ಗದಗ 28: ಇತ್ತೀಚಿನ ದಿನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಗವಿಕಲತೆೆ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತಿದ್ದು ವಿಕಲಚೇತನರಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಹಾಗೂ ಪುನರ್ವಸತಿ ಕಾರ್ಯಕರ್ತರು ಅರ್ಹರಿಗೆ ಸೌಲಭ್ಯ ದೊರಕಿಸಲು ಈ ಕುರಿತು ಸಂಪೂರ್ಣ ಮಾಹಿತಿ ಹೊಂದಲು ಪುನರ್ ಮನನ ಕಾರ್ಯಕ್ರಮ ಜರುಗಿಸಲು ಹಾಗೂ ಈ ಮಾಹಿತಿಯನ್ನು ಗ್ರಾಮೀಣ ಮಟ್ಟದಲ್ಲೂ ಅಗತ್ಯವುಳ್ಳವರಿಗೆ ಗೊತ್ತಾಗುವಂತೆ ಹೆಚ್ಚಿನ ಪ್ರಯತ್ನಗಳು ನಡೆಯಬೇಕು ಎಂದು ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತ ಎಸ್.ವಿ. ಬಸವರಾಜು ಸೂಚಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ವಿವಿಧ ಪುನರ್ವಸತಿ ಕಾರ್ಯಕರ್ತರ ಸಭೆಯಲ್ಲಿ ಅಂಗವಿಕಲರಿಗೆ ಗದಗ ಜಿಲ್ಲೆಯಲ್ಲಿ ಒದಗಿಸುತ್ತಿರುವ ಯೋಜನೆ, ಸೌಲಭ್ಯಗಳ ಕುರಿತು ಪರಿಶೀಲಿಸಿ ಅವರು ಮಾತನಾಡಿದರು. ಒಟ್ಟಾರೆ 21 ರೀತಿಯ ಅಂಗವಿಕಲತೆಗಳನ್ನು ಗುರುತಿಸಲಾಗಿದ್ದು ಮಾನಸಿಕ ವಿಷಯಕ್ಕೆ ಸಂಬಂಧಿಸಿದವು ಹೆಚ್ಚಾಗಿವೆ. ಇಂದು ತ್ರಿಚಕ್ರ ವಾಹನಕ್ಕೆ ಪ್ರಾಧಾನ್ಯತೆ ನಿಲ್ಲಿಸಿ ಅಂಗವಿಕಲ ಮಕ್ಕಳ ಶಿಕ್ಷಣ ಸೌಲಭ್ಯಕ್ಕೆ, ಉದ್ಯೋಗ, ಕೌಶಲ್ಯ ವರ್ಧನೆ, ವೈದ್ಯಕೀಯ ಚಿಕಿತ್ಸೆ ಅವರ ಸಾಮಥ್ರ್ಯ ವೃದ್ಧಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳನ್ನು ಏರ್ಪಡಿಸಿ ಸ್ವಾವಲಂಬನೆ ಜೀವನ ನಡೆಸುವ ಕುರಿತು ವಿಶ್ವಾಸ ವೃದ್ಧಿಗೆ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮವನ್ನು ರೂಪಿಸಬೇಕು. ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಮಾತನಾಡಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಸೌಲಭ್ಯಕ್ಕೆ ರಾಜ್ಯ ಸಕರ್ಾರದಿಂದ ಪ್ರತ್ಯೇಕ ಅನುದಾನ ನೀಡುತ್ತಿದೆ. ಆದುದರಿಂದ ವಿವಿಧ ಸ್ಥಳೀಯ ಸಂಸ್ಥೆಗಳ ಜಿಲ್ಲಾ ಪಂಚಾಯತದಿಂದ ಹಾಗೂ ಸಂಸದ ಮತ್ತು ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನದ ಪ್ರಸ್ತಾವನೆಗಳನ್ನು ಸಲ್ಲಿಸದಿರಲು ನಿದರ್ೇಶನ ನೀಡಿದರು.
ಜಿಲ್ಲೆಯ ನಗರ ನಗರ ವ್ಯಾಪ್ತಿಯಲ್ಲಿ ವಿವಿಧ ರೀತಿ ವಿಕಲಚೇತನರ ನಿದರ್ಿಷ್ಟವಾಗಿ ಗುರುತಿಸುವಿಕೆಗೆ ಸಮೀಕ್ಷೆಗಳನ್ನು ನಡೆಸಲು ಉದ್ದೇಶಿಸಿದ್ದು ಈಗಾಗಲೇ ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಮಾದರಿಯಾಗಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಅದರ ವರದಿ ಪೂರ್ಣವಾಗಿ ತಯಾರಾದ ನಂತರ ಅದೇ ರೀತಿ ಉಳಿದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ರುದ್ರೇಶ ಮಾಹಿತಿ ನೀಡಿದರು.
