ಕೊಲಂಬೊ, ನ, 18: ಚುನಾವಣಾ ಫಲಿತಾಂಶದ ನಂತರ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಸಂಪುಟ ಸಚಿವರು ಒತ್ತಾಯ ಮಾಡಿದ್ದಾರೆ. ಹೊಸ ಅಧ್ಯಕ್ಷ ರಾಗಿ ಆಯ್ಕೆಯಾದ ಗೊಟಬಯ ಅವರು ಹೊಸ ಸರಕಾರ ರಚಿಸಲು ಅನುಕೂಲವಾಗುವಂತೆ ಕೂಡಲೇ ಪ್ರಧಾನಿ ರಾಜಿನಾಮೆ ನೀಡಿ ಸಹಕರಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ. ಚುನಾವಣಾ ಸೋಲಿನ ನಂತರ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ಸಂಪುಟ ಸಚಿವರ ಜೊತೆ ಮಾತುಕತೆ ಮಾಡಿದ ನಂತರ ಒತ್ತಾಯ ಕೇಳಿಬಂದಿದೆ. ಮೂಲಗಳ ಪ್ರಕಾರ, ಮಂತ್ರಿಗಳಾದ ರೌಫ್ ಹಕೀಮ್, ಮಂಗಳ ಸಮರವೀರ, ಪಟಾಲಿ ಚಂಪಿಕಾ ರಣವಾಕ ಮತ್ತು ನವೀನ್ ದಿಸನಾಯ್ಕ ಅವರುಗಳು ರಾಜೀನಾಮೆ ನೀಡುವಂತೆ ಪ್ರಧಾನಮಂತ್ರಿಯನ್ನು ಕೋರಿದ್ದಾರೆ ಎನ್ನಲಾಗಿದೆ.