ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ: ಪಟೇಲ್
Missing person: Request for assistance in finding himher
ಕೊಪ್ಪಳ 17: ಇಂದಿನ ಮಕ್ಕಳೇ ಈ ನಾಡಿನ ಬಾವಿ ಪ್ರಜೆ ಗಳಾಗಿದ್ದು ಅವರ ಮುಂದಿನ ಭವಿಷ್ಯ ಉಜ್ವಲ ಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ ,ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಕೊಪ್ಪಳ ನಗರ ಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,ಅವರು ನಗರದ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರಿ್ಡಸಿದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಸರಕಾರಿ ಶಾಲೆಗಳಲ್ಲಿ ನಡೆದಿರುವ ಈ ವಾರ್ಷಿಕೋತ್ಸವ ಮಕ್ಕಳಿಗೆ ಪ್ರೇರಣೆಯಾಗಿದೆ ಇದು ಯಶಸ್ವಿಯಾಗಲು ಈ ಶಾಲೆಯ ಶಿಕ್ಷಕರ ಪರಿಶ್ರಮ ಹೆಚ್ಚಾಗಿದೆ,
ಸರ್ಕಾರಿ ಶಾಲೆಗೆ ಬರುವ ಮಕ್ಕಳು ಬಹುತೇಕ ಬಡ ಕುಟುಂಬದಿಂದ ಬಂದಿರುತ್ತಾರೆ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಒಳ್ಳೆಯ ಸಂಸ್ಕಾರ ಕಲಿಸಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ಸ್ಪರ್ಧಾ ಮನೋಭಾವನೆ ಬೆಳೆಸಿಕೊಂಡು ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಅದಕ್ಕೆ ಪಾಲಕರ ಸಹಕಾರ ಕೂಡ ಅಷ್ಟೇ ಅವಶ್ಯಕತೆ ಇದೆ ಎಂದು ಹೇಳಿದ ಅವರು ಶಾಲೆಗೆ ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಪ್ರಮಾಣಿಕವಾಗಿ ಶ್ರಮಿಸಿ ಒದಗಿಸಿ ಕೊಟ್ಟಿದ್ದೇನೆ ಇನ್ನುಳಿದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಶಾಸಕರಿಗೆ ಮನವರಿಕೆ ಮಾಡಿ ಅವರ ಮೂಲಕ ಒದಗಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,
ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ರವರು ನೆರವೇರಿಸಿ ಮಾತನಾಡಿ ಉರ್ದು ಆಂಗ್ಲ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಲ್ಲಿನ ಕನ್ನಡ ಶಿಕ್ಷಕರು ಅವರಿಗೆ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಕನ್ನಡ ಕೂಡ ಅವರಿಗೆ ಕಲಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು, ಸಮಾರಂಭದ ಸಾನಿಧ್ಯವನ್ನು ಯು ಸೂಫಿ ಯ ಮಸೀದಿ ಕತೀಬ,ವ ,ಇಮಾಮ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ವ. ತಸ್ಕಿನಿಮತ್ತು ಹಾಫೀಸ್ ,ವ, ಕ್ವಾರಿ ಅಬ್ದುಲ್ ಸಮದ್ ಸಿದ್ದಿಕಿ ಸಾಹೇಬ್ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಬಿ ಆರ್ ಸಿ ಸಂಯೋಜಕ ಸೈಯದ್ ಮಹಿಬೂಬ್ ಹುಸೇನ್ , ಎಸ್ ಡಿ ಎಂ ಸಿ ಅಧ್ಯಕ್ಷ ಮಹಿಬೂಬ್ ಹುಸೇನ, ಮಸೀದಿ ಕಮಿಟಿ ಅಧ್ಯಕ್ಷ ಯಾಕೋಬ ಸಾಬ್ ಕಮ್ಮಾರ, ಅಕ್ಬರ್ ಸಾಬ್ ಪೊಲೀಸ್ ಮನಿ ಒಲಿ ಸಾಬ್ , ಖಾಜಾ ವಲಿ ಸಾಬ್ ರೆವಡಿ, ನಾಗರಾಜ್ ಮೇಟಿ ಜಾಫರ್ ಸಾಬ್ ಖಾದರ್ ಸಾಬ್, ಸೈಯದ್ ಬಶೀರ್ ಅಹ್ಮದ್ ಅತ್ತಾರ್, ಸಿ ಆರ್ ಪಿ ಯಲ್ಲಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಶಾಲೆಹ ತಬಸುಠ , ಉರ್ದು ಸಿಆರ್ಿ ಮೈನುದ್ದೀನ್ ಅತ್ತಾರ್ ಅಂಜುಮನ್ ಅಧ್ಯಕ್ಷ ಎಂ.ಡಿ ಆಸಿಫ್ ಕರ್ಕಿಹಳ್ಳಿ, ಹಿರಿಯ ಪತ್ರಕರ್ತ ಸಾಧಿಕ್ ಅಲಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ನಂತರ ಶಾಲಾ ವಿದ್ಯಾರ್ಥಿಗಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣವಾಗಿ ಸಂಪೂರ್ಣವಾಗಿ ಯಶಸ್ವಿ ಗೊಂಡು ಜನಮನ ರಂಜಿಸಿತು, ಇದೆ ವೇಳೆ ಗಣ್ಯರೆಲ್ಲರಿಗೂ ಸನ್ಮಾನಿಸಲಾಯಿತು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 