾಗಿ ವಿಭಜಿಸುವ ಹೇಳಿಕೆ ನೀಡಿದ್ದರಿಂದ ನಾಯಕ್ ಅವರನ್ನು ಇನ್ನು ಮುಂದೆ ಮಲೇಷ್ಯಾದಲ್ಲಿ ಸಾರ್ವಜನಿಕವಾಗಿ ಮಾತನಾಡಲು ಅನುಮತಿಸುವುದಿಲ್ಲ ಎಂದು ಮಹಾತಿರ್ ಪುನರುಚ್ಚರಿಸಿದ್ದಾರೆ.
ಅವರು ಈ ದೇಶದ ಪ್ರಜೆಯಲ್ಲ. ಅವರಿಗೆ ಈ ಹಿಂದಿನ ಸರ್ಕಾರ ಶಾಶ್ವತ ನಿವಾಸದ ಸ್ಥಾನಮಾನ ನೀಡಿದೆ. ಶಾಶ್ವತ ನಿವಾಸಿಯೊಬ್ಬರು ಈ ದೇಶದ ವ್ಯವಸ್ಥೆ ಮತ್ತು ರಾಜಕೀಯದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡುವಂತಿಲ್ಲ. ಅವರು ಅದನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರಿಗೆ ಈಗ ಮಾತನಾಡಲು ಅವಕಾಶವಿಲ್ಲ ಎಂದು ಮೊಹತಿರ್ ಹೇಳಿದರು.
ನಾವು ಅವರು ಇರಬೇಕಾದ ಕೆಲವು ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ, ಆದರೆ ಈ ಸಮಯದಲ್ಲಿ ಯಾರೂ ಅವರನ್ನು ಒಪ್ಪಿಕೊಳ್ಳಲು ಬಯಸುತ್ತಿಲ್ಲ ಎಂದು ಪ್ರಧಾನಿ ಹೇಳಿದರು.
ಜುಲೈ 2016ರಲ್ಲಿ ಢಾಕಾದ ಹಾಲಿ ಆರ್ಟಿಸನ್ ಬೇಕರಿಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಗಳು ಜಾಕಿರ್ ನಾಯಕ್ ಅವರ ಭಾಷಣ ಕೇಳಿ ಪ್ರೇರಣೆ ಪಡೆದುಕೊಂಡಿದ್ದೇವೆ ಎಂಬ ಆರೋಪದಲ್ಲಿ ನಾಯಕ್ ವಿರುದ್ಧ ಭಾರತದಲ್ಲಿ ಗಂಭೀರ ಪ್ರಕರಣ ದಾಖಲಿಸಲಾಗಿದೆ.
ವಿವಾದಾತ್ಮಕ 'ಪೀಸ್ ಟಿವಿ'ಯ ಸ್ಥಾಪಕ ಮುಂಬೈ ಮೂಲದ ಝಾಕಿರ್ 2017ರಲ್ಲಿ ಭಾರತದಿಂದ ಪರಾರಿಯಾದ ನಂತರ ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾರೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕಳೆದ ತಿಂಗಳು ನಾಯಕ್ ಮಲೇಷ್ಯಾದ ಯಾವುದೇ ರಾಜ್ಯದಲ್ಲೂ ಸಾರ್ವಜನಿಕ ಭಾಷಣ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಆಗಸ್ಟ್ 3ರಂದು, ಮಲೇಷ್ಯಾದ ಹಿಂದೂಗಳು ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಪಡೆಯುವುದಕ್ಕಿಂತ ಶೇಕಡಾ 100ರಷ್ಟು ಹೆಚ್ಚಿನ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಆದರೂ ಅವರು "ಭಾರತದ ಪ್ರಧಾನ ಮಂತ್ರಿಯನ್ನು ಬೆಂಬಲಿಸುತ್ತಿದ್ದಾರೆ ಹೊರತು ಮಲೇಷ್ಯಾದ ಪ್ರಧಾನ ಮಂತ್ರಿಯನ್ನಲ್ಲ ಎಂದು ಹೇಳಿದ್ದರು. ಇದು ಅಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಝಾಕಿರ್ ನಾಯಕ್ಗೆ ಸಾರ್ವಜನಿಕವಾಗಿ ಮಾತನಾಡುವುದರ ಮೇಲೆ ನಿಷೇಧ ಹೇರಲಾಗಿದೆ.