ಜಗದೀಶ ಶೆಟ್ಟರ್ ಹೇಳಿಕೆಗೆ ಸಚಿವ ಸಂತೋಷ ಲಾಡ್ ತಿರುಗೇಟು

ಜಗದೀಶ ಶೆಟ್ಟರ್ ಹೇಳಿಕೆಗೆ ಸಚಿವ ಸಂತೋಷ ಲಾಡ್ ತಿರುಗೇಟು     Minister Santosh Lad hits back at Jagadish Shettar's statement

ಜಗದೀಶ ಶೆಟ್ಟರ್ ಹೇಳಿಕೆಗೆ ಸಚಿವ ಸಂತೋಷ ಲಾಡ್ ತಿರುಗೇಟು     

ಕಾರವಾರ 29: ಆರ್‌ಎಸ್‌ಎಸ್ ಇರದಿದ್ದರೆ ಭಾರತ ಮುಸ್ಲಿಮೀಕರಣವಾಗುತ್ತಿತ್ತು ಎನ್ನುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಕಾರವಾರದಲ್ಲಿ ತಿರುಗೇಟು ನೀಡಿದರು.ಕಾರವಾರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಲಾಡ್‌ಬಿಜೆಪಿಯವರಿಗೆ ಹಿಂದುಸ್ತಾನ, ಮುಸಲ್ಮಾನ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ , ದೇಶದಅಸ್ಪೃಶ್ಯತೆ ವ್ಯವಸ್ಥೆ ಬಗ್ಗೆ, ಶೋಷಿತ ವರ್ಗಗಳು ತುಳಿತಕ್ಕೊಳಗಾದ ಬಗ್ಗೆ ಅವರು ಮಾತನಾಡುವುದಿಲ್ಲ ಎಂದು ತಿವಿದರು.ಬೇರೆ ದೇಶಗಳಲ್ಲಿ ಹೋಗಿ ಕೆಲಸ ಮಾಡುತ್ತಿರುವ ಹಿಂದುಗಳನ್ನು ವಾಪಸ್ ಕರೆಸಿಕೊಳ್ಳುತ್ತೀರಾ?,      25 ಲಕ್ಷ ಜನ ಯುವಕರು ಈ ದೇಶದ ಪೌರತ್ವ ಬಿಟ್ಟು, ವೀಸಾ ಮರಳಿಸಿ, ವಿದೇಶಗಳಲ್ಲಿ ನೆಲಸಿದ್ದಾರೆ . ಇದಕ್ಕೆ ಬಿಜೆಪಿಗರು ಉತ್ತರ ನೀಡಲಿ ಎಂದರು.ಬಾಂಗ್ಲಾದೇಶೀಯರನ್ನ ಹೊರಗೆ ಕಳುಹಿಸಬೇಕು ಅಂತಾರೆ,ಯುಪಿಎ ಸರ್ಕಾರದಲ್ಲಿ ನಾವೆಷ್ಟು ಜನರನ್ನ ಹೊರಗೆ ಕಳುಹಿಸೀದೀವಿ, ಬಿಜೆಪಿ ಸರ್ಕಾರದಲ್ಲಿ ಎಷ್ಟು ಬಾಂಗ್ಲಾದೇಶದವರನ್ನು ಹೊರಗೆ ಕಳುಹಿಸಿದ್ದಾರೆ ಅಂಕಿ ಅಂಶ ಕೊಡ್ತಾರಾ? ಎಂದು ಪ್ರಶ್ನಿಸಿದರು.ಜಗದೀಶ ಶೆಟ್ಟರ್ ಸಾಹೇಬರೇ ನೀವೂ ಮುಖ್ಯಮಂತ್ರಿ ಆಗಿದ್ದಿರಿ, ಈಗ ಸಂಸದರಾಗಿದ್ದೀರಿ, ದೇಶಕ್ಕೆ ನಿಮ್ಮ ಪಕ್ಷ ಏನು ಮಾಡಿದೆ ಹೇಳಿ ಎಂದು ಲಾಡ್ ಪ್ರಶ್ನೆ ಹಾಕಿದರು.ಬಿಜೆಪಿಯವರುನೆಹರು, ಮಹಾತ್ಮಾ ಗಾಂಧೀಜಿ ಅವರನ್ನು ಬೈಯ್ಯುತ್ತಾರೆ.ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷ ಆಯ್ತು, ಅವರು ಹಿಂದುಗಳಿಗೆ ಏನು ಮಾಡಿದ್ದಾರೆ?ಎಷ್ಟು ಹಿಂದುಗಳು ದೇಶ ಬಿಟ್ಟು ಹೋಗಿದ್ದಾರೆ?, ಎಷ್ಟು ಮಂದಿ ಪಾಸ್‌ಪೋರ್ಟ್‌ ಸರೆಂಡರ್ ಮಾಡಿದಾರೆ? ಎಂಬ ಬಗ್ಗೆ ಮೊದಲು ಉತ್ತರಿಸಲಿ ಎಂದರು.45 ಲಕ್ಷ ಯುವಕರು ಬೇರೆ ಬೇರೆ ಜಿಸಿಸಿ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರನ್ನೆಲ್ಲ ವಾಪಸ್ ಕರೆಸಬೇಕಲ್ಲ ?ಬಿಜೆಪಿ ಯವರು ಇಂಥದ್ದನ್ನೆಲ್ಲಾ ಚರ್ಚೆ ಮಾಡುವುದಿಲ್ಲ.ಜಗದೀಶ ಶೆಟ್ಟರ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು . ಆಗ ಅವರು ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಏನೇನು ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಸಚಿವ ಲಾಡ್ ನೆನಪಿಸಿದರು.ದೇಶದಲ್ಲಿ 7,63,433 ದೇವಸ್ಥಾನಗಳನ್ನು ಕಾಂಗ್ರೆಸ್ ಕಾಲದಲ್ಲೇ ಕಟ್ಟಿಸಿರೋದು. 

