ಹಾಲು ಉತ್ಪಾದನೆ ಹೆಚ್ಚಿಸಲು ಹಾಲು ಒಕ್ಕೂಟ ಪ್ರೋತ್ಸಾಹ ನೀಡುತ್ತಿದೆ: ಬಸವರಾಜ

ಧಾರವಾಡ .01: ವಿಶೇಷ ಪೋಷಕಾಂಶಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಆಹಾರವಾಗಿರುವ ಹಾಲು ; ಇಂದು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ಧಾರವಾಡ ಹಾಲು ಒಕ್ಕೂಟವು ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

ನಗರದ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ವಿಶ್ವಹಾಲು ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವ ಹಾಲು ದಿನಾಚರಣೆಯು 2001 ರಿಂದ ಆಚರಣೆಗೆ ಬಂದಿದ್ದು, ಹಾಲಿನಲ್ಲಿರುವ ಎಲ್ಲಾ ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಪ್ರಚುರಪಡಿಸಲು ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಅಪೌಷ್ಠಿಕತೆ ಹೋಗಲಾಡಿಸಲು ಆರಂಭದಲ್ಲಿ ಅಂಗನವಾಡಿ ಮಕ್ಕಳಿಗೆ ಮಾತ್ರ ಹಾಲನ್ನು ವಿತರಿಸಲಾಗುತ್ತಿತ್ತು.   ಆದರೆ ಭಾರತದಲ್ಲಿ ಅದರಲ್ಲೂ ಕನರ್ಾಟಕ ಮಕ್ಕಳಲ್ಲಿಯ ವಿಶೇಷ ಪೋಷಕಾಂಶಗಳ ಕೊರತೆಯನ್ನು ಪರಿಗಣಿಸಿ ರಾಜ್ಯ ಸಕರ್ಾರವು ಕ್ಷೀರಭಾಗ್ಯ ಎಂಬ ಕಾರ್ಯಕ್ರಮ ಜಾರಿಗೆ ತಂದಿತು.  ಈ ಮೂಲಕ ಎಲ್ಲ ಮಕ್ಕಳಿಗೂ ಹಾಲು ವಿತರಿಸಲು ಕ್ರಮ ಕೈಗೊಂಡಿದೆ. ಹಾಲು ಒಂದು ಪೂರ್ಣ ಪ್ರಮಾಣದ ಆಹಾರ. ಹಾಲಿನಲ್ಲಿರುವಂತಹ ಸೂಕ್ಷ್ಮ ಪೋಷಕಾಂಶಗಳನ್ನು ಸೇವಿಸುವುದರಿಂದ ಮಕ್ಕಳು ಆರೋಗ್ಯವಾಗಿ ಮತ್ತು ಸದೃಢವಾಗಿ ಬೆಳೆಯುತ್ತಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಾಲು ಒಕ್ಕೂಟದ ನಿದರ್ೆಶಕರಾದ ಎನ್.ಎಸ್. ಅಸೂಟಿ, ಶಂಕರ ಮುಗದ, ಸುರೇಶ್, ಬಣವಿ, ಗೀತಾ ಸುರೇಶ್ ಮರಿಲಿಂಗಣ್ಣವರ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಡಾ: ಸುಷ್ಮಾ ರಾಮನಗೌಡರ ಅವರು ಹಾಲಿನ ಮಹತ್ವ ಮತ್ತು ಚಿಕ್ಕಮಕ್ಕಳಿಗೆ ಹಾಲಿನ ಅವಶ್ಯಕತೆ ಕುರಿತು ಹಾಗೂ ಡಾ: ಪ್ರವೀಣಕುಮಾರ್ ಪ್ರಭು ಟಿ., ಅವರು ದಂತ ಆರೋಗ್ಯ ಸಂಬಂಧಿತ ಹಾಲಿನ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಶಾಲಾ, ಕಾಲೇಜು ವಿದ್ಯಾಥರ್ಿಗಳಿಗೆ ವಿಶ್ವ ಹಾಲು ದಿನಾಚರಣೆ ನಿಮಿತ್ಯ ನಂದಿನಿ ಬಾದಾಮ ಹಾಲು, ಶಾಲಾ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ರೈತರ ಜೀವನಾಡಿ ಮತ್ತು ಗ್ರಾಹಕರ ನೆಚ್ಚಿನ ನಂದಿನಿ ವಿಷಯ ಕುರಿತು ಸಿಎಸ್ಐ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಮೂಕಾಭಿನಯದ ಮೂಲಕ ಕಿರುನಾಟಕ ಪ್ರಸ್ತುತಪಡಿಸಿದರು. 

       ಹಾಲು ಒಕ್ಕೂಟದ ಶೇಖರಣೆ ಹಾಗೂ ತಾಂತ್ರಿಕ ವಿಭಾಗದ ಉಪವ್ಯವಸ್ಥಾಪಕರಾದ ಡಾ: ವೀರೇಶ್ ತರಲಿ  ಸ್ವಾಗತಿಸಿದರು. ವ್ಯವಸ್ಥಾಪಕರಾದ ಡಾ: ಎಸ್.ಎಸ್. ಆಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್. ಕೋಡಿಯಾಲಮಠ ಕಾರ್ಯಕ್ರಮ ನಿರೂಪಿಸಿದರು. ಆರ್.ಎಸ್. ಸಿದ್ಧರಾಜು ವಂದಿಸಿದರು. 

      ಜನಜಾಗೃತಿ ಜಾಥಾ - ವಿಶ್ವಹಾಲು ದಿನಾಚರಣೆ ಅಂಗವಾಗಿ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಾಲು ಒಕ್ಕೂಟವು ಶಾಲಾ, ಕಾಲೇಜು ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಹಾಲಿನ ಮಹತ್ವ ಸಾರಲು ಜನಜಾಗೃತಿ ಜಾಥಾವನ್ನು ಆಯೋಜಿಸಿತ್ತು. 

ವಿವಿಧ ಶಾಲಾ-ಕಾಲೇಜು ವಿದ್ಯಾಥರ್ಿಗಳು ಮತ್ತು ಹಾಲು ಒಕ್ಕೂಟದ ನಿದರ್ೆಶಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ನಿದರ್ೆಶಕ ಸುರೇಶ್ ನಾಯ್ಕ ಅವರು ಚಾಲನೆ ನೀಡಿದರು. ಜಾಥಾವು ಗಾಂಧಿ ನಗರದ ಈಶ್ವರ ದೇವಸ್ಥಾನದಿಂದ ಆರಂಭವಾಗಿ ಆಲೂರು ವೆಂಕಟರಾವ್ ವೃತ್ತದ ಮೂಲಕ ಸಂಚರಿಸಿ ಆಲೂರು ವೆಂಕಟರಾವ್ ಭವನಕ್ಕೆ ಬಂದು ಮುಕ್ತಾಯಗೊಂಡಿತು.