ಜಿಲ್ಲಾ ವಕೀಲರ ಸಂಘದ ಸದಸ್ಯತ್ವ ಪಡೆದ ಮೇಘರಾಜ ರೆಡ್ಡಿ. ಗೋನಾಳ

ಜಿಲ್ಲಾ ವಕೀಲರ ಸಂಘದ ಸದಸ್ಯತ್ವ ಪಡೆದ ಮೇಘರಾಜ ರೆಡ್ಡಿ. ಗೋನಾಳ   Megharaja Reddy has been granted membership of the District Bar Association. Gonal

ಜಿಲ್ಲಾ ವಕೀಲರ ಸಂಘದ ಸದಸ್ಯತ್ವ ಪಡೆದ ಮೇಘರಾಜ ರೆಡ್ಡಿ. ಗೋನಾಳ   

ಕೊಪ್ಪಳ  13: ಜಿಲ್ಲಾ ವಕೀಲರ ಸಂಘದಲ್ಲಿ  ಮೇಘರಾಜ ರೆಡ್ಡಿ ಜಿ.ಗೋನಾಳ್ ಅವರು  ವಕೀಲರ ಸಂಘದ ಸದಸ್ಯತ್ವವನ್ನು ಸೋಮವಾರದಂದು ಪಡೆದುಕೊಂಡರು.  ಈ ಸಂದರ್ಭದಲ್ಲಿ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಎ.ವಿ ಕಣಿವಿ. ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು. ಯುವ ನ್ಯಾಯವಾದಿ ಮೇಘರಾಜ್ ಗೋನಾಳ್ ಅವರಿಗೆ ಸದಸ್ಯತ್ವ ಪ್ರಮಾಣ ಪತ್ರವನ್ನು ನೀಡಿದರು.ನಂತರ ಸದಸ್ಯತ್ವ ಪ್ರಮಾಣ ಪತ್ರವನ್ನು ಸ್ವೀಕಾರ ಮಾಡಿದ ಮೇಘರಾಜ್ ರೆಡ್ಡಿ ವಕೀಲರು ಮಾಧ್ಯಮದೊಂದಿಗೆ ಮಾತನಾಡಿ ನಮ್ಮ ಜಿಲ್ಲಾ ವಕೀಲ ಸಂಘದಲ್ಲಿ ನನ್ನ ಸದಸ್ಯತ್ವ ನೊಂದಣಿಯಾಗಿದ್ದು ನನಗೆ ಸಂತೋಷ ಮೂಡಿಸಿದೆ. ಅದಕ್ಕಿನ್ನು ಹೆಚ್ಚಿನದಾಗಿ ನಮ್ಮ ಜಿಲ್ಲಾ ವಕೀಲರ ಸಂಘಟನೆಯಲ್ಲಿ ಹಿರಿಯ ವಕೀಲರು, ಹಾಗೂ ಸಾಕಷ್ಟು ಅನುಭವ ಜೀವಿಗಳಿದ್ದು ಸದಾ ಅವರ ಮಾರ್ಗದರ್ಶನ ಪಡೆಯುವ ಜೊತೆಗೆ ಅವರೊಂದಿಗೆ ಕರ್ತವ್ಯ ನಿರ್ವಹಿಸುವ ಭಾಗ್ಯ ನನಗೆ ದೊರೆತಿರುವ ಹೆಮ್ಮೆ ನನಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ಉತ್ತಮ ವಾಗ್ಮೀಯ ಹಿರಿಯ ವಕೀಲರು ಸಾಕಷ್ಟಿದ್ದು, ಅವರೊಂದಿಗೆ ನಾನು ಸಹ ಇಂದು ಕರ್ತವ್ಯ ನಿರ್ವಹಿಸುವ ಭಾಗ್ಯ ಅವಕಾಶ ಸಿಕ್ಕಿದ್ದು ನಾನು ಸಮಾಜ ಸೇವೆಯಲ್ಲಿ ತೊಡಗಿಸಸಿಕೊಳ್ಳಲು ಇದೊಂದು ಸುವರ್ಣಾವಕಾಶವನ್ನು  ಆರಾಧ್ಯ ದೈವ ಗವಿಸಿದ್ದೇಶ ಕರುಣಿಸಿದ್ದಾನೆ ಎಂದು ತಿಳಿಸಿದರು.