ಮುಟ್ಟಿನ ನೈರ್ಮಲ್ಯ ಮತ್ತು ಆರೋಗ್ಯವು ಮಹಿಳೆಯರ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ
Menstrual hygiene and health are essential for women's overall well-being.
ಲೋಕದರ್ಶನ ವರದಿ
ಯಮಕನಮರಡಿ 30: ಋತುಸ್ರಾವ ಎನ್ನುವುದು ಪ್ರತಿಯೊಬ್ಬ ಮಹಿಳೆ ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯ ಘನತೆ ಮತ್ತು ಸುರಕ್ಷತೆಯ ಮೂಲಭೂತ ಅವಶ್ಯಕತೆಯಾಗಿದೆ ಮುಟ್ಟಿನ ದಿನಗಳಲ್ಲಿ ಸೂಕ್ತ ಸ್ವಚ್ಚತೆ ಕಾಪಾಡಿಕೊಳ್ಳದಿದ್ದರೆ ಬ್ಯಾಕ್ಟಿರಿಯಾಗಳ ಉತ್ಪತ್ತಿ ಹೆಚ್ಚಾಗಿ ಗಂಭಿರ ಆರೋಗ್ಯ ಸಮಸ್ಯೆಗಳು ಹರಡುವ ಸಾಧ್ಯತೆ ಇರುತ್ತದೆ ಎಂದು ಹಿಡಕಲ್ ಡ್ಯಾಂ ನ ಶಕ್ತಿ ಸದನದ ಸಲಹಾಗಾರರಾದ ಸುಗಂಧಾ ಅಳ್ಳಟ್ಟಿ ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಹಾಗು ಗ್ರಾಮ ಪಂಚಾಯತ ಹೋಸಪೇಟ ಇವರ ಸಂಯುಕ್ತ ಆಶ್ರಯದಲ್ಲಿ ಋತು ನೈರ್ಮಲ್ಯ ದಿನಾಚರಣೆಯ ಅಂಗವಾಗಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗು ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಋತು ಚಕ್ರದ ಅವಧಿಯಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಬೇಕು ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸಿ ಸದೃಢರಾಗಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ನೀಲಕಂಠ ಕುಲಕರ್ಣಿ, ಸ್ವ ಸಹಾಯ ಸಂಘದ ಎಂಬಿಕೆ ಪೂರ್ಣಿಮಾ ಜುಮಾಯಿ, ಮಹಾನಂದಾ ಗೋಕಾರ, ಪವಿತ್ರಾ ಗೋಕಾವಿ ಹಾಗೂ ಮಂದಾಕನಿ ಹಟ್ಟಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 