ಜೆಜೆಬಿವೈ, ಎಸ್‌ಬಿವೈ ನೋಂದಣಿಗೆ 20 ರಿಂದ ಮೆಗಾ ಅಭಿಯಾನ
Meeting with bank representatives Action plan for registration
ಬ್ಯಾಂಕ್ ಪ್ರತಿನಿಧಿಗಳೊಂದಿಗೆ ಸಭೆ ಽ ನೋಂದಣಿಗೆ ಕ್ರೀಯಾ ಯೋಜನೆ
ಬಾಗಲಕೋಟೆ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ನೋಂದಣಿಗೆ ಆಗಸ್ಟ 20 ರಿಂದ 25 ವರೆಗೆ ಮೆಗಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿ.ಪಂ ಸಿಇಓ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ವಿವಿಧ ಬ್ಯಾಂಕ್ ಪ್ರತಿನಿಧಿಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಅಭಿಯಾನದಲ್ಲಿ ಪ್ರತಿಯೊಂದು ಬ್ಯಾಂಕ್ ಶಾಖೆಗಳಲ್ಲಿ ತಲಾ 100 ಫಲಾನುಭವಿಗಳ ನೋಂದಣಿಗೆ ಗುರಿ ಹೊಂದಲಾಗಿದ್ದು, ನೋಂದಣಿಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ಗ್ರಾಮ ಪಂಚಾಯತ ಮಟ್ಟದಲ್ಲಿ ಹಮ್ಮಿಕೊಂಡ ನೋಂದಣಿ ಅಭಿಯಾನದಲ್ಲಿ ಪಂಚಾಯತ ಮಟ್ಟದ ಅಧಿಕಾರಿಗಳ ಸಹಕಾರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಗ್ರಾಮ ಪಂಚಾಯತಿವಾರು ಅಭಿಯಾನ ನಡೆಸಲು ನಬಾರ್ಡನಿಂದ ಅನುಮೋದನೆ ಪಡೆದುಕೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಣಿ ಮತ್ತು ಪ್ರಧಾನಮಂತ್ರಿಗಳ ಜನಧನ ಯೋಜನೆ ಖಾತೆಗಳನ್ನು ತೆರೆಯುವ ಬಗ್ಗೆ ಪದವಿ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ಸಹ ಹಮ್ಮಿಕೊಳ್ಳಲಾಗುತ್ತಿದೆ. ಭಾರತೀಯ ಅಂಚೆ ಪಾವತಿ ಬ್ಯಾಂಕ್ ಶಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಶಿಬಿರ ನಡೆಸಲು ತಿಳಿಸಿದ ಅವರು ಮುಖ್ಯವಾಗಿ ಗೃಹಲಕ್ಷ್ಮೀ ಫಲಾನುಭವಿಗಳು, ಕೆಸಿಸಿ ರೈತರು, ಮುದ್ರಾ ಯೋಜನೆ ಫಲಾನುಭವಿಗಳು, ಎನ್.ಆರ್.ಎಲ್.ಎಂ, ಎಸ್‌ಎಚ್‌ಜಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ಸಿಬ್ಬಂದಿಗಳು, ಕಟ್ಟಡ ಕೆಲಸಗಾರರು ಹಾಗೂ ನರೇಗಾ ಕೆಲಸಗಾರರನ್ನು ನೋಂದಣಿಗೆ ಗುರಿಯಾಗಿಟ್ಟುಕೊಳ್ಳಲು ತಿಳಿಸಿದರು.
ಜೆಜೆಬಿಐ ಮತ್ತು ಎಸ್‌ಬಿವೈ ಯೋಜನೆಗಳ ಪ್ರಗತಿಗೆ ಈಗಾಗಲೇ 45 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಮಹಾರಾಷ್ಟ್ರಾ ಬ್ಯಾಂಕ್, ಕೆನರಾ ಬ್ಯಾಂಕ್‌ಗಳು ಪ್ರಗತಿ ಸಾಧಿಸಿದ ಹಿನ್ನಲೆಯಲ್ಲಿ ಅಭಿನಂದನೆಗಳನ್ನು ಸಹ ಸಲ್ಲಿಸಿದರು. ಉಳಿದ ಬ್ಯಾಂಕ್‌ಗಳು ಇನ್ನು 10 ದಿನಗಳ ಅವಧಿಯಲ್ಲಿ ಪ್ರಗತಿ ಸಾಧಿಸಲು ಕ್ರಮವಹಿಸಬೇಕು. ಸರಕಾರ ಯೋಜನೆಗಳ ಅನುಷ್ಠಾನದಲ್ಲಿ ಬೇಜವಾಬ್ದಾರಿತನ ಸಲ್ಲದು. ನಿಮ್ಮ ಪ್ರವೃತ್ತಿ ಬದಲಾವಣೆ ಮಾಡಿಕೊಂಡು ನಿಗದಿಪಡಿಸಿದ ದಿನದಂದು ಪ್ರಗತಿ ಸಾಧಿಸಿ ತೋರಿಸಲು ಸೂಚಿಸಿದರು.
ಪ್ರಗತಿಯಲ್ಲಿ ಹಿಂದುಳಿದ ಬ್ಯಾಂಕ್‌ಗಳು ಮುಂದಿನ 10 ದಿನಗಳಲ್ಲಿ ಪ್ರಗತಿ ಸಾಧಿಸಿದ ಬಗ್ಗೆ ವರದಿ ನೀಡಬೇಕು. ಪ್ರಗತಿ ವರದಿಯ ಬಗ್ಗೆ ಬರುವ ಆಗಸ್ಟ 29 ರಂದು ಮತ್ತೆ ಸಭೆ ಕರೆಯಲಾಗುವುದು. ಪ್ರಗತಿ ಸಾಧಿಸದೇ ಇದ್ದಲ್ಲಿ ಸೂಕ್ತಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಆದ್ದರಿಂದ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕು. ಇಲ್ಲವಾದರೆ ಯೋಜನೆಗಳ ಸಮರ್ಕ ಅನುಷ್ಠಾನ ಸಾರ್ಧಯವಾಗುವದಿಲ್ಲ. ಇದನ್ನು ಅರಿವು ಕೆಲಸ ಮಾಡಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ನಬಾರ್ಡ ಬ್ಯಾಂಕ್‌ನ ಡಿಡಿಎಂ ಮಂಜುನಾಥ ರೆಡ್ಡಿ, ಜಿಲ್ಲಾ ಅಗ್ರಣಿ ಬ್ಯಾಂಕನ ವ್ಯವಸ್ಥಾಪಕ ರಾಜಶೇಖರ ಹೂಗಾರ ಸೇರಿದಂತೆ ವಿವಿಧ ಬ್ಯಾಂಕ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸರಕಾರದ ವಿವಿಧ ಯೋಜನೆಗಳ ಸಮರ್ಕ ಅನುಷ್ಠಾನಕ್ಕೆ ಹಮ್ಮಿಕೊಂಡ ಅಭಿಯಾನಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 5 ಬ್ಯಾಂಕ್ ಶಾಖೆ ಮತ್ತು ಬ್ಯಾಂಕ್‌ಗಳಿಗೆ ಮೆಚ್ಚುಗೆ ಪತ್ರ ನೀಡಲಾಗುವುದು.
ಸಿ ಶಶಿಧರ ಕುರೇರ, ಜಿ.ಪಂ ಸಿಇಓ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 