ಬೆಳಗಾವಿ 09 : ವಿವಿಧ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ ಹಿನ್ನಲೆ. ಪ್ರತಿಭಟನಾ ಸ್ಥಳಕ್ಕೆ ಸಚಿವ ದಿನೇಶ್ ಗುಂಡುರಾವ್ ಅವರು ಸೋಮವಾರ ಭೆಟ್ಟಿ ನೀಡಿದರು.
ಭೇಟಿ ಬಳಿಕ ಸಚಿವ ದಿನೇಶ್ ಗುಂಡುರಾವ್ ಮಾಧ್ಯಮಗಳ ಜೊತೆ ಮಾತನಾಡಿ, ಖಾನಾಪುರ ರೈತ ಸಂಘಟನೆ ಕೆಲವು ಸಮಸ್ಯೆಗಳ ಪ್ರಸ್ತಾಪ ಮಾಡಿದ್ದಾರೆ. ಮಹದಾಯಿ, ಕಳಸಾ ಬಂಡೂರಿ ಯೋಜನೆಗಳನ್ನೂ ಅತಿ ಶೀಘ್ರದಲ್ಲಿ ಮಾಡಬೇಕು. ರೈಲು ಯೋಜನೆ ಕೆಲವು ಮಾರ್ಾಡು ಮಾಡುವ ಕುರಿತು ಮನವಿ ಸ್ವೀಕರಿಸಿದೆ. ಕೆಎಸ್‌ಆರ್ಟಿಸಿ ನೌಕರ ಕೆಲವು ಬೇಡಿಕೆಗಳನ್ನೂ ಸ್ವೀಕಾರ ಮಾಡಿದ್ದು. ಈ ಕುರಿತು ಸಿಎಂ ಅವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಆರೋಗ್ಯ ಸಮಸ್ಯೆ ಕಾರಣ ಸಾರಿಗೆ ಸಚಿವರು ಬಂದಿಲ್ಲ. ಯರಗಟ್ಟಿ, ಮೂಡಲಗಿ ಹೊಸ ತಾಲೂಕುಗಳ ಕಾಮಗಾರಿ ಕುರಿತು ವಿವಿಧ ಸಂಘಟನೆಗಳ ಬೇಡಿಕೆ. ಹೂಗಾರ ಸಮಾಜ ಛಿ, ಣ ಸೇರಿಸುವ ಕುರಿತು ಬೇಡಿಕೆ ಇದೆ. ರೈತ ಹಸಿರು ಸೇನೆ ಸಂಘಟನೆಯ ವಿವಿಧ ಬೇಡಿಕೆ ಕುರಿತು ಮನವಿ ತೆಗೆದುಕೊಂಡಿದ್ದೇನೆ. ಮುಖ್ಯಮಂತ್ರಿಗಳು ಹೇಳಿದ್ದಾರೆ ಎಲ್ಲ ಬೇಡಿಕೆಗಳ ಮಾಹಿತಿ ಕೊಡಿ ಎಂದು. ರಾತ್ರಿ ವೇಳೆ ಭೇಟಿ ನೀಡಿ ಎಲ್ಲ ಮಾಹಿತಿ ತಿಳಿಸುತ್ತೇನೆ ಎಂದರು.
ಯಾವುದಕ್ಕೆ ಯಾವುದೆಲ್ಲ ರೀತಿ ಸ್ಪಂದನೆ ಮಾಡಬೇಕು. ಈಗಲೇ ತೀರ್ಮಾನ ಮಾಡೋದು ಈಗಲೇ ಮಾಡೋಣ. ಕೆಲವುಗಳನ್ನು ಇಲಾಖೆ ಸಚಿವರ ಜೊತೆ ಚರ್ಚೆ ಮಾಡೋಣ. ಪ್ರಜಾಪ್ರಭತ್ವದಲ್ಲಿ ಹೋರಾಟ ಇದ್ದೆ ಇರುತ್ತೆ ಎಲ್ಲ ಈಡೇರಿಸಲು ಸಾಧ್ಯ ಆಗಲ್ಲ. ಅವರ ದೃಷ್ಟಿಯಿಂದ ಎಲ್ಲ ಒಳ್ಳೆಯದೇ ಇರುತ್ತೆ. ಪ್ರತಿಭಟನಾ ಸ್ಥಳಕ್ಕೆ ಕುಡಿಯುವ ನೀರಿಗೆ ಹೆಚ್ಚಿನ ವ್ಯವಸ್ಥೆ ಮಾಡುವ ಭರವಸೆಯನ್ನು ಸಚಿವ ಗುಂಡೂರಾವ್ ನೀಡಿದರು.