ಇಬ್ಬರು ಪುರುಷರು ಹಾಗೂ ಓರ್ವ ಯುವತಿ ಕಾಣೆ
Men and a young woman are missing
ಹಾವೇರಿ 28 : ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಣಕೂರ ಗ್ರಾಮದ 42 ವರ್ಷದ ಹಾಲೇಶ ನಿಂಗಪ್ಪ ಹೊಸಮನಿ 1 ಜನವರಿ 2022 ರಂದು, ತುಮ್ಮಿನಕಟ್ಟಿ ಗ್ರಾಮದ 26 ವರ್ಷದ ಪುಟ್ಟೇಶ ಅ ಪುಟ್ಟಸ್ವಾಮಿ ಲಕ್ಷ್ಮಣ ಮಿರಾಲಿ 18 ಡಿಸೆಂಬರ್ 2024 ರಂದು ಹಾಗೂ ಕುಸಗೂರ ಗ್ರಾಮದ 20 ವರ್ಷಧ ಯುವತಿ ಗಂಗವ್ವ ಸುಂಕಪ್ಪ ದುರುಮುರಗೇರ ಇವಳು 6 ಸೆಪ್ಟೆಂಬರ್ 2025 ರಂದು ಮನೆಯಿಂದ ಹೋದವರು ಕಾಣೆಯಾಗಿರುವುದಾಗಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹಾಲೇಶ ನಿಂಗಪ್ಪ ಹೊಸಮನಿ 5.5 ಅಡಿ ಎತ್ತರ, ಸದೃಢಮೈಕಟ್ಟು, ಗೋದಿಮೈಬಣ್ಣ, ದುಂಡು ಮುಖಹೊಂದಿದ್ದು, ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾನೆ. ಪುಟ್ಟೇಶ ಅ ಪುಟ್ಟಸ್ವಾಮಿ ಲಕ್ಷ್ಮಣ ಮಿರಾಲಿ 5.2 ಅಡಿ ಎತ್ತರ, ಬಡಕಲು ಮೈಕಟ್ಟು, ಕಪ್ಪು ಮೈಬಣ್ಣ ಅಗಲ ಮುಖಹೊಂದಿದ್ದು, ಬೂದು ಬಣ್ಣದ ಶರ್ಟ, ಗ್ರೇ ಕಲರ್ ಸ್ವೇಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಗಂಗವ್ವ ಸುಂಕಪ್ಪ ದುರುಮುರಗೇರ 4.5 ಅಡಿ ಎತ್ತರ, ಗಿಡ್ಡಮೂಗು, ಎಡಗೈ ಮೊಣಕೈ ಕೆಳಭಾಗದಲ್ಲಿ ಇಂಗ್ಲೀಷ್‌ನಲ್ಲಿ ಂಠಿಠಿಚಿರಿ ಅಂತಾ ಹಚ್ಚೆ ಗುರುತು ಇದೆ.
ಈ ಮೇಲ್ಕಂಡ ಪುರುಷ ಹಾಗೂ ಯುವತಿರ ಮಾಹಿತಿ ಲಭ್ಯವಾದಲ್ಲಿ ಹಲಗೇರಿ ಪೊಲೀಸ್ ಠಾಣೆ ಆರಕ್ಷಕ ಉಪ ನೀರೀಕ್ಷಕ ದೂ.08373-252333, ಮೊ.9480804554, ಕುಮಾರಪಟ್ಟಣಂ ಆರಕ್ಷಕ ವೃತ್ತ ನೀರೀಕ್ಷಕರ ದೂ.08373-266404, ಮೊ.9480804536, ರಾಣೇಬೆನ್ನೂರು ಉಪ ವಿಭಾಗ ಆರಕ್ಷಕ ಉಪ ಅಧೀಕ್ಷಕ ದೂ.08373-266311 ಮೊ.9480804521 ಸಂಪರ್ಕಿಸಬಹುದೆಂದು ಹಲಗೇರಿ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 