ಹಾಲೆಂಡ್ ವಿರುದ್ಧ ಡ್ರಾ ಸಾಧಿಸಿ ಫೈನಲ್ಗೆ ಭಾರತ ಲಗ್ಗೆ

ಭಾರತ ಹಾಲೆಂಡ್​ ವಿರುದ್ಧ 1-1 ಅಂತರದಲ್ಲಿ ಡ್ರಾ ಸಾಧಿಸುವ ಮೂಲಕ ಫೈನಲ್​​ಗೆ ಪ್ರವೇಶ ಪಡೆದುಕೊಂಡಿದೆ

ಬ್ರೆಡಾ: ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯ ಲೀಗ್​​ನ ಕೊನೆಯ ಪಂದ್ಯದಲ್ಲಿ ಭಾರತ ಹಾಲೆಂಡ್​ ವಿರುದ್ಧ 1-1 ಅಂತರದಲ್ಲಿ ಡ್ರಾ ಸಾಧಿಸುವ ಮೂಲಕ ಫೈನಲ್​​ಗೆ ಪ್ರವೇಶ ಪಡೆದುಕೊಂಡಿದೆ.

 

   ಭಾರತದ ಪರ ಮನ್ದೀಪ್ ಸಿಂಗ್ 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ 55ನೇ ನಿಮಿಷದಲ್ಲಿ ಗೋಲು ಬಾರಿಸಿದ ಥಿಯರಿ ಬ್ರಿಂಕ್ಮನ್ ಪಂದ್ಯವನ್ನು 1-1 ರಿಂದ ಡ್ರಾಗೊಳಿಸಿದರು.


ಇನ್ನು ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೈನಾ ವಿರುದ್ಧ 2-3 ಅಂತರದಿಂದ ಸೋಲುಂಡಿತು. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ಕಾರಣ ಫೈನಲ್ಪ್ರವೇಶ ಪಡೆದುಕೊಂಡಿದೆ. ಇತ್ತ ಭಾರತ ತಾನೂ ಆಡಿರುವ ಐದು ಪಂದ್ಯಗಳಲ್ಲಿ 2 ಜಯ, 1 ಸೋಲು ಮತ್ತು  2ಡ್ರಾ ಕಂಡಿದ್ದು, ಇಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್​​ನಲ್ಲಿ ಸೆಣಸಾಟ ನಡೆಸಲಿದೆ