ಬುದ್ಧ ವಿಹಾರಕ್ಕೆ ಸಚಿವ ಎಂ.ಬಿ. ಪಾಟೀಲ ಭೇಟಿ : ಭಗವಾನ ಬುದ್ಧರ ಮೂರ್ತಿಗೆ ಭಕ್ತಿಪೂರಕ ನಮನ
Minister M.B. Patil visits Buddha Vihara: Devotional obeisances to the statue of Lord Buddha
ವಿಜಯಪುರ 07 : ಬುದ್ಧ, ಬಸವ ಮತ್ತು ಅಂಬೇಡ್ಕರ ಅವರ ತತ್ವ, ಸಿದ್ದಾಂತಗಳು ಸದಾ ಪ್ರಸ್ತುತವಾಗಿವೆ, ಅವರ ಕನಸುಗಳನ್ನು ನನಸಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಇಂದು ರವಿವಾರ ನಗರದ ಬುದ್ಧ ವಿಹಾರಕ್ಕೆ ಭೇಟಿ ನೀಡಿದ ಅವರು ಭಗವಾನ ಬುದ್ಧರ ಮೂರ್ತಿಗೆ ಭಕ್ತಿಪೂರಕ ನಮನ ಸಲ್ಲಿಸಿದರು. ಬಳಿಕ ಬುದ್ಧ ವಿಹಾರದ ವತಿಯಿಂದ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಸಚಿವ ಪ್ರೊ. ರಾಜು ಆಲಗೂರ ಅವರಿಗೆ ಎಂ.ಎಲ್.ಸಿ(ವಿಧಾನ ಪರಿಷತ ಸದಸ್ಯ)ಯಾಗಿ ಮಾಡಲು ಹೈಕಮಾಂಡ್ ಮನವರಿಕೆ ಮಾಡಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.
ನಮ್ಮ ತಂದೆಯವರ ಕಾಲದಿಂದಲೂ ದಲಿತ ಸಮುದಾಯೊಂದಿಗೆ ನಮ್ಮ ಕುಟುಂಬ ಅವಿನಾಭಾವ ಸಂಬಂಧ ಹೊಂದಿದೆ. ಭೂರಹಿತರಿಗಾಗಿ ಭೂಮಿ ನೀಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಇಲ್ಲಿನ ಬುದ್ಧ ವಿಹಾರ ಅಭಿವೃದ್ಧಿಗೆ ಸದಾ ಬದ್ದನಾಗಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ ಸಿದ್ದಾಂತದಂತೆ ನಾವೆಲ್ಲರೂ ಸಮಸಮಾಜ ನಿರ್ಮಿಸಲು ಕಾರ್ಯೋನ್ಮುಖರಾಗೋಣ ಎಂದು ಅವರು ಹೇಳಿದರು.ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡಲಿದ್ದಾರೆ. ಅವರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಮಾಜಿ ಸಚಿವ ದಿ. ಬಿ. ಎಂ. ಪಾಟೀಲ ಶೋಷಿತ ವರ್ಗದ ಪರವಾಗಿದ್ದರು. ಜನಾನುರಾಗಿಯಾಗಿದ್ದರು. ಅಲ್ಪಸಂಖ್ಯಾತರು ಶಾಸಕರಾಗುವಂತೆ ಮಾಡಿದ್ದರು. ಈಗ ಅವರ ಪುತ್ರ ಸಚಿವ ಎಂ. ಬಿ. ಪಾಟೀಲರು ಅದೇ ಮಾರ್ಗದಲ್ಲಿ ಸಾಗಿದ್ದಾರೆ. ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದು ಹೇಳಿದರು.ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ಮತ್ತು ನಿವೃತ್ತ ಎಂಜಿನಿಯರ್ ರಾಜಶೇಖರ ಯಡಹಳ್ಳಿ ಮಾತನಾಡಿ, ಸಚಿವರು ಬುದ್ಧವಿಹಾರ ನಿರ್ಮಾಣಕ್ಕೆ ರೂ. 4 ಕೋ. ಅನುದಾನ ಒದಗಿಸಿದ್ದಾರೆ.
ಸಮಾಜದ ಕಲ್ಯಾಣಕ್ಕೂ ಕೊಡುಗೆ ನೀಡಿದ್ದಾರೆ. ಬುದ್ಧ ಮತ್ತು ಬಾಬಾಸಾಹೇಬರ ಆಶೀರ್ವಾದ ಎಂ. ಬಿ. ಪಾಟೀಲರ ಮೇಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಸಾಬು ಚಲವಾದಿ, ಶಾಂತೇಶ ಶಹಾಪುರ, ಸುರೇಶ ಘೊಣಸಗಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ, ರಾಜು ತೊರವಿ, ಅಭಿಷೇಕ ಚಕ್ರವರ್ತಿ, ಶಶಿಕಾಂತ ಹೊನವಾಡಕರ, ಸುನೀಲ ಉಕ್ಕಲಿ, ಆನಂದ ಓದಿ, ಕುಮಾರ ಶಹಾಪುರ, ಬಸವಂತ ಗುಣದಾಳ, ರಾಜು ಕುಚಬಾಳ, ಬಸವಂತ ಬ್ಯಾಳಿ,ಎಂ. ಬಿ. ಹಳ್ಳದಮನಿ, ಕುದರಿ, ಮಲ್ಲು ಕುಚಬಾಳ, ಯಂಕು ವಗ್ಯಾನವರ, ಮನೋಜ ಕೋಟ್ಯಾಳ, ರಮೇಶ್ ಯಡಹಳ್ಳಿ, ಮಹಾದೇವ ಬನಸೋಡೆ, ನಾಡಗೇರ,ಸುಜಾತಾ ಚಂಚಲಕರ, ಭಾರತಿ ಹೊಸಮನಿ, ಶಾರದಾ ಹೊಸಮನಿ, ಮುಂತಾದವರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 