ಬೆಂಗಳೂರು, ಏ.21, ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವೈದ್ಯೆಗೆ ತೋರಿದ ಗೌರವ ಕುರಿತು ವೈದ್ಯಕೀಯ ಶಿಕ್ಷಣ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.ಅಮೆರಿಕಾದಲ್ಲಿ ವೈದ್ಯರಾಗಿರುವ ಮೈಸೂರು ಮೂಲದ ಡಾ.ಉಮಾ ಮಧುಸೂಧನ್ಗೆ ಅಲ್ಲಿಯ ಜನರು ವಿಶೇಷ ಗೌರವವೊಂದನ್ನು ಸಲ್ಲಿಸಿದ್ದಾರೆ.ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದ ಇವರಿಂದ ಗುಣಮುಖರಾದವರು, ಅಲ್ಲಿನ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಮ್ಮ ವಾಹನಗಳ ಮೂಲಕ ಉಮಾ ಅವರ ಮನೆ ಮುಂದೆ ಪರೇಡ್ ನಡೆಸಿದ್ದಾರೆ. ಈ ವೇಳೆ ಪ್ಲೇಕಾರ್ಡ್ ಹಿಡಿದು ಕೃತಜ್ಞತೆ, ಗೌರವ ತೋರಿದ್ದಾರೆ. ಅಲ್ಲಿನ ಜನರು ತೋರಿರುವ ಈ ಪ್ರೀತಿಯನ್ನು ನೋಡಿ ಸಾರ್ಥಕತೆಯನ್ನು ಕಂಡಂತಾಯಿತು ಎಂದು ಬರೆದುಕೊಳ್ಳುವ ಮೂಲಕ ವಿಡಿಯೋ ಒಂದನ್ನು ಸಚಿವರು ಹಂಚಿಕೊಂಡಿದ್ದಾರೆ.