ಬೇವು ಮರದಿಂದ ಹಾಲಿನಂತೆ ಬಿಳಿ ದ್ರವ ಸೋರಿಕೆ; ಭಕ್ತರಲ್ಲಿ ಕುತೂಹಲ
Milk-like white fluid oozes from neem tree; sparks curiosity among devotees
ಯಲಬುರ್ಗಾ, ಆ. 28: ತಾಲೂಕಿನ ಸಂಗನಾಳ ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದ ಆವರಣದಲ್ಲಿರುವ ಬೇವು ಮರವೊಂದರ ಕಾಂಡದಿಂದ ಹಾಲಿನಂತಿರುವ ಬಿಳಿ ದ್ರವ ಸೋರಿಕೆಯಾಗುತ್ತಿರುವುದು ಕಂಡುಬಂದಿದ್ದು, ಸ್ಥಳೀಯರು ಹಾಗೂ ಭಕ್ತರಲ್ಲಿ ಕುತೂಹಲ ಮೂಡಿಸಿದೆ.
ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಬೇವು ಮರದ ಕಾಂಡದಿಂದ ಬಿಳಿ ದ್ರವ ಹೊರಬರುತ್ತಿರುವುದನ್ನು ಗಮನಿಸಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಮರಕ್ಕೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಕೆಲ ಭಕ್ತರು ಇದನ್ನು ದೈವಿಕ ಪವಾಡವೆಂದು ನಂಬಿ, ಮರಕ್ಕೆ ಹಾಲು ಹಾಗೂ ಹೂವುಗಳನ್ನು ಅರ್ಿಸಿ ಪೂಜೆ ಸಲ್ಲಿಸಿದರು. ಅಪರೂಪದ ದೃಶ್ಯವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರೂ ದೇವಸ್ಥಾನದತ್ತ ಆಗಮಿಸುತ್ತಿದ್ದು, ಸ್ಥಳದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.
“ಬೇವು ಮರದಿಂದ ಈ ರೀತಿಯಾಗಿ ಹಾಲಿನಂತೆ ಬಿಳಿ ದ್ರವ ಸೋರಿಕೆಯಾಗುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಇದು ದೇವರ ಪವಾಡ ಎಂಬುದು ನಮ್ಮ ನಂಬಿಕೆ,” ಎಂದು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದರು.
ತಜ್ಞರ ಪರೀಶೀಲನೆ ಅಗತ್ಯ
ಘಟನೆಯ ಕುರಿತು ಸ್ಥಳೀಯರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಬೇವು ಮರದಿಂದ ಸೋರಿಕೆಯಾಗುತ್ತಿರುವ ದ್ರವದ ನೈಜ ಕಾರಣವನ್ನು ತಜ್ಞರು ಪರೀಶೀಲಿಸಿದ ಬಳಿಕವೇ ಖಚಿತಪಡಿಸಿಕೊಳ್ಳಬೇಕಿದೆ.
ಇದು ನಿಜಕ್ಕೂ ದೈವಿಕ ಪವಾಡವೇ ಅಥವಾ ಮರದಲ್ಲಿ ಉಂಟಾಗಿರುವ ನೈಸರ್ಗಿಕ ಪ್ರಕ್ರಿಯೆಯಿಂದ ದ್ರವ ಸೋರಿಕೆಯಾಗುತ್ತಿದೆಯೇ ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ತಜ್ಞರಿಂದ ವೈಜ್ಞಾನಿಕ ಪರೀಶೀಲನೆ ನಡೆಸಿ ವಾಸ್ತವಾಂಶ ತಿಳಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸದ್ಯ ಬೇವು ಮರದಿಂದ ಬಿಳಿ ದ್ರವ ಸೋರಿಕೆಯಾಗುತ್ತಿರುವ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹರಡಿದ್ದು, ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಭಕ್ತರ ಭೇಟಿ ಮುಂದುವರಿದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 