1995 ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಅನುಷ್ಟಾನದ ಪರಿಣಾಮಕಾರಿ ಜಾರಿಗೆ ಪೂರಕವಾಗಿ 2016 ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಜಾರಿಗೆ ತರಲಾಗಿದೆ. ಹಕ್ಕು ಮತ್ತು ಸೌಲಭ್ಯಗಳ ಕುರಿತು ಸಾರ್ವಜನಿಕವಾಗಿ ಅದರಲ್ಲೂ ವಿಶೇಷವಾಗಿ ಅಂಗವಿಕಲರಲ್ಲಿ ಜಾಗೃತಿ ಮೂಡಿಸುವುದು ಕಾನೂನು ಜಾರಿಯ ಮುಖ್ಯ ಉದ್ದೇಶ ಈಡೇರಿಕೆಗೆ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ತ್ರೈಮಾಸಿಕಕ್ಕೊಮ್ಮೆ ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಸಭೆ ಜರುಗಿಸಿ ಪ್ರಗತಿ ಪರಿಶೀಲನೆ ಮಾಡಲು ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತರು ನಿದರ್ೇಶನ ನೀಡಿದರು. ಜಿಲ್ಲೆಯಲ್ಲಿ ತಾಲೂಕಾವಾರು ನಿದರ್ಿಷ್ಟ ವಿಕಲತೆಯುಳ್ಳ ಅಂಗವಿಕಲ ದತ್ತಾಂಶ ಸಂಗ್ರಹಣೆ ಮೊದಲಾಗಬೇಕು. ತದನಂತರ ಅವರ ಅವಶ್ಯಕತೆ ಅನುಗುಣವಾಗಿ ಸೌಲಭ್ಯ ನೀಡಲು ಅನುದಾನ ನಿಗದಿಪಡಿಸಲು ಸಾಧ್ಯವಾಗುತ್ತದೆ. ಸಾವಿರಾರು ವಿಕಲಚೇತನರು ವಿವಿಧ ಸೌಲಭ್ಯ ವಂಚಿತರಾಗಿದ್ದಾಗ ಅವರೆಲ್ಲರಿಗೂ ಒಂದಿಲ್ಲೊಂದು ರೀತಿಯ ಸಹಾಯ ಸಿಗುವಂತೆ ನಾವು ನಮ್ಮ ಕಾರ್ಯನಿರ್ವಹಣೆ, ಸೌಲಭ್ಯ ವಿತರಣೆ ವಿಧಾನವನ್ನು ಮಾಪರ್ಾಡು ಮಾಡಿಕೊಳ್ಳಬೇಕು. ತಾಲೂಕಾ ಹಾಗೂ ಗ್ರಾ. ಪಂ. ಮಟ್ಟದಲ್ಲಿರುವ ವಿವಿದೋದ್ದೇಶ ಪುನರ್ವಸತಿ, ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜವಾಬ್ದಾರಿ ಈ ನಿಟ್ಟಿನಲ್ಲಿ ಹೆಚ್ಚಿದ್ದು ತಮ್ಮ ವ್ಯಾಪ್ತಿಯ ಅಂಗವಿಕಲ ಮಕ್ಕಳು ಶಿಕ್ಷಣ, ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ , ಅರ್ಹ ವಿಕಲಚೇತನರಿಗೆ ಅಗತ್ಯದ ಸೌಲಭ್ಯ ಸಿಗುವಂತೆ ಸದಾ ಪ್ರಯತ್ನಶೀಲರಾಗಲು ಆಯುಕ್ತ ಎಸ್.ವಿ. ಬಸವರಾಜು ಮನವಿ ಮಾಡಿದರು.
ಸಭೆಯಲ್ಲಿ ವಿಕಲಚೇತನರಿಗೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿ.ಪಂ. ದ ಉದ್ಯೋಗ ಖಾತರಿ ಯೋಜನೆ, ಶಿಕ್ಷಣ , ಪೊಲೀಸ ಆರೋಗ್ಯ , ಜಿಲ್ಲಾಸ್ಪತ್ರೆಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಆಯುಕ್ತರು ವಿಸ್ತೃತ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನು ನಿಡಿದರು.
ರಾಜ್ಯ ಅಂಗವಿಕಲ ಅಧಿನಿಯಮದ ಸಹಾಯಕ ಆಯುಕ್ತ ಎಸ್.ಕೆ. ಪದ್ಮಾನಾಭ, ರಾಜ್ಯ ಸಲಹಾ ಸಮಿತಿ ಸಲಹೆಗಾರ ಬಿ. ಹಂಪಣ್ಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ. ಮಹೆಶ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಅಲ್ಲದೇ ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತಾಲಯ ಅಧಿಕಾರಿಗಳಾದ ಲಿಂಗಪ್ಪ, ಗುರು ಹಿರೇಮಠ, ಮಹಿಳಾ ಮತ್ತು ಮಕ್ಕಳ ಇಲಾಖೆಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ನಗರ ಪುರಸಭೆ ಪ.ಪಂ.ಗಳ ಮುಖ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಪುನರ್ವಸತಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆ ಅಧಿಕಾರಿ ಆಶು ನದಾಫ್ ಸರ್ವರನ್ನು ಸಭೆಗೆ ಸ್ವಾಗತಿಸಿದರು.