ವಿದ್ಯುತ್ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತಸಿದ ಸಚಿವ ಜಾರಕಿಹೊಳಿ
Minister Jarakiholi distributed appointment order letter to electrical staff
ಹುಕ್ಕೇರಿ 05: ಸಹಕಾರಿ ತತ್ವದಡಿ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸೋರಿಕೆಗಳನ್ನು ತಡೆದು ಲಾಭದತ್ತ ತರಲು ಎಲ್ಲರೂ ಪ್ರಯತ್ನಿಸೋಣವೆಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ಹುಕ್ಕೇರಿ ಗ್ರಾಮೀಣ ವಿಧ್ಯುತ್ ಸಹಕಾರಿ ಸಂಘಕ್ಕೆ ಬೆಟ್ಟಿ ನೀಡಿ ಸಿಬ್ಬಂದಿಗಳಿಗೆ ಖಾಯಂ ನೇಮಕಾತಿ ಆದೇಶ ಪತ್ರಗಳ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು ವಿದ್ಯುತ್ ಸಂಘದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಹಂತ ಹಂತವಾಗಿ ನೇಮಕಾತಿ ಪತ್ರಗಳನ್ನು ನೀಡಲಾಗುವದು. ಸಿಬ್ಬಂದಿ ಹಾಗೂ ಕುಟುಂಭದವರಿಗೆ ಸೇವಾ ಭದ್ರತೆ ( ವಿಮಾ ಸೌಲಭ್ಯ ), ಬೋನಸ್ , ಆಡಳಿತ ಮಂಡಳಿಯವರು ಸೌಲಭ್ಯ ಒದಗಿಸಬೇಕು ಎಂದರು.
ಆಡಳಿತ ಮಂಡಳಿ, ಸಿಬ್ಬಂದಿ ವರ್ಗ , ಗ್ರಾಹಕರು ಮತ್ತು ಸರಕಾರ ನಾಲ್ಕು ಅಂಗಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಲ್ಲಿ ಸಹಕಾರಿ ಸಂಘಗಳು ಅಭಿವೃದ್ದಿಯಾಗಲು ಸಾಧ್ಯವೆಂದರು.
ವಿಧ್ಯುತ್ ಸಂಘಕ್ಕೆ ಗ್ರಾಮ ಪಂಚಾಯತಿಗಳ ಬಾಕಿ ಇರುವ 12 ಕೋಟಿ ರೂ ಗಳಲ್ಲಿ 4 ಕೋಟಿ ರೂ ಪಾವತಿಸಲಾಗಿದೆ. ಸರಕಾರದಿಂದ ಗಂಗಾ ಕಲ್ಯಾಣ ಹಾಗೂ ಅತಿವೃಷ್ಠಿಗಳಿಂದ ಬಾಕಿ ಹಣ ಉಳಿದ ಬಿಲ್ಲಗಳನ್ನು ಹಂತ ಹಂತವಾಗಿ ಭರಣಾ ಮಾಡುವ ವ್ಯವಸ್ಥೆ ಮಾಡುವದಾಗಿ ಭರವಸೆ ನೀಡಿದರು.
ಅಲ್ಲದೆ ಖಾಸಗಿ ವಿದ್ಯುತ್ ಉತ್ಪದನಾ ಕಂಪನಿಯವರಿಂದ ಕಡಿಮೆ ದರದಲ್ಲಿ ವಿದ್ಯುತ್ ಖರಿಧಿಸಿ ವಿತರಿಸಿದರೆ ಸಂಘಕ್ಕೆ ಇನ್ನು ಹೆಚ್ಚಿನ ಲಾಭವಾಗಲಿದೆ.
