ಗುಂಡಕನಾಳದಲ್ಲಿ ವಾಲ್ಮೀಕಿ ಸಮುದಾಯದ ಮೇಲೆ ಹಲ್ಲೆ ಖಂಡಿಸಿ ಮನವಿ

 ಗುಂಡಕನಾಳದಲ್ಲಿ ವಾಲ್ಮೀಕಿ ಸಮುದಾಯದ ಮೇಲೆ ಹಲ್ಲೆ ಖಂಡಿಸಿ ಮನವಿ  Memorandum submitted condemning the attack on the Valmiki community in Gundakanala

ಲೋಕದರ್ಶನ ವರದಿ  

ವಿಜಯಪುರ, ಆ.23: ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ವಾಲ್ಮೀಕಿ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಸಮಾಜ ಕಲ್ಯಾಣ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತುರ್ತು ಮನವಿ ಸಲ್ಲಿಸಿದ್ದಾರೆ.  

ಜಮಖಂಡಿ ತಾಲೂಕಿನ ಗೋಠೆ ಗ್ರಾಮದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದ ಸಮೀಪ ಸತ್ಯಶೋಧಕ ಸಂಘ, ಕರ್ನಾಟಕ ಹಾಗೂ ಜಾತ್ಯತೀತ, ಬಹುತ್ವ ಕರ್ನಾಟಕ ಸಂಕಲ್ಪದ  ಸಹೋದರತ್ವ ಸಮಾವೇಶದ  ಸಂಗಮ’ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರಿಗೆ ಮನವಿ ಪತ್ರ ಹಸ್ತಾಂತರಿಸಲಾಯಿತು.  

ಕಳೆದ ಆಗಸ್ಟ್‌ 5ರಂದು ದುಷ್ಕರ್ಮಿಗಳ ಗುಂಪು ವಾಲ್ಮೀಕಿ ಸಮುದಾಯದ ನಿವಾಸಿಗಳ ಮೇಲೆ ಅಮಾನವೀಯ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಮುಖಂಡರು ಆರೋಪಿಸಿದರು. ಘಟನೆಯಲ್ಲಿ 10ರಿಂದ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಗೌಡಪ್ಪ ಬಡಿಗೇರ್ ನೇತೃತ್ವದ ನಿಯೋಗ ಆಗ್ರಹಿಸಿತು.