ಹೃದಯಾಘಾತಕ್ಕೆ ಮಾನಸಿಕ ಒತ್ತಡ ಕಾರಣ: ಡಾ. ಶ್ರೀಧರ್ ಕುಲಕರ್ಣಿ
Mental stress is the cause of heart attack: Dr. Sridhar Kulkarni
ಧಾರವಾಡ 5: ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ಶೈಲಿ ಬದಲಾಗಿದೆ. ಧಾವಂತ ಜಗತ್ತಿನಲ್ಲಿ ಮಾನಸಿಕ ಒತ್ತಡ ಕೂಸಿನಿಂದ ವಯೋವೃದ್ಧರ ವರೆಗೆ ಸಾಮಾನ್ಯವಾಗಿದೆ. ಇದಕೆ ಪರಿಹಾರ ಸಂಗೀತ, ಧ್ಯಾನ, ಆಹಾರ ಪದ್ಧತಿ ನಿಯಮ ಪಾಲಿಸುವುದೆಂದು ಮಾನಸಿಕ ತಜ್ಞರಾದ ಡಾ. ಶ್ರೀಧರ್ ಕುಲಕರ್ಣಿ ಹೇಳಿದರು.
ಅವರು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಧಾರವಾಡ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಿದ್ದ ಲಿಂ. ಗುರ್ಪ ಹಾಗೂ ಗೌರಮ್ಮ ಬೆಲ್ಲದ ದತ್ತಿ, ಶ್ರೀಮತಿ ಶಿವಲಿಂಗಮ್ಮ ಕಟ್ಟಿ ದತ್ತಿ, ಲಿಂ. ವೀರ್ಪ ವೀರಭದ್ರ್ಪ ಗಡಾದ ದತ್ತಿ ಹಾಗೂ ಶ್ರೀ ಚಂದ್ರಶೇಖರ ಗೌಡ ಬಸನಗೌಡ ಪಾಟೀಲ್ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಅದೇ ರೀತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಗುರು ಹಿರೇಮಠ, ಡಾ. ಶ್ರೀಧರ್ ಕುಲಕರ್ಣಿ, ಮನೋಜಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರಮೀಳಾ ಜಕ್ಕನ್ನವರ ಹಾಗೂ ಎಫ್ ಬಿ ಕಣವಿ ಕನ್ನಡ ನಾಡು ನುಡಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪ್ರೊ. ಕೆ ಎಸ್ ಕೌಜಲಗಿ ನಿರೂಪಿಸಿದರು. ಮಹಾಂತೇಶ ನರೇಗಲ್ ಪ್ರಾರ್ಥಿಸಿದರು. ಪ್ರೊ.ಶೇಖರ್ ಸಜ್ಜನರ ವಂದಿಸಿದರು.
ದತ್ತಿ ದಾನಿಗಳು ಆದ ಚಂದ್ರಶೇಖರ ಪಾಟೀಲ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಗುರು ತಿಗಡಿ, ಎಚ್ ಎಸ್ ಬಡಿಗೇರ, ಗುರು ಪೋಳ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಶಶಿಕಲಾ ಶಾಸ್ತ್ರಿ ಮಠ, ಮನೋಹರ ವಾಲಗದ, ಅನುರಾಧ ಕುಲಕರ್ಣಿ, ಎಮ್ ಸಿ ಯಲಿಗಾರ, ಎಮ್ ಎ ಭಾವಿಕಟ್ಟಿ, ಎಮ್ ಕೆ ನದಾಫ್, ರೇವಣಸಿದ್ದಪ್ಪ, ಗಂಗಾಧರ ಗಾಡದ , ಸಂಜೀವ ಡುಮಕನಾಳ , ಸುಮಾಂಗಲಾ ದಂಡೀನ , ಗಂಗವ್ವ ಕೋಟಿಗೌಡರ, ಜಿ ಐ ಬುಯ್ಯಾರ ಮುಂತಾದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 