ತೋಟಪಟ್ಟಿಯ ನಿರಂತರ ಯೋಜನೆಯನ್ನು 2 ಕೋಟಿ ರೂ ವೆಚ್ಚದಲ್ಲಿ ಎಲಿಮುನ್ನೋಳಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಲಾಗಿದೆ. ಹಾಗೂ 5 ಕಡೆ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸಹಕಾರಿ ಮಹರ್ಷಿ ದಿ ಅಪ್ಪಣಗೌಡ ಪಾಟೀಲ ಅವರು ಸ್ಥಾಪಿಸಿದ ಸಂಘಕ್ಕೆ ಅವರ ಹೆಸರು ಇಡುವದು ಸೂಕ್ತ ಎಂದರು.
ಬರುವ ಮೂರು ತಿಂಗಳಿನಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಸಚಿವ, ಶಾಸಕ, ಮುಖಂಡರ ಶಿಪಾರಸ್ಸು ಇಲ್ಲದೆ ರೈತರ ಕೆಲಸಗಳು ಆಗಬೇಕು ಆ ರೀತಿ ಆಡಳಿತ ಮಂಡಳಿಯವರು ಗ್ರಾಹಕರೊಂದಿಗೆ ಸ್ಪಂದಿಸಿ ಜನಮನ್ನಣೆ ಪಡೆಯಬೇಕು .
ಈ ನೂತನ ಆಡಳಿತ ಮಂಡಳಿಯ ವಿರೋಧಿ ಬಣದವರು ಈಗಾಗಲೆ ಚುನಾವಣೆಯ ತಾಲೀಮು ಇಟ್ಟಿದ್ದು ತಾವೂ ಕೂಡ ಅದನ್ನು ಗಮನದಲ್ಲಿಟ್ಟುಕೊಂಡು 50 ಸಾವಿರ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನಿಸಿಎಂದು ನೇರವಾಗಿ ಎಂದು ಚುನಾವಣೆ ಸಿದ್ದತೆಗೆ ಅಣಿಗೊಳ್ಳಬೇಕು ಸೂಕ್ಮವಾಗಿ ತಿಳಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿದರು. ಅಧ್ಯಕ್ಷ ಜಯಗೌಡ ಪಾಟೀಲ, ಉಪಾದ್ಯಕ್ಷ ವಿಷ್ನು ರೇಡೆಕರ, ನಿರ್ದೇಶಕರಾದ ರವಿಂದ್ರ ಹಿಡಕಲ್, ಕುನಾಲ್ ಪಾಟೀಲ, ಬಸಗೌಡ ಮಗೆಣ್ಣವರ ಸೋಮಲಿಂಗ ಪಾಟೀಲ, ಜೋಮಲಿಂಗ ಪಟೋಳಿ, ರವಿಂದ್ರ ಅಸೋದೆ, ಈರಾ್ಪ ಬಂಜಿರಾಮ ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್. ಹುಕ್ಕೇರಿ ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್ ರಿಷಭ್ ಪಾಟೀಲ, ಮೌನೇಶ ಪೋತದಾರ ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪಕ ನಿರ್ದೆಶಕ ರವೀಂದ್ರ ಪಾಟೀಲ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ವ್ಯವಸ್ಥಾಪಕ ದುರದುಂಡಿ ನಾಯಿಕ ಉದಯ ಮಗದುಮ್ಮ ಸಹಕರಿಸಿದರು. ರವಿಂದ್ರ ಹಿಡಕಲ್ ವಂದಿಸಿದರು.
ಇದಕ್ಕೂ ಮೊದಲು ಹುಕ್ಕೇರಿ ಪುರಸಭೆಗೆ ತೆರಳಿ ಸಾರ್ವಜನಿಕರ ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಆದ್ಯಕ್ಷ ಇಮ್ರಾನ್ ಮೋಮಿನ್. ಉಪಾಧ್ಯಕ್ಷ ಜ್ಯೋತಿ ಬಡಿಗೇರ, ತಹಶಿಲ್ದಾರ ಮಂಜುಳಾ ನಾಯಕ, ಇಓ ಟಿ ಬಆರ್ ಮಲ್ಲಾಡದ, ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 