       ಬಿಜೆಪಿಯವರು ರಾಮ ಮಂದಿರ ಬಿಟ್ಟು ಬೇರೇನೂ ಕಟ್ಟಿಲ್ಲ, ಅದು ಕೂಡಾ ಕೇಂದ್ರದ ಹಣದಿಂದ ಕಟ್ಟಿದ್ದು ಎಂದರು.ಏಳು ಲಕ್ಷಕ್ಕೂ ಮಿಕ್ಕಿ ದೇವಸ್ಥಾನಗಳು ಸ್ವಾತಂತ್ರ್ಯ ಪೂರ್ವದಿಂದಲೇ ಈ ದೇಶದಲ್ಲಿದ್ದವು.ನಮ್ಮ ಕಾಲದಲ್ಲಿ ಶಕ್ತಿಪೀಠಗಳಿದ್ದವು. ಈಗಲೂ ಅವು ಚೆನ್ನಾಗಿ ನಡೆಯುತ್ತಿವೆ.ದೇಶದಲ್ಲಿ ಹೆಚ್ಚು ದೇವಸ್ಥಾನಗಳು ತಮಿಳುನಾಡಿನಲ್ಲಿವೆ, ಇಂಡೋನೇಷ್ಯಾದಲ್ಲಿ 11 ಸಾವಿರಕ್ಕೂ ಮಿಕ್ಕಿ ದೇವಸ್ಥಾನಗಳಿವೆ.ಬಿಜೆಪಿಯವರು 11 ವರ್ಷದಿಂದ ಇಲ್ಲಿ ಆಳುತ್ತಿದ್ದಾರೆ. ಹಿಂದೂಗಳಿಗೆ ಇವರಿಂದಲೇ ತೊಂದರೆಯಾಗಿದೆ.ಎಲ್ಲಾ ಕಡೆ ಅಧಿಕಾರದಲ್ಲಿ ಬಿಜೆಪಿಯವರೇ ಇದ್ದಾರೆ. ಈಗ 11ವರ್ಷದ ಬಳಿಕ ಹಿಂದೂಗಳಿಗೆ ತೊಂದರೆಯಾಗಿದೆ.ನಿಮ್ಮ ತಾತ, ನಮ್ಮ ತಾತ ಹಿಂದೂಗಳಾಗಿದ್ದರು . ಅವರಿಗೆ ಆಗದ ತೊಂದರೆ ಈಗ 11 ವರ್ಷದ ಬಳಿಕ ಆಗ್ತಿದೆ ಅಲ್ಲವೇ ಎಂದು ಸಚಿವ ಲಾಡ್‌ ಪ್ರಶ್ನಿಸಿದರು. ಹಿಂದೂಗಳು ಖತ್ರೇ ಮೇ ಹೈ, ಚುನಾವಣೆ ಬಂದಾಗ ಖತ್ರೇ ಜಾಸ್ತಿಯಾಗುತ್ತದೆ. ಜನ ವಿಚಾರ ಏನೇ ಕೇಳಿದರೂ, ಪ್ರಶ್ನೆ ಮಾಡಿದರೂ, ಹಿಂದೂಗಳು ತೊಂದರೆಯಲ್ಲಿದ್ದಾರೆ ಎಂಬ ಏಕೈಕ ಉತ್ತರ ಬಿಜೆಪಿಯಲ್ಲಿ ಸಿದ್ದವಿರುತ್ತದೆ.ಹಿಂದೂಗಳು ತೊಂದರೆಯಾಗುತ್ತಿದ್ದರೆ ,ಅಧಿಕಾರದಲ್ಲಿರುವ ಬಿಜೆಪಿಯವರು ಏನು ಮಾಡ್ತಿದ್ದಾರೆ ? ಇವರೇ ಅಧಿಕಾರದಲ್ಲಿ ಇರೋದಲ್ವಾ ಎಂದು ಲಾಡ್ ಪ್ರಶ್ನಿಸಿದರು.ಚುನಾವಣೆ ಬರೋವಾಗ ಹಿಂದೂಗಳು, ಚುನಾವಣೆ ಮುಗಿದ್ಮೇಲೆ ಎಲ್ಲಾ ಡಬ್ಬಾ ಕ್ಲೋಸ್ ಎಂಬ ಪಾಲಿಸಿ ಬಿಜೆಪಿಯದ್ದು ಎಂದು ಲಾಡ್ ವ್ಯಂಗ್ಯ ವಾಡಿದರು.....