39 ಕೆರೆಗಳ ನೀರು ತುಂಬುವ ಯೋಜನೆಗೆ ಚಾಲನೆ : ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದರಾದ ಪ್ರಿಯಂಕಾ ಜಾರಕಿಹೊಳಿ

39 ಕೆರೆಗಳ ನೀರು ತುಂಬುವ ಯೋಜನೆಗೆ ಚಾಲನೆ : ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದರಾದ ಪ್ರಿಯಂಕಾ ಜಾರಕಿಹೊಳಿ Minister Satish Jarkiholi and MP Priyanka Jarkiholi launch project to fill water in 39 lakes

ರಾಯಬಾಗ 29 : ತಾಲೂಕಿನ  39 ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಯೋಜನೆ ಸಮರ​‍್ಕವಾಗಿ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ಮೇಖಳಿ ಗ್ರಾಮದಲ್ಲಿರುವ ಕೆರೆಗೆ ಬಾಗೀಣ ಅರ​‍್ಿಸಲಿದ್ದಾರೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಮಹಾವೀರ ಮೊಹಿತೆ ಹೇಳಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಕೆರೆಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದರಾದ ಪ್ರಿಯಂಕಾ ಜಾರಕಿಹೊಳಿ ಅವರು ವಿಶೇಷ ಪ್ರಯತ್ನದಲ್ಲಿ ರಾಯಬಾಗ ತಾಲೂಕಿನ 39 ಕೆರೆಗಳ ನೀರು ತುಂಬುವ ಯೋಜನೆ ಚಾಲನೆ ದೊರಕಿದ್ದು ಯಾವ ಯಾವ ಕೆರೆಗಳಿಗೆ ಸಮರ​‍್ಕ ನೀರು ಹೋಗಿದೆಯೋ ಅಥವಾ ಇಲ್ಲ ಎಂಬುವುದರ ಬಗ್ಗೆ ಪರೀಶೀಲನೆ ಮಾಡುತ್ತ ಬರುತ್ತಿದ್ದು, ಯೋಜನೆ ಉತ್ತಮವಾಗಿ ಅನುಷ್ಠಾಣಗೊಂಡಿದೆ.

ಹಾಗಾಗಿ ಕೆರೆಗಳೂ ತುಂಬುತಿವೆ ಎಂದು ಸಂತಸ ವ್ಯಕ್ತಪಡಿಸಿದರು.ಈ ವೇಳೆ ಮಹಾವೀರ ಮೊಹಿತೆ ಅವರು ರಾಯಬಾಗ ತಾಲೂಕಿನ ಮಾವಿನಹೂಂಡ, ಭೆಂಡವಾಡ, ಮಾಡಲಗಿ, ಬುದಿಹಾಳ, ಹುಬ್ಬರವಾಡಿ, ಮೇಖಳಿ ಗ್ರಾಮಗಳ ಕೆರೆಗಳಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸಿದ್ರಾಮ ಪೂಜಾರಿ, ಅನೀಲಗೌಡ ಪಾಟೀಲ, ಜ್ಯೋತಿ ಕೆಂಪ್ಪಟ್ಟಿ,ಮಾರುತಿ ನಾಯಿಕ, ಭೀಮಪ್ಪ ಕುಲಗುಡೆ, ದೀಲೀಪ ಜಮಾದಾರ, ಸಾಗರ ಬಿಳಗಿ , ನಾಗೇಶ ಗೋಟೂರ, ಬ್ರಹ್ಮಾನಂದ ಚೌಗುಲೆ, ಅರುಣ ಪೂಜಾರಿ, ಮಲಕಾರಿ ಕೋಟರೆ, ಅಶೋಕ ನಾಯಿಕ, ಗುರುಪ್ಪ ಮರಡಿ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.29 ರಾಯಬಾಗ  1ಪೋಟೊ  ರಾಯಬಾಗ ಕೆರೆಗಳನ್ನು ವೀಕ್ಷಿಸುತ್ತಿರುವ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಮಹಾವೀರ ಮೊಹಿತೆ ಹಾಗೂ ಗಣ್ಯರು.