ಅಲೆಮಾರಿ ಸಮುದಾಯ ಸಚಿವರಿಗೆ ಮನವಿ

ಅಲೆಮಾರಿ ಸಮುದಾಯ ಸಚಿವರಿಗೆ ಮನವಿ  Memorandum to the Minister for Nomadic Communities

ಲೋಕದರ್ಶನ ವರದಿ 

ಹೊಸಪೇಟೆ, ಸೆ.17: ನಗರದ ತಾಲೂಕು ಕ್ರೀಡಾಂಗಣದ ಇಂದಿರಾಗಾಂಧಿ ಕಟ್ಟೆ ಹತ್ತಿರ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಮತ್ತು ವಿವಿಧ ಅಲೆಮಾರಿ ಸಂಘಟನೆಗಳ ಮುಖಂಡರು ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.  ಅಲೆಮಾರಿ ಸಮುದಾಯದ ಮುಖಂಡರು, ಅಲೆಮಾರಿ ಎಸ್ಸಿ/ಎಸ್ಟಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ‘ಸಣ್ಣಮಾರೆಪ್ಪ’ ಅವರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲು ಮನವಿ ಮಾಡಿದರು.