ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಮೋದಿ: ಸಂಭ್ರಮಾಚರಣೆ

ಲೋಕದರ್ಶನವರದಿ

ಹಾವೇರಿ31 : ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನದ ಸ್ವಿಕರಿಸುವ ಸಮಾರಂಭ ನಿಮಿತ್ಯ  ನಗರದ ಬಿಜೆಪಿ ಕಛೇರಿಯ  ಮುಂದೆ ಪಠಾಕಿ ಸಿಡಿಸಿ, ಸಿಹಿ ವಿತರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.

 ಜಿಲ್ಲಾ ಪ್ರಧಾನಕಾರ್ಯದಶರ್ಿ ಸಿದ್ದರಾಜ ಕಲಕೋಟಿ  ಮಾತನಾಡಿ ಭಾರತದ ಇತಿಹಾಸದಲ್ಲಿ ಸುವಣರ್ಾಕ್ಷರಗಳಿಂದ ಬರದಿಡುವ ದಿನ. ಒಂದು ಪಕ್ಷ ಜನ್ಮ ತಾಳಿ 39 ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಹುಮತದ ಮೂಲಕ ಅಧಿಕಾರವನ್ನು ಪಡೆದಿರುವ ದಿನ ಇದಾಗಿದೆ. ನರೇಂದ್ರ ಮೋದಿಯವರು ಎರಡನೇ ಭಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ಸ್ವಿಕರಿಸುತ್ತಿದ್ದು, ಈ ಅವಧಿಯಲ್ಲಿ ಬಿಜೆಪಿ ಪಕ್ಷ ರಾಷ್ಟ್ರವನ್ನು ವಿಶ್ವದ ಅತ್ಯಂತ ಮುಂದುವರೆದ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತದೆ. ಅಷ್ಟೆ ಅಲ್ಲದೆ ರೈತರು ಸ್ವಾಭಿಮಾನದಿಂದ ಬದಕನ್ನು ಕಟ್ಟಿಕೊಳ್ಳಲು ನಮ್ಮ ಸಕರ್ಾರ ರೈತರಿಗೆ ಸಹಕಾರಿಯಾಗುತ್ತದೆ. 

  ಮುಂದಿನ ದಿನಗಳಲ್ಲಿ ಬಿಜೆಪಿಯ ಅಭಿವೃದ್ದಿಯ ರಾಜಕಾರಣದ ಮುಂದೆ ಕಾಂಗ್ರೇಸ್  ಮೂಲೆ ಗುಂಪಾಗುವದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

    ಶಾಸಕರಾದ ನೆಹರು ಓಲೇಕಾರ.ನಿರಂಜನ ಹೇರೂರ, ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ರಮೇಶ ಪಾಲನಕರ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ವಿವೇಕಾನಂದ ಇಂಗಳಗಿ, ಪ್ರಶಾಂತ ಗಾಣಗೇರ, ತಿಪ್ಪಣ್ಣ ಚೂರಿ, ಕುಮಾರ ಹೊರಕೇರಿ, ಅಲ್ಲಾಭಕ್ಷ ತಿಮ್ಮಾಪೂರ, ಸುರೇಶ ಹೊಸಮನಿ, ಪರಮೇಶ್ವರ ಮೇಗಳಮನಿ, ಪ್ರಕಾಶ ಪತ್ತಾರ, ಸದಾನಂದ ಸುರಳಿಹಳ್ಳಿ, ಮಹಾಲಿಂಗಸ್ವಾಮಿ ಹಿರೇಮಠ, ಪ್ರಕಾಶ ಉಜನಿಕೊಪ್ಪ, ಮಂಜುಳಾ ಕರಬಸಮ್ಮನವರ, ಸೌಭಾಗ್ಯಮ್ಮ ಹಿರೇಮಠ, ರಮೇಶ ಮಿಣಸಿನಕಾಯಿ, ಬಸಂತ ಸವಣೂರ, ಗಿರೀಶ ಶಟ್ಟರ, ನೀಕಿಲ ಡೊಗ್ಗಳ್ಳಿ, ವೆಂಕಟೇಶ ದೈವಜ್ಞ, ಯೂಸಪಲಿ ಕರ್ಜಗಿ, ಸುನೀಲ ರಾಯಕರ, ಸಾತೇನಹಳ್ಳಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.