ಜಿಲ್ಲಾ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರ ಉದ್ಘಾಟಿಸಿದ ಸಚಿವ ಸಂತೋಷ ಲಾಡ್
Minister Santhosh Lad inaugurated Day Care Chemotherapy Center at District Hospital
ಧಾರವಾಡ ಜೂ.17: ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರವನ್ನು ನಿನ್ನೆ (ಜೂನ್ 16) ರಂದು ಸಂಜೆ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರವನ್ನು ಎ.ಬಿ.ಎ.ಆರ್.ಕೆ ಯೋಜನೆ ಅಡಿಯಲ್ಲಿ ಊಅಉ ಊಠಿಣಚಿಟ, ಊಣಛಛಚಿಟಟ ಯೊಂದಿಗೆ ಒಡಂಬಡಿಕೆಯೊಂದಿಗೆ ಪ್ರತಿಯೊಂದು ರೋಗಿಗಳಿಗೆ 1 ನೇ ಸೈಕಲ್ ಚಿಕಿತ್ಸೆಯನ್ನು ಮಾಡಿಕೊಂಡವರಿಗೆ ಮುಂದಿನ ಸೈಕಲ್‌ನ್ನು ಒಜಜಛಿಚಿಟ ಓಟಿಛಿಠಠಣ ಅವರ ಅಭಿಪ್ರಾಯ ಹಾಗೂ ಸಲಹೆಯಂತೆ ಚಿಕಿತ್ಸೆಗೆ ಪ್ರತಿ ಬುಧವಾರ ಕ್ಯಾನ್ಸರ್ ರೋಗದ ತಜ್ಞವೈದ್ಯರಿಂದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿಯೇ ಪರೀಕ್ಷಿಸಲಾಗುವುದು ಇದರಿಂದ 2024-2025 ನೇ ಸಾಲಿನ 242 ರೋಗಿಗಳನ್ನು ಕ್ಯಾನ್ಸರ್ ಚಿಕಿತ್ಸೆಗೆ ಕಳುಹಿಸಲಾಗಿದೆ. ಇಲ್ಲಿ ಚಿಕಿತ್ಸೆ ಸಿಗುವುದರಿಂದ ದೂರದ ಊರಿನಿಂದ ಪರದಾಡುವ ಸಾರ್ವಜನಿಕರಿಗೆ ಅನುಕೂಲವಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಲು ವಿನಂತಿಸಿದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯಸ್ಥ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ. ಎನ್. ಗಾಬಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಗಿರಿಜಾತಾಯಿ ಜಿ.ಹೆಚ್, ಹಿರಿಯ ತಜ್ಞವೈದ್ಯರುಗಳಾದ ಡಾ. ಮಯೂರ ಕದಂ ಮತ್ತು ಡಾ. ಎಸ್.ಎಮ್. ಸಾಂಬ್ರಾಣಿ, ಶುಶ್ರೂಷಾ ಅಧೀಕ್ಷಕ ವಿಜಯಕುಮಾರ ಮಳಗಿ, ಕಛೇರಿ ಅಧೀಕ್ಷಕ ವಾಯ್.ಹೆಚ್. ಬನಸೋಡೆ ಹಾಗೂ ಇನ್ನುಳಿದ ಸಿಬ್ಬಂದಿಗಳು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 