ವಿ.ಸೋಮಣ್ಣ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಭೇಟಿಮಾಡಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು
Met V. Somanna at the Hosapete railway station and submitted a petition of demands
ವಿಜಯನಗರ 12: ರೈಲ್ವೇ ಬಳಕೆದಾರರ ಸಂಘದ ಪದಾಧಿಕಾರಿಗಳು ದಿ. 11ರಂದು ವಿಶೇಷ ರೈಲಿನಲ್ಲಿ ರಾತ್ರಿ ಕೇಂದ್ರ ಜಲಶಕ್ತಿ ಹಾಗು ರೈಲ್ವೇ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ನವರನ್ನು ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಭೇಟಿಮಾಡಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಹೊಸಪೇಟೆ ನಗರವು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿ ನಂತಿದ್ದು ಪ್ರವಾಸೋದ್ಯಮ ನೀರಾವರಿ ಕೈಗಾರಿಕೆಗಳ ಕೇಂದ್ರ ಸ್ಥಳದಲ್ಲಿದ್ದು, ನಗರದಲ್ಲಿ ಹಾದು ಹೋಗುವ ರೈಲ್ವೇ ಮಾರ್ಗದ ಕೆಲವು ಕಡೇ ಮೇಲುಸೇತುವೆ ಅಗತ್ಯವಾಗಿದೆ. ಹೆಚ್ಚಾಗುತ್ತಿರುವ ವಾಹನಗಳ ಸುಗಮ ಸಂಚಾರ ಮತ್ತು ಸಾರ್ವಜನಿಕರು ರೈತರು ವಿಧ್ಯಾರ್ಥಿಗಳು ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಈ ಕೆಳಕಾಣಿಸಿದ ಗೇಟ್‌ಗಳಲ್ಲಿ ಮೇಲುಸೇತುವೆ ನಿರ್ಮಿಸುವ ಅಗತ್ಯವಿದೆ 1)ಎಲ್.ಸಿ.ಗೇಟ್ ನಂ.10 ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರ ಟಿಬಿ ಡ್ಯಾಂ ಕಡೆಗೆ ಹೋಗುವ ರೈಲ್ವೇ ಮಾರ್ಗ. 2)ಎಲ್.ಸಿ.ಗೇಟ್ ನಂ.4 ಚಿತ್ತವಾಡಿಗಿ ಐ.ಎಸ್.ಆರ್ ಫ್ಯಾಕ್ಟರಿಗೆ ಹತ್ತಿರ. 3)ಎಲ್.ಸಿ.ಗೇಟ್ ನಂ.83 ಹೊಸಪೇಟೆ ರೈಲ್ವೇ ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ ನಂ.88- ಮುದ್ಲಾಪುರ ಗೇಟ್, ಅಲ್ಲದೆ 4)ಅನಂತಶಯನಗುಡಿ ರೈಲ್ವೇ ಮೇಲ್‌ಸೇತುವೆ ನಿರ್ಮಾಣ ಮಂದಗತಿಯಲ್ಲಿ ಸಾಗಿದ್ದು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗು ರೈಲ್ವೇ ಮಾರ್ಗದ ಎರಡೂ ಕಡೆ ಮನೆ ಕಳೆದು ಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಯಿತು ಅಲ್ಲದೆ ವಿಶೇಷ ರೈಲಾಗಿ ಹೆಚ್ಚುವರಿ ಟಿಕೇಟ್ ದರ ಇರುವ 5) ವಿಜಯಪುರ ಯಶವಂತಪುರ (ಗಾಡಿ ಸಂಖ್ಯೆ.06545/06546) ರೈಲನ್ನು ಖಾಯಂ ಗೊಳಿಸಿ ಪ್ರಯಾಣ ದರ ಇಳಿಸಬೇಕು ಉತ್ತರ ಕರ್ನಾಟಕ ಜಿಲ್ಲೆಗಳಿಂದ ಮಂತ್ರಾಲಯ ಹೈದ್ರಾಬಾದ್ ಕಡೆಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕೆ ಸಂಚಾರ ರದ್ದಾಗಿರುವ 6)ಬೆಳಗಾವಿ-ಮನಗುರು (ಗಾಡಿ ಸಂಖ್ಯೆ: 07335/07336) ಪುನರಾರಂಬಿಸಬೇಕು. 7)ಹೊಸಪೇಟೆ-ತುಮಕೂರು ನಡುವೆ ನೂತನ ರೈಲು ಪ್ರಾರಂಭಿಸಬೇಕು : ಹೊಸಪೇಟೆಯಿಂದ ಬೆಳಿಗ್ಗೆ 6.00 ಗಂಟೆಗೆ ಹೊರಡುವ ಹಾಗೂ ತುಮಕೂರಿನಿಂದ ಹೊಸಪೇಟೆಗೆ ರಾತ್ರಿ ಹಿಂದಿರುಗುವ ನೂತನ ರೈಲಿನ ಅವಶ್ಯಕತೆ ಇದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 