ಮಾಸ್ಕೋ, ಜನವರಿ 6 (ಸ್ಪುಟ್ನಿಕ್) ಇರಾಕ್ , ಇರಾನ್ ಮತ್ತು ಮಧ್ಯಪ್ರಾಚ್ಯ ಪರಿಸ್ಥಿತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ದೂರವಾಣಿ ಸಂಭಾಷಣೆ ಮಾಡಿದ್ದಾರೆ. ಈ ವಿಷಯದಲ್ಲಿ ವಾಷಿಂಗ್ಟನ್ ಮತ್ತು ಲಂಡನ್ ನಡುವಿನ ನಿಕಟ ಮೈತ್ರಿಯನ್ನು ಇಬ್ಬರು ನಾಯಕರೂ ಪುನರುಚ್ಚರಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಮಾತನಾಡಿದರು. ಉಭಯ ನಾಯಕರು ಇರಾಕ್ ಮತ್ತು ಇರಾನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಮಗ್ರವಾಗಿ ಚರ್ಚಿಸಿ, ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಪುನರುಚ್ಚರಿಸಿದ್ದಾರೆ ಎಂದು ಬಳಿಕ ಶ್ವೇತಭವನದ ವಕ್ತಾರ ಹೊಗನ್ ಗಿಡ್ಲಿ ಹೇಳಿದ್ದಾರೆ.ಇರಾಕ್ ನಲ್ಲಿ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ, ಇತ್ತೀಚಿಗಿನ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಕುರಿತು ಮಾತುಕತೆ ನಡೆಸಲಾಗಿದೆ.