‘ನಿರಂತರ ಮೀಲಾಪ್ : 1.0 ಹೆಸರಿನ ಮೇಲೆ ಮಿಷನ್ ಪ್ರಾರಂಭ
Mission launched under the name ‘Continuous Meeting: 1.0’
ಬೆಳಗಾವಿ, ಜ.13 : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ದಿನಾಂಕ 09-01-2026 ಹಾಗೂ ದಿನಾಂಕ 10-01-2026 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ, ಕಮಾಂಡರ ಇಂದುಪ್ರಭಾ ವಿ (ನಿ) ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಮತ್ತು ಸೂತ್ತ ಮೂತ್ತಲಿನ ಜಿಲ್ಲೆಗಳ ಮಾಜಿ ಸೈನಿಕರ, ವೀರ್ ನಾರಿಯರ ಮತ್ತು ಅವರ ಅವಲಂಬಿತರ ನಿವೃತ್ತಿ ಪಿಂಚಣಿ, ಕೌಟುಂಬಿಕ ಪಿಂಚಣಿ, () ಸ್ಪರ್ಶಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಮತ್ತು ಇನ್ನಿತರ ಕಲ್ಯಾಣ ಸಂಬಂಧಿತ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಿ ಅವರ ಕುಂದುಕೊರತೆಗಳ ಬಗ್ಗೆ ಪರಿಹಾರವನ್ನು ನೀಡಲು ಪ್ರಯತ್ನೀಸಲಾಯಿತು.
ಭೂಸೇನೆಯ ಮೆಕಾನೈಸ್ಡ್ ಇನ್‌ಪೇಂಟ್ರಿ ರೆಜಿಮೆಂಟ್ ಸೆಂಟರ್ ಅಹ್ಮದ್‌ನಗರ ಇವರಿಂದ ಬೆಳಗಾವಿ ಜಿಲ್ಲೆಯ ಹಾಗೂ ಬೆಳಗಾವಿ ಸೂತ್ತ ಮುತ್ತಲಿನ ಜಿಲ್ಲೆಗಳ ಮಾಜಿ ಸೈನಿಕರ, ವೀರ್ ನಾರಿಯರ ಮತ್ತು ಅವರ ಅವಲಂಬಿತರ ನಿವೃತ್ತಿ ಪಿಂಚಣಿ, ಕೌಟುಂಬಿಕ ಪಿಂಚಣಿ, (ಖಕಂಖಖಊ) ಸ್ಪರ್ಶಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಮತ್ತು ಅವರ ಕಲ್ಯಾಣ ಸಂಬಂಧಿತ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ಯಾನ್ ಇಂಡಿಯಾ ಓಟ್ ರೀಚ್ ಕಾರ್ಯಕ್ರಮದ ಅಂತರಗತ ‘ನಿರಂತರ ಮೀಲಾಪ್ 1.0’ ಹೆಸರಿನ ಮೇಲೆ ಒಂದು ಮಿಷನ್ ಪ್ರಾರಂಭಿಸಲಾಗಿದೆ.
ಮೆಕಾನೈಸ್ಡ್ ಇನ್‌ಪೇಂಟ್ರಿ ರೆಜಿಮೆಂಟ್‌ದ ಕರ್ನಲ್ ಅಪ್ ದಿ ರೆಜಿಮೆಂಟ ಆದ ಲೆಫ್ಟಿನೆಂಟ್ ಜನರಲ್ ಪಿ.ಎಸ್ ಶೀಖಾವತ್, ಪಿವಿಎಸ್‌ಎಮ್, ಎವಿಎಸ್‌ಎಮ್, ಎಸ್‌ಎಮ್ ಇವರ ಮಾರ್ಗದರ್ಶನದಲ್ಲಿ ಮೆಕಾನೈಸ್ಡ್ ಇನ್‌ಪೇಂಟ್ರಿ ರೆಜಿಮೆಂಟ್‌ದ ಒಂದು ತಂಡವು ದಕ್ಷಿಣ ರಾಜ್ಯಗಳ 04 ಜಿಲ್ಲೆಗಳಿಗೆ ಬೇಟಿ ನೀಡಿ ಪ್ಯಾನ್ ಇಂಡಿಯಾ ಓಟ್ ರೀಚ್ ಕಾರ್ಯಕ್ರಮದ ಮೂಖಾಂತರ ‘ನಿರಂತರ ಮೀಲಾಪ್ 1.0’ ಎಂಬ ಹೆಸರಿನ ಮೇಲೆ ಒಂದು ಮಿಷನ್ ಪ್ರಾರಂಭ ಮಾಡಿ ಮಾಜಿ ಸೈನಿಕರು, ವೀರ್ ನಾರಿಯರು ಮತ್ತು ಅವರ ಅವಲಂಬಿತರ ಪಿಂಚಣಿ ಮತ್ತು ಕಲ್ಯಾಣ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವರು. ಮೆಕಾನೈಸ್ಡ್ ಇನ್‌ಪೇಂಟ್ರಿ ರೆಜಿಮೆಂಟ್‌ದ ಕಮಾಂಡಂಟರಾದ ಬ್ರ್ರಿಗೇಡಿಯರ್ ಪಿ ಸುನೀಲ ಕುಮಾರ, ಎಸ್‌ಎಮ್ ಮತ್ತು ಅಭಿಲೇಖ ಕಾರ್ಯಾಲಯದ ಮುಖ್ಯ ಅಧಿಕಾರಿಯಾದ ಲೆಫ್ಟಿನೆಂಟ್ ಕರ್ನಲ್ ಅಶೋಕ ಕುಮಾರ ಇವರ ಅಧ್ಯಕ್ಷತೆಯಲ್ಲಿ ಜನೇವರಿ, 07, 2026 ರಂದು ತಂಡಕ್ಕೆ ಅಹ್ಮದ ನಗರದಿಂದ ‘ನಿರಂತರ ಮೀಲಾಪ್ 1.0’ ಮಿಷನ್‌ನನ್ನು ಪ್ರಾರಂಭಿಸಿ ಜನೇವರಿ, 08, 2026 ರಂದು ಬೆಳಗಾವಿ ನಗರಕ್ಕೆ ತಲುಪಿಸಲಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 