ಕೆನಡಾದ ಸಿಖ್ ಪ್ರತ್ಯೇಕತಾವಾದಿ ಹಿಂಸಾಚಾರದ ಹಿಂದೆ ಸಚಿವ ಅಮಿತ್ ಶಾ ಕೈವಾಡ: ಕೆನಡಾ ಸಚಿವ
ಒಟ್ಟಾವಾ 30: ಕೆನಡಾದೊಳಗಿನ ಸಿಖ್ ಪ್ರತ್ಯೇಕತಾವಾದಿ ಗುಂಪುಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣೆಯ ಅಭಿಯಾನ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಯುಎಸ್ ಮಾಧ್ಯಮಗಳೊಂದಿಗೆ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.